Belagavi News In Kannada | News Belgaum

ಎಮ್ಮೆ ಮೈ ತೊಳೆಯಲು ಹೋಗಿ ಕೆರೆಗೆ ಬಿದ್ದು ಸಹೋದರರಿಬ್ಬರು ಸಾವು

ತುಮಕೂರು: ಎಮ್ಮೆಗಳಿಗೆ ಮೈತೊಳೆಯಲು ಹೋಗಿ ಕೆರೆಗೆ ಬಿದ್ದು ಸಹೋದರರಿಬ್ಬರು ಮೃತಪಟ್ಟ ಘಟನೆ ಶಿರಾ ತಾಲ್ಲೂಕಿನ ಮದಲೂರು ಗ್ರಾಮದಲ್ಲಿ ನಡೆದಿದೆ.

ಎಂ. ದಾಸರಹಳ್ಳಿ ಗ್ರಾಮದ ಗಂಗರಾಜು (27) ಹಾಗೂ ಹನುಮಂತರಾಜು (21) ಮದಲೂರು ಚಿಕ್ಕ ಕೆರೆಯಲ್ಲಿ ಕಾಲು ಜಾರಿ ಬಿದ್ದು ಮೃತ ಪಟ್ಟ ಸಹೋದರರು. ಎಮ್ಮೆಗಳಿಗೆ ಮೈ ತೊಳೆಯಲು ಹೋದಾಗ ಹನುಮಂತರಾಜು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾನೆ.

ಆತನನ್ನು ರಕ್ಷಿಸಲು ಹೋದ ಅಣ್ಣ ಗಂಗರಾಜು ಸಹ ನೀರಲ್ಲಿ ಮುಳುಗಿ ಮೃತ ಪಟ್ಟಿದ್ದಾನೆ. ಕೆರೆಯಲ್ಲಿರುವ ಆಳವಾದ ಗುಂಡಿಗಳಿಗೆ ಬಿದ್ದ ಪರಿಣಾಮ ಅವರನ್ನು ರಕ್ಷಿಸಲು ಆಗಲಿಲ್ಲ ಎಂದು ಹೇಳಲಾಗುತ್ತಿದೆ. ಶಿರಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////