Belagavi News In Kannada | News Belgaum

ವಿವಾಹಿತ ಮಹಿಳೆ ಅನುಮಾನಸ್ಪದವಾಗಿ ಸಾವು

ಬಳ್ಳಾರಿ: ನಗರದ ಹಂದ್ರಾಳ ಕಾಲೋನಿಯ ಡಿಸಿ ಕ್ಯಾಂಪ್‌ನ ಮನೆಯೊಂದರಲ್ಲಿ ಗೃಹಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

ಸುನೀತಾ(24) ಅನುಮಾನಸ್ಪದವಾಗಿ ಸಾವನಪ್ಪಿದ ಗೃಹಿಣಿ. ಕುತ್ತಿಗೆಗೆ ಹಗ್ಗ ಬಿಗಿದ ಸ್ಥಿತಿಯಲ್ಲಿ ಸುನೀತಾ ಶವ ಪತ್ತೆಯಾಗಿದೆ.

ಬಳ್ಳಾರಿಯ ಸುರೇಶ್​ ಆಂಧ್ರದ ಆದೋನಿ ಮೂಲದ ಸುನೀತಾ 5 ವರ್ಷದ ಹಿಂದೆ ವಿವಾಹವಾಗಿದ್ದರು. ಮೃತ ಗೃಹಿಣಿ ಮೂರ್ತಿ ಎಂಬಾತರೊಡನೆ ಅನೈತಿಕ ಸಂಬಂಧ ಹೊಂದಿದ್ದರು ಅಂತಾ ಸುರೇಶ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಮೃತ ಸುನೀತಾ ಹಾಗೂ ಮೂರ್ತಿ ಆಂಧ್ರದ ಆಧೋನಿಯಲ್ಲಿ ಅಕ್ಕಪಕ್ಕದ ನಿವಾಸಿಗಳಾಗಿದ್ದರು. ತನಗಿಂತ ಮೂರು ವರ್ಷ ಚಿಕ್ಕ ವಯಸ್ಸಿನ ಮೂರ್ತಿಗೆ ತನ್ನನ್ನು ಗಂಡನಿಂದ, ದೂರ ಕರೆದುಕೊಂಡು ಹೋಗುವಂತೆ ಸುನೀತಾ ಕೇಳಿದ್ದಾಗಿ ಆರೋಪಿಸಲಾಗಿದೆ.

ಹೀಗಾಗಿ ಸದ್ಯ ಮೂರ್ತಿಯೇ ಕೊಲೆ ಮಾಡಿರೋದಾಗಿ ಸುರೇಶ್​ ಕುಟಂಬದವರು ಶಂಕೆ ವ್ಯಕ್ತಪಡಿಸಿದ್ದು, ಬಳ್ಳಾರಿಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ./////