ಪಾಳು ಬಾವಿಯಲ್ಲಿ ಅಪರಿಚಿತ ಶವ ಪತ್ತೆ

ಅಥಣಿ: ತಾಲೂಕಿನ ತಾಂವಶಿ-ನಾಗನೂರು ರಸ್ತೆಯ ಮಾರ್ಗದ ಪಾಲು ಬಾವಿಯಲ್ಲಿ ಅಪರಿಚಿತ ಶವಯೊಂದು ಪತ್ತೆಯಾಗಿದ್ದು, ಪೊಲೀಸ್ ರು ಸ್ಥಳದಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ವ್ಯಕ್ತಿ ನಾಲ್ಕು ದಿನಗಳ ಹಿಂದೆ ಬಾವಿಯಲ್ಲಿ ಬಿದ್ದಿರುವ ಶಂಕಿಸಲಾಗಿದೆ. ಮೃತದೇಹ ತೇಲಾಡುವುದನ್ನು ಸ್ಥಳೀಯರು ಗಮನಿಸಿ, ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ. ಶವವನ್ನು ಹೊರತೆಗೆದು ತನಿಖೆ ಮುಂದುವರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.