Belagavi News In Kannada | News Belgaum

ಕುಡಿತದ ಅಮಲಿನಲ್ಲಿದ್ದ ಪತಿ ಹತ್ಯೆ ಮಾಡಿದ ಪತ್ನಿ

ರಾಜಸ್ಥಾನ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆಯೇ ತನ್ನ ಪತಿಯನ್ನು ಕೊಂದು ಹಾಕಿದ ಘಟನೆಯು ರಾಜಸ್ಥಾನದ ಬಾರ್ಮರ್​ ಜಿಲ್ಲೆಯಲ್ಲಿ ನಡೆದಿದೆ.

ಮೃತನ ತಾಯಿ ನೀಡಿದ ದೂರನ್ನು ಆಧರಿಸಿದ ಪೊಲೀಸರು ಮಹಿಳೆಯ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಪತಿ – ಪತ್ನಿ ಇಬ್ಬರೂ ಕುಡಿತದ ಚಟವನ್ನು ಹೊಂದಿದ್ದು ಪದೇ ಪದೇ ದಂಪತಿಯ ನಡುವೆ ಕಲಹ ಏರ್ಪಡುತ್ತಿತ್ತು ಎನ್ನಲಾಗಿದೆ.
ಮೃತನ ತಾಯಿಯು ನೀಡಿದ ದೂರನ್ನು ಆಧರಿಸಿ ನಾವು ಮಹಿಳೆಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ. ಎಲ್ಲ ಆಯಾಮಗಳಿಂದ ನಾವು ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದೇವೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಹಿಳೆಯ ಚೀರಾಟ ಕೇಳಿ ಮೃತನ ತಾಯಿ ಕುಂತಿ ಜಯರಾಮ್ ಮನೆಯ ಮೊದಲ ಮಹಡಿಗೆ ಧಾವಿಸಿದ್ದರು. ತನ್ನ ಮಗ ಅನಿಲ್ ಕುಮಾರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು./////