ಕಷ್ಟ ಪರಿಹಾರಕ್ಕೆ ಬಂದ ಮಹಿಳೆ ಪ್ರಜ್ಞೆ ತಪ್ಪಿಸಿ ಜ್ಯೋತಿಷಿಯಿಂದ ರೇಪ್

ಕೋಲ್ಕತ್ತಾ: ವಿವಿಧ ಆಚರಣೆಗಳನ್ನು ಮಾಡುವ ನೆಪದಲ್ಲಿ ಜ್ಯೋತಿಷಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದು, ಆತನನ್ನು ಚಿತ್ಪುರ ಪೊಲೀಸರು ಬಂಧಿಸಿದ್ದಾರೆ.
ಕುಟುಂಬ ಸದಸ್ಯರ ಒಳಿತಿಗಾಗಿ ವಿವಿಧ ಧಾರ್ಮಿಕ ಕ್ರಿಯೆಗಳನ್ನು ಮಾಡುವ ನೆಪದಲ್ಲಿ ಜ್ಯೋತಿಷಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಸುಮಾರು 45 ದಿನಗಳ ಹಿಂದೆ ಪತ್ರಿಕೆಯಲ್ಲಿ ಜಾಹೀರಾತನ್ನು ನೋಡಿದ ನಂತರ ಸಂತ್ರಸ್ತೆಯ ಕುಟುಂಬದವರು ಜ್ಯೋತಿಷಿಯನ್ನು ಸಂಪರ್ಕಿಸಿದ್ದರು. ಆರೋಪಿ ಕುಟುಂಬ ಸದಸ್ಯರ ರಕ್ಷಣೆಗಾಗಿ ನಿರ್ದಿಷ್ಟ ಆಚರಣೆಗಳನ್ನು ಮಾಡುವ ನೆಪದಲ್ಲಿ ತನ್ನ ನಂಬಿಕೆ ಗಳಿಸಿದ್ದ ಎಂದು ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ವಿಧಿವಿಧಾನಗಳನ್ನು ನಡೆಸುವ ನೆಪದಲ್ಲಿ ಬಿರ್ಭುಮ್, ಬುರ್ದ್ವಾನ್ ಮತ್ತು ಡೈಮಂಡ್ ಹಾರ್ಬರ್ನ ಸುತ್ತಮುತ್ತಲಿನ ಹಲವಾರು ಸ್ಥಳಗಳಿಗೆ ಕರೆದೊಯ್ದ ಜ್ಯೋತಿಷಿ ಮಹಿಳೆಗೆ ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದ. ಪಾನೀಯ ಕುಡಿದು ಎರಡು ಬಾರಿ ಪ್ರಜ್ಞಾಹೀನಳಾಗಿದ್ದೆ ಎಂದು ಮಹಿಳೆ ಹೇಳಿದ್ದಾರೆ. ಆಕೆಗೆ ಪ್ರಜ್ಞೆ ಬಂದಾಗ, ಅವಳು ಅತ್ಯಾಚಾರಕ್ಕೊಳಗಾಗಿದ್ದಾಳೆಂದು ಅರಿತುಕೊಂಡಳು.
ಆರೋಪಿಯು ಮೂರನೇ ಬಾರಿ ಬೇರೆ ಕಡೆಗೆ ಕರೆದುಕೊಂಡು ಹೋಗಲು ಮುಂದಾದಾಗ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಆಕೆಯ ಸಂಗಾತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರ ಆರೋಗ್ಯವನ್ನು ಸುಧಾರಿಸಲು ಮಹಿಳೆ ಜ್ಯೋತಿಷಿ ಹೇಳಿದಂತೆ ಕೇಳಿದ್ದಾಳೆ. ಎರಡು ಬಾರಿ 20,000 ರೂಪಾಯಿಗಳನ್ನು ಪಾವತಿಸಿರುವುದಾಗಿ ಅವಳು ಹೇಳಿಕೊಂಡಿದ್ದಾಳೆ. ಆರೋಪಿಯನ್ನು ಬಂಧಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.//////