Belagavi News In Kannada | News Belgaum

ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕ್‍ಗಳಿಗೆ ಕೋವಿಡ್ ರಿಲೀಫ್ ಪ್ಯಾಕೇಜ್

ಮಾ.4 ರಂದು ನೊಂದಣ ಪ್ರಕ್ರಿಯೆ

ಬೆಳಗಾವಿ, ಮಾ.2 : ಕೊವಿಡ್-19 ಪ್ರವಾಸೋದ್ಯಮ ವಲಯಕ್ಕೆ ತೀವ್ರವಾದ ಹೊಡೆತವನ್ನು ನೀಡಿದ್ದು. ಇದರಿಂದ ಅಪಾರವಾದ ನಷ್ಟವನ್ನು ಅನುಭವಿಸಿದ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಮನರಂಜನಾ ಪಾರ್ಕಗಳನ್ನು ತೆರೆಯಲು ಮತ್ತು ನಿರ್ವಹಣೆ ಮಾಡಲು ರಾಜ್ಯ ಸರ್ಕಾರವು ಪ್ರೋತ್ಸಾಹದಾಯಕ ಕ್ರಮಗಳನ್ನು ಕೈಗೊಂಡಿದೆ. ಈ ಪ್ರಸ್ತುತ ಆರ್ಥಿಕ ವರ್ಷವು ಮುಕ್ತಾಯ ಗೊಳ್ಳುತ್ತಿರುವದರಿಂದ ಸರ್ಕಾರವು ನೀಡಲಾದ ಕೋವಿಡ ರಿಲೀಫ್ ಪ್ಯಾಕೇಜ್ ಅನ್ನು ಪಡೆಯಲು ಪ್ರವಾಸೋದ್ಯಮ ಇಲಾಖೆಯು ನೊಂದಣ ಪ್ರಕ್ರಿಯೆಯನ್ನು ಶೀಘ್ರಗೊಳಿಸಲು ಮಾರ್ಚ್ 4 ರಂದು ಬೆಳಗಾವಿಯ ರಾಮದೇವ ಹೋಟೇಲ್‍ನಲ್ಲಿ ನೊಂದಣ ಶಿಬಿರವನ್ನು ಹಮ್ಮಿಕೊಂಡಿದೆ.

2021-22ನೇ ಹಣಕಾಸಿನ ವರ್ಷದಲ್ಲಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಮತ್ತು ಮನರಂಜನಾ ಪಾರ್ಕ್‍ಗಳ ಶೇ.50. ಆಸ್ತಿ ತೆರಿಗೆಯನ್ನು ಮಾತ್ರ ಪಾವತಿ ಮಾಡಬೇಕಿದ್ದು, ಉಳಿದ ಶೇ.50. ರಷ್ಟನ್ನು ರಿಯಾಯಿತಿ ಹಾಗೂ ಎಪ್ರಿಲ್, ಮೇ, ಜೂನ್-2021 ತಿಂಗಳಲ್ಲಿ ವಿದ್ಯೂಚ್ಚಕ್ತಿ ಡಿಮಾಂಡ/ಪಿಕ್ಸಡ್ ಶುಲ್ಕವನ್ನು ಪಾವತಿ ಮಾಡುವದರಿಂದ ವಿನಾಯಿತಿ ನೀಡಲಾಗಿದೆ.
ಈ ವಿನಾಯಿತಿ ಪಡೆಯಲು ಇಲಾಖೆಯ ಅಧಿಕೃತ ಜಾಲತಾಣವಾದ    www.karnatakatourism.org  ಮೂಲಕ ಏಖಿಖಿ ಈ ಅಡಿ ನೊಂದಣ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ನೊಂದಣ ವಿಶೇಷ ಶುಲ್ಕ 500 ರೂ.ಗಳನ್ನು ಮಾತ್ರ ನಿಗದಿಗೊಳಿಸಿ, ಪರವಾನಗಿ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಿ ಇಲಾಖೆಯಿಂದ ಪರವಾನಗಿ ನೀಡಲಾಗುತ್ತಿರುತ್ತದೆ.

