Belagavi News In Kannada | News Belgaum

ಸ್ಫೋಟದಲ್ಲಿ ಮಗು ಸೇರಿ ಇಬ್ಬರ ಸಾವು-ಐವರಿಗೆ ಗಾಯ

ಇಂಫಾಲ್: ಮಣಿಪುರದಲ್ಲಿ ಭಾರೀ ಸ್ಫೋಟ ನಡೆದ ಪರಿಣಾಮ 6 ವರ್ಷದ ಮಗು ಸೇರಿದಂತೆ ಇಬ್ಬರ ಸಾವು, 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಣಿಪುರದ ಚುರಾಚಂದಪುರ ಜಿಲ್ಲೆಯಲ್ಲಿ ನಿನ್ನೆ ಸಂಜೆ ಮಹಾ ಸ್ಫೋಟ ನಡೆದಿದ ಈ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿರುವುದು ಪತ್ತೆಯಾಗಿದೆ.

ಈ ಸ್ಫೋಟಕ್ಕೆ ಕಾರಣಗಳೇನು ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜಿಲ್ಲಾ ಪೊಲೀಸರ ಪ್ರಕಾರ, ಎಸ್‍ಟಿಸಿ-ಬಿಎಸ್‍ಎಫ್ ರಸ್ತೆಯಲ್ಲಿರುವ ಗ್ಯಾಂಗ್‍ಪಿಮುಯಲ್ ಗ್ರಾಮದ ಮನೆಯೊಂದರಲ್ಲಿ ನಿನ್ನೆ ರಾತ್ರಿ 7:30ಕ್ಕೆ ಗ್ಯಾಸ್ ಸ್ಫೋಟವಾಗಿದೆ. ಈ ಸ್ಫೋಟದಲ್ಲಿ ಮಕ್ಕಳು ಸೇರಿದಂತೆ ಏಳು ಮಂದಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಮಾಹಿತಿಯನ್ನು ನೀಡಿದ್ದಾರೆ.

ಘಟನಾ ಸ್ಥಳದಲ್ಲಿ ಸ್ಫೋಟಗೊಂಡ ಶೆಲ್‍ನ ಭಾಗಗಳು ಮತ್ತು ಕೆಲವು ಸ್ಪ್ಲಿಂಟರ್ ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸ್ಥಳದ ಸಮೀಪವಿರುವ ಗಡಿ ಭದ್ರತಾ ಪಡೆ ಗುಂಡಿನ ದಾಳಿಗೆ ಹತ್ತಿರವಿರುವ ಕೆಲವರು ಶೆಲ್‍ಗಳನ್ನು ಎತ್ತಿಕೊಂಡಿರುವುದರಿಂದ ಈ ಸ್ಫೋಟ ಸಂಭವಿಸಿರಬಹುದೆಂದು ಪೊಲೀಸರು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.ಮೃತರನ್ನು ಮಂಗ್ಮಿನ್ಲಾಲ್(6) ಮತ್ತು ಲಾಂಗಿನ್ಸಾಂಗ್(22) ಎಂದು ಗುರುತಿಸಲಾಗಿದೆ.

ಗಾಯಗೊಂಡವರು ಲಿಯಾನ್ಸುಲಾಲ್(18), ಮನ್ಲಾಡಿಯಾ (28), ಸಿಯಾಂಬೋಯ್ (19), ಮುವಾನ್ಬಿಯಾಕ್ಮುವಾನ್(15) ಮತ್ತು ತಂಗ್ಬಿಯಾಕ್ಲುನ್ (34) ಎಂದು ಮಾಹಿತಿಯನ್ನು ಕೊಟ್ಟಿದ್ದಾರೆ. ಗಾಯಾಳುಗಳಲ್ಲಿ ಕೆಲವರಿಗೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆಯಿದ್ದು, ಅವರನ್ನು ಇಂಫಾಲ್‍ಗೆ ಕಳುಹಿಸಲಾಗುತ್ತಿದೆ./////