Belagavi News In Kannada | News Belgaum

ಹುಣಸಗಿ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ ಜಯಂತಿ ಆಚರಣೆ

ಹುಣಸಗಿ : ಪಟ್ಟಣದ ಸರಕಾರಿ ಪದವಿ ಕಾಲೇಜು ಸಮೀಪವಿರೂವ ವೀರೇಂದ್ರ ಪಾಟೀಲ್ ವೃತ್ತದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ವೀರೇಂದ್ರ ಪಾಟೀಲ್ ಅವರ 98ನೇ ಜಯಂತಿಯನ್ನು ಹುಣಸಗಿ ಪಟ್ಟಣದ ಯುವ ಮುಖಂಡರು ಆಚರಣೆ ಮಾಡಿದರು. ವೃತ್ತಕ್ಕೆ ತೆಂಗಿನ ಪರಕಿ ದೊಡ್ಡದಾದ ಹಾರಗಳಿಂದ ಅಲಂಕಾರ ಮಾಡಲಾಗಿತ್ತು.

 

ಈ ಸಂಧರ್ಭದಲ್ಲಿ ಮಾತನಾಡಿದ ಯುವ ಮುಖಂಡ ಆರ್,ಎಮ್,ರೇವಡಿ ಶ್ರೀ ವೀರೇಂದ್ರ ಪಾಟೀಲ್ ಅವರು ಶ್ರೇಷ್ಟ ರಾಜಕಾರಣ , ಮುತ್ಸದಿಗಳು, ಚತುರ ಸಂಸದೀಯ ಪಟುಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಹುಟ್ಟಿಬೆಳೆದು ಸ್ವಪ್ರಯತ್ನ, ಪ್ರಾಮಾಣ ೀಕತೆಯಿಂದ ಹಾಗೂ ಸದ್ಗುಣಗಳನ್ನು ಮೈಗುಡಿಸಿಕೊಂಡು ಒಬ್ಬ ವರ್ಚಸ್ವಿ ರಾಜಕಾರಣ ಯಾಗಿ ಬೆಳೆದರು ಎಂದರು. ನಂತರ ಮಾತನಾಡಿದ ಮುಖಂಡ ಹೊನ್ನಕೇಶವ ದೇಸಾಯಿ ಕರ್ನಾಟಕದ ಇತಿಹಾಸದಲ್ಲಿ

ಶಾಶ್ವತವಾದ ಸ್ಥಾನ ಗಳಿಸಿದ ಶ್ರೀ ವೀರೇಂದ್ರ ಪಾಟೀಲ್‍ರ ಬದುಕು ಮುಂದಿನ ಜನಾಂಗಕ್ಕೆ ತುಂಬಾ ಪ್ರಯೋಜನಕಾರಿಯಾಗುವಂತದು ಹಾಗೂ ನಮ್ಮ ತಾಲೂಕಿನಲ್ಲಿರುವ ಬಸವ-ಸಾಗರ ಜಲಾಶಯಕ್ಕೇ ಇವರ ಕೊಡುಗೆ ಅಪಾರವಾದದ್ದು ಎಂದರು. ಈ ಸಂಧರ್ಭದಲ್ಲಿ ಪ್ರಮುಖರಾದ ಶಿವನಗೌಡ ಪಾಟೀಲ್, ಅನಿಲ ಸಾಹುಕಾರ್ ಬಳಿ, ಶೀವರಾಜ್ ದೇಸಾಯಿ, ಬಸವರಾಜ್ ಶೇವಟೀ, ಮಂಜುನಾಥ ಬಳಿ, ಸುನೀಲ್ ಸಾಹು ಚಂದಾ, ಮಹಾಂತೇಶ, ಶಿವಲಿಂಗ ಪಟ್ಟಣಶೆಟ್ಟಿ, ಪ್ರಭು, ರಮೇಶ ವಾಲಿ, ಅಮೃತರಾವ್ ದೇಸಾಯಿ, ನಿಂಗಪ್ಪ ಆಲಾಳ್, ನಾಧಿರ್ ಬೇಗ್, ಲತೀಪ್, ಬಸವರಾಜ್ ಆಲಾಳ್, ನಿಂಗಣ್ಣ ಗುತ್ತೇದಾರ್, ರುದ್ರು ಪಡಶೆಟ್ಟಿ, ರಾಜು ಬಳಿ, ಕಿರಣಕುಮಾರ ದೇಸಾಯಿ ಸೇರಿದಂತೆ ಅನೇಕರು ಇದ್ದರು.