Belagavi News In Kannada | News Belgaum

ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಆರು ಮಂದಿ ಸಾವು, ಹಲವರಿಗೆ ಗಾಯ

ನವದೆಹಲಿ: ಪಟಾಕಿ ತಯಾರಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟಗೊಂಡ ಪರಿಣಾಮ ಆರು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಇಂದು ಹಿಮಾಚಲ್ ಪ್ರದೇಶದ ಉನಾ ಜಿಲ್ಲೆಯ ಫ್ಯಾಕ್ಟರಿಯೊಂದರಲ್ಲಿ ನಡೆದಿದೆ.

ಹಿರಿಯ ಅಧಿಕಾರಿಗಳ ಮಾಹಿತಿ ಪ್ರಕಾರ, ಉನಾ ಜಿಲ್ಲೆಯ ಬಾಥು ಕೈಗಾರಿಕಾ ವಲಯದಲ್ಲಿ ಈ ಘಟನೆ ನಡೆದಿದೆ. ಸ್ಫೋಟದಲ್ಲಿ ಗಾಯಗೊಂಡವರನ್ನು ಉನಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದೆ. ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.

ಸಾವನ್ನಪ್ಪಿರುವವರು ಮತ್ತು ಗಾಯಗೊಂಡವರಲ್ಲಿ ಬಹುತೇಕ ಮಂದಿ ವಲಸೆ ಕಾರ್ಮಿಕರಾಗಿದ್ದಾರೆ ಎಂದು ಉನಾ ಡೆಪ್ಯುಟಿ ಕಮಿಷನರ್ ರಾಘವ್ ಶರ್ಮಾ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಪೊಲೀಸರು ಮತ್ತು ರಕ್ಷಣಾ ಸಿಬಂದಿ ಬಿಡು ಬಿಟ್ಟಿದ್ದಾರೆ.