Belagavi News In Kannada | News Belgaum

ಸಮತಾ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು : ವಿಜಯಲಕ್ಷ್ಮಿ ವಿ,

ಬೆಳಗಾವಿ:  : “ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳಿಗೆ ವೈಜ್ಞಾನಿಕ ಆಲೋಚನೆ ಮತ್ತು ಚಿಂತನೆಗಳನ್ನು ಬೆಳೆಸಬೇಕಾದರೆ ಅವರಲ್ಲಿ ಪ್ರಶ್ನೆ ಮಾಡಿ ಒಪ್ಪಿಕೊಳ್ಳುವ ಮನೋಭಾವ ಬೆಳೆಸಬೇಕು. ನಿಸರ್ಗದ ಸಹಜ ಘಟನೆಗಳನ್ನು ಮನರಂಜನೆ ಅಥವಾ ಭಾವನಾತ್ಮಕವಾಗಿ ನೋಡದೇ ಅವುಗಳ ಕ್ರಿಯಾ ಮೂಲಗಳ ಕಾರಣ ತಿಳಿಯುವ ಆಸಕ್ತಿ ಅವರಲ್ಲಿ ಅರಳಿಸಿದರೆ ಅದೇ ಮಕ್ಕಳು ಭವಿಷ್ಯದ ವಿಜ್ಞಾನಿಗಳಾಗಬಲ್ಲರು” ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಂಕರ ಬಾಗೇವಾಡಿ ಅಭಿಪ್ರಾಯ ಪಟ್ಟರು.
ನಗರದ ಹೊರವಲಯದ ಕಣಬರಗಿಯ ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯಲ್ಲಿ ಜರುಗಿದ ‘ರಾಷ್ಟ್ರೀಯ ವಿಜ್ಷಾನ ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶ ಸ್ವಾವಲಂಬನೆಯಾಗಬೇಕಿದೆ. ಹೀಗಾಗಿ ನಮ್ಮ ಮಕ್ಕಳi ಅಂಥ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವಂತಾಗಲಿ” ಎಂದರು.
‘ಡಾ. ಸಿ.ವಿ. ರಾಮನ್ ಅವರ ಜೀವನ ಸಾಧನೆ’ ಕುರಿತು ಉಪನ್ಯಾಸ ನೀಡಿದ ಶಾಲೆಯ ವಿಜ್ಞಾನ ಶಿಕ್ಷಕಿ ವಿ. ವಿಜಯಲಕ್ಷ್ಮಿ ಅವರು, “ನಮ್ಮ ಕರ್ನಾಟಕ ರಾಜ್ಯದ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಡಾ. ಸಿ.ವಿ.ರಾಮನ್ ಅವರು 1928 ರ ಫೆಬ್ರುವರಿ 28 ರಂದು ‘ಬಣ್ಣದ ಚದುರುವಿಕೆ’ (ರಾಮನ್ ಇಫೆಕ್ಟ್) ಕುರಿತು ತಮ್ಮ ಸಂಶೋಧನಾ ಪ್ರಭಂದ ಮಂಡಿಸಿದರು. ಇದೇ ಸಂಶೋಧನೆಗಾಗಿ ರಾಮನ್ನರಿಗೆ ಭೌತಶಾಸ್ತ್ರ ವಿಭಾಗದಲ್ಲಿ 1930 ರಲ್ಲಿ ನೋಬೆಲ್ ಪ್ರಶಸ್ತಿ ದೊರೆಯಿತು. ಅದು ಏಷ್ಯಾ ಖಂಡಕ್ಕೆ ಭೌತಶಾಸ್ತ್ರದಲ್ಲಿ ದೊರೆತ ಮೊಟ್ಟಮೊದಲ ನೋಬೆಲ್ ಪ್ರಶಸ್ತಿ. ರಾಮನ್ ಅವರ ಸಂಶೋಧನೆಯ ಸವಿನೆನಪಿಗಾಗಿ ಭಾರತ ಸರ್ಕಾರವು 1987 ರಲ್ಲಿ ಫೆಬ್ರುವರಿ 28 ನ್ನು ‘ರಾಷ್ಟ್ರೀಯ ವಿಜಾÐನ ದಿನಾಚರಣೆ’ಯನ್ನಾಗಿ ಘೋಷಿಸುವ ಮೂಲಕ ಡಾ.ಸಿ.ವಿ. ರಾಮನ್‍ರಿಗೆ ಗೌರವ ಸಲ್ಲಿಸಿತು. ಅದರ ಮುಖ್ಯ ಉದ್ದೇಶ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದ ಶಿಕ್ಷಣ ಪದ್ಧತಿಯಲ್ಲಿ ಪ್ರಯೋಗಶೀಲತೆ ಕಡಿಮೆಯಿದೆ. ವಿದ್ಯಾರ್ಥಿಳಿಗೆ ಅಂಕಗಳಾಧಾರಿತ ಉದ್ಯೋಗ ಅವಕಾಶಕ್ಕಿಂತ ಪ್ರತಿಭೆಯಾಧಾರಿತ ಉದ್ಯೋಗ ಸೃಷ್ಟಿಯಾಗಬೇಕು. ಆ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ರೂಪಗೊಂಡರೆ ಮಾತ್ರ ಅದು ಸಾಧ್ಯ” ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಯಾರಿಸಿದ ಪ್ರಾಯೋಗಿಕ ವಿಜ್ಞಾನ ಮಾದರಿಗಳ ಸ್ಪರ್ಧೆ ಹಾಗೂ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯದರ್ಶಿ ರೇಣುಕಾ ಮಜಲಟ್ಟಿ, ಪ್ರಾಂಶುಪಾಲೆ ತೇಜಸ್ವಿನಿ ಬಾಗೇವಾಡಿ, ಶಾಂತಾ ಮೋದಿ, ಮಲಿಕಜಾನ ಗದಗಿನ, ತೇಜಸ್ವಿನಿ ನಾಯ್ಕರ, ಪೂಜಾ ಪಾಟೀಲ, ಅರುಣಾ ಪಾಟೀಲ, ಅಭಿನವ ಬಾಗೇವಾಡಿ, ಪ್ರಜ್ವಲ ಕೋಳಿ, ಯೋಗೇಶ ಪೋತೆನ್ನವರ, ಚೇತನ ಗುತ್ತಿ , ಶಾಲಾ ಮಕ್ಕಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ಶ್ರೀದೇವಿ ನಂದ್ಯಾಗೋಳ ಸ್ವಾಗತಿಸಿದರು, ಜಯಶ್ರೀ ನಾಯಕ ನಿರೂಪಿಸಿದರು. ರಿಯಾ ಕೋಲ್ಕಾರ ವಂದಿಸಿದರು.

[ಫೋಟೊ ಕ್ಯಾಪ್ಶನ್ : ಡಾ. ಸಿ.ವಿ. ರಾಮನ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಅಧ್ಯಕ್ಷ ಶಂಕರ ಬಾಗೇವಾಡಿ, ರೇಣುಕಾ ಮಜಲಟ್ಟಿ, ತೇಜಸ್ವಿನಿ ಬಾಗೇವಾಡಿ, ಶಾಂತಾ ಮೋದಿ, ಮಲಿಕಜಾನ ಗದಗಿನ, ತೇಜಸ್ವಿನಿ ನಾಯ್ಕರ, ಪೂಜಾ ಪಾಟೀಲ, ಅರುಣಾ ಪಾಟೀಲ ಮುಂತಾದವರಿದ್ದಾರೆ}