Belagavi News In Kannada | News Belgaum

ಮಹಾಶಿವರಾತ್ರಿ : ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳನ್ನು ಬಂದ್‍ಗೆ ಸೂಚನೆ

ಕರ್ನಾಟಕ-ಮಹಾರಾಷ್ಟ್ರದಲ್ಲಿ ಮತ್ತೆ ಎಲ್ಲ ಸಾರಿಗೆ ಸೇವೆಗಳು ಪುನಃ ಪ್ರಾರಂಭ

ಬೆಳಗಾವಿ,ಫೆ.28: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಜಿಲ್ಲೆಗಳು ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳಿಗೆ ಎಲ್ಲ ಸಾರಿಗೆ ಸೇವೆಗಳನ್ನು ಪುನಃ ಪ್ರಾರಂಭಿಸಲಾಗಿದೆ.
ಹುಬ್ಬಳ್ಳಿ-ವಿಜಯಪುರ ಮಾರ್ಗದಲ್ಲಿ ಪ್ರಯಾಣ ಕರ ಬಹುದಿನದ ಬೇಡಿಕೆಯಂತೆ ಸೀಮಿತ ನಿಲುಗಡೆ ಕಲ್ಪಿಸುವದರೊಂದಿಗೆ 6 ಸರತಿಗಳ ಮಲ್ಟಿ ಏಕ್ಸಲ್ ವೋಲ್ವೊ ಸಾರಿಗೆ ಸೇವೆಯನ್ನು ಮತ್ತು ಧಾರವಾಡ ಗ್ರಾಮೀಣ ಘಟಕದಿಂದ ಧಾರವಾಡ – ಕರ್ನೂಲ್ ಎಸಿ-ಸ್ಲೀಪರ್ ಸಾರಿಗೆ ಸೇವೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ನಿರ್ಭಂಧಗಳನ್ನು ಸಡಿಲಗೊಳಿಸಲಾಗಿದೆ. ಆದ್ದರಿಂದ ಕಳೆದ ಒಂದು ವಾರದಿಂದ ಮಹಾರಾಷ್ಟ್ರ ರಾಜ್ಯದ ಮುಂಬಯಿ, ಪೂನಾ, ಶಿರಡಿ, ನಾಸಿಕ್, ಕೊಲ್ಲಾಪೂರ, ಇಚಲಕರಂಜಿ, ಸಾಂಗ್ಲಿ, ಮೀರಜ್, ಸೊಲ್ಲಾಪುರ ಸೇರಿದಂತೆ ಪ್ರತಿಷ್ಠಿತ ಮತ್ತು ವೇಗದೂತ ಸಾರಿಗೆಗಳನ್ನು ಪುನಃ ಪ್ರಾರಂಭಿಸಲಾಗಿದೆ.
ದೂರದ ಮಾರ್ಗಗಳಲ್ಲಿ ಪ್ರತಿಷ್ಠಿತ ಮತ್ತು ವೇಗದೂತ ಸಾರಿಗೆಗಳಲ್ಲಿ ಏSಖಖಿಅ  mobile app  www.ksrtc.

ನ್ನು ಬಳಸುವದರ ಮೂಲಕ ಮುಂಗಡ ಟಿಕೇಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ. ಕೋವಿಡ್ ಪೂರ್ವದಲ್ಲಿ ಇರುವಂತೆ ಎಲ್ಲ ಸಾಮಾನ್ಯ, ವೇಗದೂತ ಮತ್ತು ಪ್ರತಿಷ್ಠಿತ ಸಾರಿಗೆಗಳನ್ನು ಪುನಃ ಪ್ರಾರಂಭಿಸಿರುವದರಿಂದ ಸಾರ್ವಜನಿಕ ಪ್ರಯಾಣ ಕರು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ./////

ಮಾ. 9 ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾರ್ಷಿಕ ಘಟಿಕೋತ್ಸವ

ಬೆಳಗಾವಿ,ಫೆ.28 : ರಾಣ ಚನ್ನಮ್ಮ ವಿಶ್ವವಿದ್ಯಾಲಯದ 9ನೇ ವಾರ್ಷಿಕ ಘಟಿಕೋತ್ಸವವನ್ನು ಮಾರ್ಚ್ 9 ರಂದು ಬೆಳಿಗ್ಗೆ 11 ಗಂಟೆಗೆ ಸುವರ್ಣಸೌಧದ ಸಭಾಂಗಣದಲ್ಲಿ ಜರುಗಿಸಲಾಗುವುದು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ರಾಜ್ಯದ ಘನತೆವೆತ್ತ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ.
ನವದೆಹಲಿಯ ಪ್ರೊ. ವಿರೇಂದ್ರ ಸಿಂಗ್ ಚವ್ಹಾಣ, ವಿಜ್ಞಾನಿ ಹಾಗೂ ವಿಶ್ರಾಂತಅಧ್ಯಕ್ಷರು, ಕಾರ್ಯನಿರ್ವಾಹಕ ಸಮಿತಿ, ರಾಷ್ಟ್ರೀಯ ಮೌಲ್ಯಾಂಕನ ಪರಿಷತ್ತು ಅವರು ಘಟಿಕೋತ್ಸವ ಭಾಷಣವನ್ನು ನಡೆಸಿಕೊಡಲಿದ್ದಾರೆ ಎಂದು ಬೆಳಗಾವಿ ರಾಣ ಚನ್ನಮ್ಮ ವಿಶ್ವವಿದ್ಯಾಲಯ ಪರೀಕ್ಷಾ ವಿಭಾಗದ ಕುಲಸಚಿವರು(ಮೌಲ್ಯಮಾಪನ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಮಹಾಶಿವರಾತ್ರಿ : ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳನ್ನು ಬಂದ್‍ಗೆ ಸೂಚನೆ

