Belagavi News In Kannada | News Belgaum

ಯುಕೆ ಹೆಲ್ತ್ ಸೆಕ್ಯುರಿಟಿ ಏಜೆನ್ಸಿಯಿಂದ ಗುತ್ತಿಗೆ ಪಡೆದ ಹಿಂದೂಜಾ ಗ್ಲೋಬಲ್ ಸೊಲ್ಯೂಷನ್ಸ್

 

ಬೆಳಗಾವಿ : ಬ್ರಿಟನ್ ನಾಗರಿಕರಿಗೆ ನಿರ್ಣಾಯಕಗ್ರಾಹಕ ಸೇವಾ ಬೆಂಬಲವನ್ನುಒದಗಿಸಲು ಯುಕೆ ಆರೋಗ್ಯ ಭದ್ರತಾ ಸಂಸ್ಥೆ (ಯುಕೆಎಚ್‍ಎಸ್‍ಎ) ಹಿಂದುಜಾ ಅಂಗಸಂಸ್ಥೆ ಎಚ್‍ಜಿಎಸ್‍ಯುಕೆ ಲಿಮಿಟೆಡ್ ಅನ್ನು ಆಯ್ಕೆ ಮಾಡಿದೆ ಎಂದು ಹಿಂದೂಜಾಗ್ಲೋಬಲ್ ಸೊಲ್ಯೂಷನ್ಸ್ (ಎಚ್‍ಜಿಎಸ್) (ಬಿಎಸ್‍ಇ ಮತ್ತುಎನ್‍ಎಸ್‍ಇನಲ್ಲಿ ಲಿಸ್ಟ್ ಮಾಡಲಾಗಿದೆ) ಪ್ರಕಟಿಸಿದೆ.

ಎರಡು ವರ್ಷಗಳ ಆರಂಭಿಕಅವಧಿಗೆ, ಮತ್ತಷ್ಟು ವಿಸ್ತರಿಸುವಆಯ್ಕೆಯೊಂದಿಗೆ ಮಾಡಿಕೊಂಡಿರುವ ಈ ಪಾಲುದಾರಿಕೆಯು ಕಳೆದ ವಾರದಆರಂಭದಲ್ಲಿಕಾರ್ಯಾರಂಭಗೊಂಡಿದೆ ಮತ್ತುಒಪ್ಪಂದದಅವಧಿಯಾದ್ಯಂತ 211 ದಶಲಕ್ಷ ಪೌಂಡ್ (ರೂ. 2,100 ಕೋಟಿಗಳು) ಮೌಲ್ಯದ್ದಾಗಿದ್ದು, ಬ್ರಿಟನ್‍ನಾದ್ಯಂತ 2,000 ಕ್ಕೂ ಹೆಚ್ಚುವರ್ಕ್ ಹೋಂ ಹುದ್ದೆಗಳನ್ನು ಬಳಸಿಕೊಳ್ಳಬಹುದು.

ಎನ್‍ಎಚ್‍ಎಸ್ ಕೋವಿಡ್-19 ಪರೀಕ್ಷೆ ಮತ್ತು ಪತ್ತೆ ಮಾಡುವಿಕೆಗೆ ಜವಾಬ್ದಾರವಾಗಿದೆ ಮತ್ತು ಈ ಒಪ್ಪಂದವು ಕೋವಿಡ್-19 ಮತ್ತು, ಏಕಾಏಕಿ ಭೀಕರ ಜ್ವರ ಅಥವಾ ಹೊಸ ಸಾಂಕ್ರಾಮಿಕದಂತಹ ಇತರ ಆರೋಗ್ಯ ಸುರಕ್ಷತೆಯ ಅಪಾಯಗಳಿಗೆ ಭವಿಷ್ಯದ ಸಂಪರ್ಕ ಪತ್ತೆ ಅಗತ್ಯಗಳಿಗೆ ಸಹಾಯ ಮಾಡುತ್ತದೆ. ಒಪ್ಪಂದದ ಅನ್ವಯ ಪ್ರಕಟಿಸಲಾದ ವೆಚ್ಚವು ವೆಚ್ಚ ಮಾಡುವ ಪ್ರಮಾಣಕ್ಕೆ ಹೋಲಿಸಿದರೆ ಗರಿಷ್ಠ ಅಥವಾಒಟ್ಟು ವೆಚ್ಚ ಕಡಿಮೆಯಾಗಬಹುದು.

