Belagavi News In Kannada | News Belgaum

ಬೆಳಗಾವಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಾಟ : ಆರೋಪಿಯ ಬಂಧನ

ಬೆಳಗಾವಿ: ಇಲ್ಲಿನ ಸಂಗಮೇಶ್ವರ ನಗರ ವ್ಯಾಪ್ತಿಯಲ್ಲಿ  ಅಕ್ರಮವಾಗಿ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಅಬಕಾರಿ ಅಧಿಕಾರಿಗಳು  ವಶಕ್ಕೆ ಪಡೆದಿದ್ದಾರೆ.

 

ಹುಕ್ಕೇರಿ ತಾಲೂಕಿನ ಕರಜಗಾ ರೋಡ , ಕಣಗಲಾ ಗ್ರಾಮದ ಇಸ್ಮಾಯಿಲ್ ಬಾಬು ಸಯ್ಯದ (30) ಬಂಧಿತ ಆರೋಪಿ. ಆತನಿಂದ 25 ಸಾವಿರ ರೂ. ಮೌಲ್ಯದ 820 ಗ್ರಾಂ. ಮಾದಕ ಪದಾರ್ಥವಾದ ಒಣ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ನಗರದ ವಿವಿಧ ಕಡೆ  ಮಾದಕ ವಸ್ತುಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ದಾಳಿ ನಡೆಸಿ,  ಗಾಂಜಾ ಬ್ಯಾಗ್‌ ನ್ನು ವಶಕ್ಕೆ  ಪಡೆದು ವಿಚಾರಣೆ ನಡೆಸಿದ್ದಾರೆ.

ಅಪರ ಆಯುಕ್ತ ಡಾ: ವೈ. ಮಂಜುನಾಥ, ಉಪ ಆಯುಕ್ತ ಜಯರಾಮೇಗೌಡ ಮಾರ್ಗದರ್ಶನದಲ್ಲಿ ಹಾಗೂ  ಉಪ ಅಧೀಕ್ಷಕರಾದ ಚನಗೌಡ ಎಸ್ ಪಾಟೀಲ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕರಾದ ಮಂಜುನಾಥ ಗಲಗಲಿ  ಅವರು  ಪ್ರಕರಣ ದಾಖಲಿಸಿಕೊಂಡಿದ್ದು,  ಅಂಗರಾಜ.ಕೆ ,  ಎ.ವಿ.ರಾವಳ ,  ಸುನೀಲ ಪಾಟೀಲ , ಪ್ರವೀಣ ಬೆಳಕೂಡ , ಏ.ಆಯ್.ಸಯ್ಯದ  ಹಾಗೂ ಸಿಬ್ಬಂದಿ  ದಾಳಿ ನಡೆಸಿದ್ದಾರೆ ಎಂದು ಅಬಕಾರಿ ಅಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.//////