Belagavi News In Kannada | News Belgaum

ನಾಳೆ ಕಾಂಗ್ರೆಸ್ ನಾಯಕರಿಂದ ಪಾದಯಾತ್ರೆ

ಬೆಂಗಳೂರು: ಕೆಂಪು ಕೋಟೆಯಲ್ಲಿ ಭಗವಾಧ್ವಜ ಹಾರಿಸುವ ಕುರಿತು ಸಚಿವ ಈಶ್ವರಪ್ಪ ಅವರ ಹೇಳಿಕೆ ವಿರೋಧಿಸಿ ಹೋರಾಟಕ್ಕಿಳಿದಿರುವ ಕಾಂಗ್ರೆಸ್ ರಾಜ್ಯಪಾಲರ ಭೇಟಿಗೆ ಮುಂದಾಗಿದೆ. ನಾಳೆ  ಸಂಜೆ 4 ಗಂಟೆಗೆ ಈಶ್ವರಪ್ಪ ವಜಾಕ್ಕೆ ಒತ್ತಾಯಿಸಿ ರಾಜಭವನಕ್ಕೆ ಕಾಂಗ್ರೆಸ್ ನಿಯೋಗ ತೆರಳಲಿದೆ.

ಅಲ್ಲದೆ ಶಿವಮೊಗ್ಗ ಪ್ರಕರಣವನ್ನೂ ರಾಜಭವನದ ಅಂಗಳಕ್ಕೆ ಕೊಂಡೊಯ್ಯಲಿದ್ದಾರೆ ಎಂದು ತಿಳಿದು ಬಂದಿದೆ. ಸಚಿವರ ಹೇಳಿಕೆ ಹಾಗೂ ಕಾನೂನು ಸುವ್ಯವಸ್ಥೆ ನಿರ್ವಾಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ಪಾಲರಿಗೆ ದೂರು ಕೊಡಲು ನಿರ್ಧಾರ ಮಾಡಿದ್ದು, ವಿಧಾನಸೌಧದಿಂದ ರಾಜಭವನದ ವರೆಗೆ ಕೈ ನಾಯಕರ ಪಾದಯಾತ್ರೆ ಮೂಲಕ ರಾಜಭವನ ಚಲೋ ಹಮ್ಮಿಕೊಂಡಿದ್ದಾರೆ.