Belagavi News In Kannada | News Belgaum

ಲಕ್ಷ್ಮಣ ಸವದಿ ಅವರ ಜನ್ಮದಿನ : ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದ ಜಲಕುಂಭ ಲೋಕಾರ್ಪಣೆ ಸಂತೋಷ ಸಾವಡಕರ ನಿಸ್ವಾರ್ಥ ಸೇವೆಗೆ ಚಿದಾನಂದ ಸವದಿ ಮೆಚ್ಚುಗೆ

 ಅಥಣಿ :  ಅಥಣಿ ಪುರಸಭಾ ಚುನಾವಣೆಯಲ್ಲಿ  ವಾರ್ಡ್ ನಂ. 3 ರಿಂದ ಆಯ್ಕೆಯಾದ ನೂತನ ಪುರಸಭಾ ಸದಸ್ಯ ಸಂತೋಷ ಸಾವಡಕರ  ಚುನಾವಣೆಗಳು ಮುಗಿದು ಕೆಲವೇ ದಿನಗಳಲ್ಲಿ   ತಾವು ನೀಡಿದ ಭರವಸೆಯಂತೆ ಸು. 5 ಸಾವಿರ ಲೀಟರ್ ಸಾಮರ್ಥ್ಯದ  ಜಲ ಕುಂಭವನ್ನು ಸ್ಥಾಪಿಸಿದ್ದಾರೆ. ಇಂದು  ಮಾಜಿ ಡಿಸಿಎಂ ಹಾಗೂ ವಿಧಾನಪರಿಷತ್ ಸದಸ್ಯರಾದ  ಲಕ್ಷ್ಮಣ ಸವದಿ ಅವರ 62ನೇ ಜನ್ಮದಿನದ ನಿಮಿತ್ಯ  ಸಾರ್ವಜನಿಕರಿಗೆ ಲೋಕಾರ್ಪಣೆ  ಮಾಡುತ್ತಿರುವುದು ಉತ್ತಮ ಕಾರ್ಯವಾಗಿದೆ  ಎಂದು ಯುವ ಧುರೀಣ ಚಿದಾನಂದ ಸವದಿ  ಮೆಚ್ಚುಗೆ ವ್ಯಕ್ತಪಡಿಸಿದರು.
 ಅವರು ಬುಧವಾರ ಇಲ್ಲಿನ ಶಂಕರ ನಗರದಲ್ಲಿ ನೂತನ ಜಲ ಕುಂಬದ ಲೋಕಾರ್ಪಣೆಗೊಳಿಸಿ  ಸುದ್ದಿಗಾರರೊಂದಿಗೆ ಮಾತನಾಡಿದರು. ಸಂತೋಷ್ ಸಾವದಕರ ಅವರ  ನಿಸ್ವಾರ್ಥ ಸೇವೆ ಮೆಚ್ಚುವಂತದ್ದು, ಚುನಾವಣೆ ಸಂದರ್ಭದಲ್ಲಿ  ಈ ಕುಟುಂಬಗಳ ಸಮಸ್ಯೆಯನ್ನು ಅರ್ಥ ಮಾಡಿಕೊಂಡು  ಶೀಘ್ರಗತಿಯಲ್ಲಿ ಅವರಿಗೆ ಕುಡಿಯುವ ನೀರು ಒದಗಿಸುವುದು ಉತ್ತಮ ಕಾರ್ಯವಾಗಿದೆ.  ಅದರಂತೆ  ರಸ್ತೆ ಸುಧಾರಣೆ  ಕೂಡ ಮಾಡಿರುತ್ತಾರೆ   ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು ಜೀವಜಲ ಅತ್ಯಮೂಲ್ಯವಾದದ್ದು, ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
 ಪುರಸಭಾ ಸದಸ್ಯ ಸಂತೋಷ ಸಾವಡಕರ ಮಾತನಾಡಿ  ಅಥಣಿಯ ಐತಿಹಾಸಿಕ ಕೆರೆಗಳ ಪರಿಸರದಲ್ಲಿ  ವಾಸವಾಗಿರುವ  ಬುಡಕಟ್ಟು ಜನಾಂಗದ 70 ಕುಟುಂಬಸ್ಥರು  ಅನೇಕ  ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆ  ಎದುರಿಸುತ್ತಿದ್ದಾರೆ. ಚುನಾವಣಾ ಸಂದರ್ಭದಲ್ಲಿ  ನಾನು  ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಮತಯಾಚನೆಗೆ ಬಂದಾಗ ಈ ಸಮಸ್ಯೆ  ನನ್ನ ಗಮನಕ್ಕೆ ಬಂದಿತ್ತು. ಚುನಾವಣಾ ಪ್ರಚಾರದ ವೇಳೆ  ನಾನು ಆಯ್ಕೆಯಾಗಿ  ಬಂದರೆ ಕೇವಲ 15 ದಿನಗಳಲ್ಲಿ ಈ ಕಾಮಗಾರಿ  ಮಾಡಿಸುತ್ತೇನೆ ಎಂದು ಇಲ್ಲಿನ ಸುಮಾರು 70 ಕುಟುಂಬಗಳಿಗೆ   ಭರವಸೆ ನೀಡಿದಂತೆ  ತುರ್ತು ಅವಶ್ಯವಿರುವ  ಕುಡಿಯುವ ನೀರಿಗಾಗಿ  ಈ ಜಲಕುಂಭ ಸ್ಥಾಪನೆ ಮಾಡುತ್ತಿದ್ದೇನೆ. ಇಲ್ಲಿನ ನಿವಾಸಿ  ವೈದ್ಯರಾದ  ವಿಶ್ವನಾಥ ಚಿಮ್ಮಡ ಅವರು  ತಮ್ಮ ಬೋರ್ವೆಲ್ ನಿಂದ ಉಚಿತ ನೀರು ಕೊಡಲು ಮುಂದೆ ಬಂದಿದ್ದಾರೆ.