ಕೆಲವು ಪ್ರಮುಖ ಗ್ರಾಹಕರೊಂದಿಗೆ ನಮ್ಮ ಸಾರ್ವಜನಿಕ ವಲಯದ ವ್ಯಾಪಾರವು ಈ ಯಶಸ್ಸಿನ ಕಥೆಯ ಪ್ರಮುಖ ಭಾಗವಾಗಿದೆ. ಈ ಲಂಬವಾದ, ಕೇಂದ್ರೀಕೃತ ಮಾರಾಟತಂತ್ರ, ಕ್ಲೌಡ್‍ತಂತ್ರಜ್ಞಾನ ಮತ್ತು ವರ್ಕ್‍ಹೋಮ್ ಡೆಲಿವರಿ ನಿಯೋಜನೆಯಲ್ಲಿ ನಮ್ಮ ಪರಿಣತಿಯನ್ನು ಬಲಪಡಿಸುವಲ್ಲಿ ನಾವು ಮಾಡಿದ ಗಮನಾರ್ಹ ಹೂಡಿಕೆಗಳು ಈ ಬೇಡಿಕೆಯ ಮಾರುಕಟ್ಟೆಯಲ್ಲಿ ನಮ್ಮ ಉಪಸ್ಥಿತಿಯನ್ನು ಹೆಚ್ಚಿಸಿವೆ. ಯುಕೆಎಚ್‍ಎಸ್‍ಎ ತೊಡಗಿಸಿಕೊಳ್ಳುವಿಕೆಯು ಬೆಳವಣಿಗೆ ಮತ್ತುಸಂಕೀರ್ಣತೆಯದೃಷ್ಟಿಕೋನದಿಂದಎರಡು ಅಂಶಗಳ ಆಧಾರದಲ್ಲೂಯುಕೆ ವ್ಯವಹಾರಕ್ಕೆ ಒಂದುಅದ್ಭುತವಾದ ಸೇರ್ಪಡೆಯಾಗಿದೆ ಎಂದು ಎಚ್ ಜಿ ಎಸ್‍ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಮೂಹ ಸಿಇಓ ಪಾರ್ಥದೇಸರ್ಕರ್ ಹೇಳಿದ್ದಾರೆ.

ಎಚ್‍ಜಿಎಸ್‍ಯುರೋಪ್ ಸಿಇಒ ಆಡಮ್ ಫೋಸ್ಟರ್ ಮಾತನಾಡಿ, ಸಾಂಕ್ರಾಮಿಕರೋಗದಿಂದ ಹೊರಬರಲು ಮತ್ತು ಚೇತರಿಸಿಕೊಳ್ಳುವ ಪ್ರಯತ್ನದಲ್ಲಿಎಚ್‍ಜಿಎಸ್‍ಯುಕೆ ಸರ್ಕಾರವನ್ನು ಬೆಂಬಲಿಸುತ್ತದೆ ಎನ್ನುವ ಬಗ್ಗೆ ನನಗೆ ಹೆಮ್ಮೆಇದೆ. ಈ ಅವಕಾಶವನ್ನುಗೆಲ್ಲುವುದುಯುಕೆ ವ್ಯವಹಾರದ ಕಳೆದ 10 ವರ್ಷಗಳ ವಿಸ್ತರಣೆಗೆ ಮತ್ತು ನಾವು ಅಭಿವೃದ್ಧಿಪಡಿಸಿದ ಮತ್ತುಗುರುತಿಸಲ್ಪಟ್ಟಿರುವ ಸಾರ್ವಜನಿಕ ವಲಯದ ಪರಿಣತಿಗೆ ಸಂದ ಗೌರವವಾಗಿದೆ ಎಂದು ಹೇಳಿದರು.

ಯುಕೆಎಚ್‍ಎಸ್‍ಎಜೊತೆಗಿನ ನಮ್ಮ ಪಾಲುದಾರಿಕೆ ಮತ್ತುಇದು ಎಚ್‍ಎಸ್‍ಜಿಗೆ ನೀಡಿದ ಜವಾಬ್ದಾರಿಯನ್ನು ಲಘುವಾಗಿ ಪರಿಗಣಿಸಲಾಗುತ್ತಿಲ್ಲ. ನಾವು ಅವಶ್ಯಕತೆಯ ನೈಜತೆಯನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತುಅತ್ಯಂತ ಗುಣಮಟ್ಟದ ಸೇವೆಯನ್ನು ಒದಗಿಸುವ ನಮ್ಮ ಸಾಮಥ್ರ್ಯದಲ್ಲಿ ವಿಶ್ವಾಸ ಹೊಂದಿದ್ದೇವೆ ಎಂದು ಎಚ್‍ಜಿಎಸ್‍ಯುಕೆ ಮುಖ್ಯ ಕಂದಾಯ ಅಧಿಕಾರಿ ಗ್ರಹಾಂ ಬ್ರೌನ್ ಹೇಳಿದರು.///