ಬೆಳಗಾವಿ,ಫೆ.28: ಮಹಾಶಿವರಾತ್ರಿ ನಿಮಿತ್ಯ ಮಾರ್ಚ್ 1 ರಂದು ಬೆಳಗಾವಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳನ್ನು ಬಂದು ಮಾಡಲು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಸೂಚನೆ ನೀಡಿದ್ದಾರೆ.
ಕಸಾಯಿಖಾನೆ/ಮಾಂಸಾಹಾರಿ ಅಂಗಡಿಗಳ ಮಾಲೀಕರುಗಳು ಮಂಗಳವಾರರಂದು ಮಹಾಶಿವರಾತ್ರಿ ನಿಮಿತ್ಯ ತಮ್ಮ ಅಂಗಡಿಗಳನ್ನು ಬಂದು ಮಾಡಿ ಸಹಕರಿಸಬೇಕು. ಒಂದು ವೇಳೆ ಉಲ್ಲಂಘನೆ ಮಾಡಿರುವದು ಕಂಡು ಬಂದರೆ ಅಂತಹ ಮಾಲೀಕರುಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

ಉಚಿತ ವೃತ್ತಿ ಕೌಶಲ್ಯ ತರಬೇತಿ

ಬೆಳಗಾವಿ,ಫೆ.28 : ಶಿಕ್ಷಣ ಮಂತ್ರಾಲಯ ನವ-ದೆಹಲಿ (MHRD)ಇವರ ವತಿಯಿಂದ ಕೋವಿಡ್-19 ರ ಸಂದರ್ಭದಲ್ಲಿ ಶಾಲೆಗೆ ದಾಖಲಾಗದೇ ಇರುವ ವಿದ್ಯಾರ್ಥಿಗಳು, ಶಾಲಾ ಶಿಕ್ಷಣವನ್ನು ಬಿಟ್ಟಿರುವ ವಿದ್ಯಾರ್ಥಿಗಳು ಹಾಗೂ ಶಾಲೆಯಿಂದ ಹೊರಗುಳಿದಿರುವ 15 ರಿಂದ 45 ರ ವಯೋಮಾನದ ಅಭ್ಯರ್ಥಿಗಳಿಗೆ ಆಯ್ದ ಕೌಶಲ್ಯಗಳನ್ನು ಒದಗಿಸಿ ಅವರಿಗೆ ಔದ್ಯೋಗಿಕ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಔದ್ಯೋಗಿಕರಣ ಇಲಾಖೆಗಳ ಜಂಟಿ ಸಹಯೋಗದೊಂದಿಗೆ““Skill Hub Initiative” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಎನ್.ಎಸ್.ಕ್ಯೂ.ಎಫ್ ಶಾಲೆಗಳಲ್ಲಿ ಲಭ್ಯವಿರುವ ಪ್ರಯೋಗಾಲಯ ಹಾಗೂ ಉಪಕರಣಗಳನ್ನು ಬಳಸಿಕೊಂಡು ವೃತ್ತಿಕೌಶಲ್ಯವನ್ನು ನೀಡುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆ ರಾಮದುರ್ಗ.    (1.Beauty & wellness  2. Information & Technology sector    ಹಾಗೂ ಸರ್ಕಾರಿ ಸರದಾರ್ಸ್ ಪ್ರೌಢ ಶಾಲೆ ಬೆಳಗಾವಿ ನಗರ.    (1.Auto Mobile, 2. Beauty & Wellness  ಗಳು) ಶಾಲೆಗಳನ್ನು ಆಯ್ಕೆ ಮಾಡಲಾಗಿದೆ.
ಶಾಲಾ ಅವಧಿ ಪೂರ್ವ ಅಥವಾ ನಂತರ ಹಮ್ಮಿಕೊಳ್ಳುವ ತರಬೇತಿಗೆ ಆಸಕ್ತ ಅಭ್ಯರ್ಥಿಗಳು ಈ ಎರಡೂ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಶಿಕ್ಷಕರು, ಸರ್ಕಾರಿ ಸರದಾರ್ಸ್ ಪ್ರೌಢ ಶಾಲೆ ಬೆಳಗಾವಿ ನಗರ ಮೊ: 9481656100, 8970680670 ಮತ್ತು ಮುಖ್ಯ ಶಿಕ್ಷಕರು, ಸರ್ಕಾರಿ ಪ್ರೌಢ ಶಾಲೆ ರಾಮದುರ್ಗ ಮೊ: 7829268612, 9380002551 ಗೆ ಸಂಪರ್ಕಿಸಬಹುದು.//////