Belagavi News In Kannada | News Belgaum

ಗಂಗಾ ಕಲ್ಯಾಣ ಯೋಜನೆಯಡಿ ಅರ್ಜಿ ಆಹ್ವಾನ

ಬಾಗಲಕೋಟೆ: ಕರ್ನಾಟಕ ಉಪ್ಪಾರ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನ ಗಂಗಾ ಕಲ್ಯಾಣ ಯೋಜನೆಯ ಸೌಲಭ್ಯಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಉಪ್ಪಾರ ಸುದಾಯಕ್ಕೆ ಸೇರಿದವರಾಗಿದ್ದು, ಚಾಲ್ತಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು.
ಕರ್ನಾಟಕ ರಾಜ್ಯದವರಾಗಿದ್ದು, 18 ರಿಂದ 55 ವರ್ಷದೊಳಗಿರಬೇಕು. ವಾರ್ಷಿಕ ಆದಾಯ ಗ್ರಾಮೀಣ ಪ್ರದೇಶದವರಿಗೆ 98 ಸಾವಿರ ರೂ., ನಗರಪ್ರದೇಶದವರಿಗೆ 1.20 ಲಕ್ಷ ರೂ.ಗಳ ಒಳಗಿರಬೇಕು.
ಕುಟುಂಬದ ಒಬ್ಬರಿಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಮಾರ್ಚ 10 ಆಗಿದೆ ಎಂದು ಉಪ್ಪಾರ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ. 08354-236216ಗೆ ಸಂಪರ್ಕಿಸಬಹುದಾಗಿದೆ.//////