 ಅವರಿಗೂ ಕೂಡ ನಾನು  ಈ ಸಂದರ್ಭದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ.  ಈ ಜಲ ಕುಂಭವನ್ನು ನಮ್ಮ ನೆಚ್ಚಿನ ನಾಯಕರಾದ  ಲಕ್ಷ್ಮಣ ಸವದಿ ಅವರ ಹುಟ್ಟು ಹಬ್ಬದ ದಿವಸ  ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಬೇಕೆಂಬ ಸಂಕಲ್ಪ ಹೊಂದಿದ್ದು, ಅದರಂತೆ ಇಂದು ಲೋಕಾರ್ಪಣೆ ಮಾಡಿದ್ದೇವೆ.  ಸಾರ್ವಜನಿಕರು ಈ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಸಂಚಾರಕ್ಕೆ ತೊಂದರೆಯಾಗಿದ್ದು ಇಲ್ಲಿನ ರಸ್ತೆಯನ್ನು ಕೂಡ  ಸಂಚಾರಕ್ಕೆ ಅನುಕೂಲವಾಗುವಂತೆ ನಲ್ಲಿ ಸುಧಾರಣೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಪುರಸಭೆ ಅನುದಾನವನ್ನು ಸದ್ಬಳಕೆ ಮಾಡಿಕೊಂಡು  ಚರಂಡಿ ದುರಸ್ತಿ, ರಸ್ತೆಗಳ ಸುಧಾರಣೆ, ಉದ್ಯಾನವನಗಳ ಸುಧಾರಣೆ, ಬೀದಿ ದೀಪ  ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು  ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
 ಈ ವೇಳೆ  ಪುರಸಭೆ ಸದಸ್ಯ ಕಲ್ಮೇಶ್ ಮಡ್ಡಿ, ಡಾ.ವಿಶ್ವನಾಥ ಚಿಮ್ಮಡ, ಡಾ.ಸಾಧಿಕ ಗಲಗಲಿ, ವಿನೋದ್ ಸಾವಡಕರ, ವಿಶಾಲ ಸಗರಿ, ಮಹಾಂತೇಶ್ ಠಕ್ಕಣ್ಣವರ, ಸುಶಾಂತ  ಪತ್ತಾರ, ಮಹಾದೇವ ಸಗರಿ, ಶಿವಾನಂದ ಪಾಟೀಲ, ಅಭಯ ಸಗರೆ, ಸುಶಾಂತ ಸಾಳುಂಕೆ, ಸಚೀನ ಮಿರ್ಜಿ, ಸೌರಭ ಪಾಟೀಲ, ಅನೀಲ ಮಹಾಜನ, ವೀರಣ್ಣ ಹಳ್ಳಿ, ನಾಗಪ್ಪ ಬಾಗಡಿ, ನಾಗೇಶ ಬಾಗಡಿ, ರಾಹುಲ ಬಳ್ಳೋಳ್ಳಿ, ಈಶ್ವರ ಕೋಳಿ, ಸಿದ್ದಪ್ಪ ಸತ್ತಿ,ಗಣೇಶ ಪಾಟೀಲ, ಆನಂದ ಮಾಳಿ ಇನ್ನಿತರರು ಉಪಸ್ಥಿತರಿದ್ದರು.