4000 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಹಡಗೊಂದು ಪೋರ್ಚುಗಲ್ ಬಳಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿರುವ ಘಟನೆ

ಬೆಂಗಳೂರು: 4000 ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಸಾಗಿಸುತ್ತಿದ್ದ ಬೃಹತ್ ಹಡಗೊಂದು ಪೋರ್ಚುಗಲ್ ಬಳಿ ಅಟ್ಲಾಂಟಿಕ್ ಸಾಗರದಲ್ಲಿ ಮುಳುಗಿರುವ ಘಟನೆ ವರದಿಯಾಗಿದೆ.
ಜರ್ಮನಿಯ ಇಮ್ದಿನ್ನಿಂದ ಅಮೆರಿಕದ ರೋಡ್ ಐಲ್ಯಾಂಡ್ ಸ್ಟೇಟ್ಗೆ ಸಿಂಗಪುರದ ಎಂಓಎಲ್ ಶಿಫ್ ಮ್ಯಾನೇಜ್ಮೆಂಟ್ ಕಂಪನಿಯ ಹಡಗು ತೆರಳುತ್ತಿತ್ತು. ಕಳೆದ ಫೆ. 17 ರಂದು ಪೋರ್ಚುಗಲ್ ಬಳಿಯ ಸೌತ್ ಆಫ್ ಅಜ್ರೂಸ್ ಬಳಿ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಕಾಣಿಸಿಕೊಂಡ ನಂತರ ಪೋರ್ಚುಗಲ್ ಕರಾವಳಿ ಪಡೆಯ ರಕ್ಷಣಾ ತಂಡ ಬೆಂಕಿ ನಂದಿಸಲು ಸಾಕಷ್ಟು ಶ್ರಮವಹಿಸಿತ್ತು. ಆದರೆ, ಹಡಗು ಸಾಗರದಲ್ಲಿ ಮುಳಗಿರುವುದು ಮಾ. 1ರಂದು ಖಚಿತಪಟ್ಟಿದೆ ಎಂದು ಶಿಫ್ ಮ್ಯಾನೇಜ್ಮೆಂಟ್ ಕಂಪನಿ ತಿಳಿಸಿದೆ.
ಎಲ್ಲ ಐಷಾರಾಮಿ ಕಾರುಗಳು ಬೆಂಕಿ ತಗುಲಿ, ನೀರಿನಲ್ಲಿ ಮುಳುಗಿವೆ ಎಂದು ಲ್ಯಾಂಬೊರ್ಗಿನಿ ಅಮೆರಿಕದ ಸಿಇಒ ಕೂಡ ಖಚಿತಪಡಿಸಿದ್ದಾರೆ. ಘಟನೆಯಿಂದ ಒಟ್ಟು 2,506 ಕೋಟಿಯಷ್ಟು ಹಾನಿಯಾಗಿದ್ದು, ಕಾರುಗಳೆಲ್ಲವೂ ವಿಮೆ ಹೊಂದಿದ್ದವು ಎಂದು ವರದಿ ತಿಳಿಸಿದೆ.//////