ಎರಡು ವರ್ಷದ ಮಗು ಕಾಣೆ

ಹಾವೇರಿ: ಹಾನಗಲ್ ಪಟ್ಟಣದ ಇಂದಿರಾ ನಗರದ ಎರಡು ವರ್ಷದ ಅಯಾನ ಇಕ್ಬಾಲ ಅಹ್ಮದ್ ಉಪ್ಪಿನ ಎಂಬ ಮಗುವನ್ನು ಫೆ. 27 ರಂದು ಮನೆ ಹತ್ತಿರ ಅಪಹರಣ ಮಾಡಲಾಗಿದೆ ಎಂದು ಮಗುವಿನ ತಂದೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಮಗು ಉರ್ದು ಮಾತನಾಡುತ್ತದೆ. ಆದರೆ ಸರಿಯಾಗಿ ಮಾತನಾಡಲು ಬರುವುದಿಲ್ಲ. ಕೆಳ ತುಟಿಯ ಒಳಗಡೆ ಗಾಯದ ಕಲೆ ಇದೆ. ಮಾಸಿದ ಹಳದಿ ಬಣ್ಣದ ಟೀ ಶರ್ಟ್, ಕಪ್ಪು ಬಣ್ಣದ ಮಿಶ್ರಿತ ಚಡ್ಡಿ ಧರಿಸಿದ್ದಾನೆ.
ಈ ಮಗುವಿನ ಬಗ್ಗೆ ಸುಳಿವು ಸಿಕ್ಕಲ್ಲಿ ಹಾನಗಲ್ ಪೊಲೀಸ್ ಠಾಣೆ ದೂ.ಸಂ. 08379-262333, ಪಿಎಸ್ಐ ಮೊ. 9480804561 ಸರ್ಕಲ್ ಇನ್ಸಪೆಕ್ಟರ್ ಕಚೇರಿ ನಂ. 08379-262207 ಹಾಗೂ ಹಾವೇರಿ ಪೊಲೀಸ್ ಕಂಟ್ರೋಲ್ ರೂಂ ನಂ.08375-237368 ಸಂಪರ್ಕಿಸಲು ಹಾನಗಲ್ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ.////