ಈ ಶಿಬಿರದಲ್ಲಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್, ಮತ್ತು ಮನರಂಜನಾ ಪಾರ್ಕ್‍ಗಳ ಮಾಲೀಕರು ಪಾಲ್ಗೊಂಡು ತಮ್ಮ ಸಂಸ್ಥೆಗಳ ನೊಂದಣ ಯನ್ನು ಇಲಾಖೆಯಲ್ಲಿ ಮಾಡಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣ ಸಂಖ್ಯೆ: 0831-2470879 ಹಾಗೂ ಮೊಬೈಲ ನಂಬರ್: 9591778824 ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ./////

 

ಮೋಟರ್ ರಿವೈಂಡಿಂಗ್ ಹಾಗೂ ಪಂಪ್ ಸೆಟ್ ರಿಪೇರ್ ತರಬೇತಿ

ಬೆಳಗಾವಿ, ಮಾ.2 : ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿಆರ್‍ಸೆಟಿ) ವತಿಯಿಂದ ಬೆಳಗಾವಿ ಜಿಲ್ಲೆಯ ಗ್ರಾಮೀಣ ಯುವಕ, ಯುವತಿಯರಿಗೆ ಮಾರ್ಚ್ 21 ರಿಂದ ಏಪ್ರಿಲ್ 19ರ ವರೆಗೆ 30 ದಿನಗಳ ಅವಧಿಯವರೆಗೆ ಉಚಿತ ಮೋಟರ್ ರಿವೈಂಡಿಂಗ್ ಹಾಗೂ ಪಂಪ್ ಸೆಟ್ ರಿಪೇರ್ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಭಾಗವಹಿಸಲಿರುವ ಅಭ್ಯರ್ಥಿಗಳು 18 ರಿಂದ 40 ವರ್ಷದ ವಯೋಮಿತಿಯಲ್ಲಿರಬೇಕು, ತರಬೇತಿ ಪಡೆದ ನಂತರ ಸ್ವ ಉದ್ಯೋಗ ಕೈಗೊಳ್ಳಲು ಸಿದ್ಧರಿರಬೇಕು. ತರಬೇತಿಯು ಉಚಿತವಾಗಿದ್ದು ತರಬೇತಿಯ ಅವಧಿಯಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯವಿರುತ್ತದೆ.
ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು, ಬಿಳಿ ಹಾಳೆಯ ಮೇಲೆ ಹಾಗೂ ನಮ್ಮ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ನಮೂನೆಯಲ್ಲಿ ತಮ್ಮ ಹೆಸರು, ವಿಳಾಸ, ಮುಂತಾದ ಮಾಹಿತಿಗಳನ್ನು ಬರೆದು ಅರ್ಜಿಯ ಜೊತೆ ಆಧಾರ ಕಾರ್ಡ ಮತ್ತು ರೇಶನ್‍ಕಾರ್ಡ ಝೆರಾಕ್ಸ್ ಪ್ರತಿಗಳನ್ನು ಲಗತ್ತಿಸಿ, ಸಿಬಿಆರ್‍ಸೆಟಿ ಸಂಸ್ಥೆಗೆ ತಲುಪುವಂತೆ ಕಳಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್‍ಸೆಟಿ) ಪ್ಲಾಟ ನಂ ಸಿಎ-03 (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಏರಿಯಾ, ಆಟೋ ನಗರ, ಬೆಳಗಾವಿ. ದೂರವಾಣ ಸಂಖ್ಯೆ 0831-2440644, 8867388906, 9845750043, 7829601768, 8660038694, 9449860564 ಇವರನ್ನು ಸಂಪರ್ಕಿಸಬಹುದು ಎಂದು ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ  ///