Belagavi News In Kannada | News Belgaum

ಜಗತ್ತಿನ ಮನುಕುಲಕ್ಕೆ ಧರ್ಮದರಿವು ಕೊಟ್ಟವರು ಬಸವಾದಿ ಶರಣರು.ರಾಜಸತ್ತೆ,ವರ್ಗ ವ್ಯವಸ್ಥೆ,ವರ್ಣ ವ್ಯವಸ್ಥೆ,ಅಸಮಾನತೆಯಿಂದ ಸಮಾಜ ಶೋಷಣೆಗೆ ಒಳಗಾಗಿದ್ದ ಕಾಲದಲ್ಲಿ ಶರಣರು ಸಮ ಸಮಾಜ

ಜಗತ್ತಿನ ಮನುಕುಲಕ್ಕೆ ಧರ್ಮದರಿವು ಕೊಟ್ಟವರು ಬಸವಾದಿ ಶರಣರು.ರಾಜಸತ್ತೆ,ವರ್ಗ ವ್ಯವಸ್ಥೆ,ವರ್ಣ ವ್ಯವಸ್ಥೆ,ಅಸಮಾನತೆಯಿಂದ ಸಮಾಜ ಶೋಷಣೆಗೆ ಒಳಗಾಗಿದ್ದ ಕಾಲದಲ್ಲಿ ಶರಣರು ಸಮ ಸಮಾಜದ ನಿರ್ಮಾಣಕ್ಕೆಮುಂದಾದರು ಅಲ್ಲದೇ ಶರಣ ಸಮಾಜವನ್ನು ಕಟ್ಟಿ ಬದುಕಿದರು, ಜೊತೆಗೆ ನಾವೂ ಹೇಗೆ ಬದುಕಬೇಕೆಂದು ತೋರಿಸಿಕೊಟ್ಟರು ಶರಣರು.

ಆತ್ಮೋದ್ಧಾರ,ವ್ಯಕ್ತಿತ್ವದ ವಿಕಾಸಕ್ಕೆಸರಳ ಸೂತ್ರವನ್ನು ಶರಣರು ನಮಗೆ ಹಾಕಿಕೊಟ್ಟರು.ಬುದ್ದಿ ವಿಕಾಸದ ಜೊತೆಗೆ ನೈತಿಕತೆ ವಿಕಾಸಗೊಳ್ಳಬೇಕು.ಕೇವಲ ಬುದ್ದಿ ವಿಕಾಸವಾದರೆ ಸಾಲದು,ಸಮಾಜಕ್ಕೆ ಉಪಯೋಗವಾಗಿ ಬದುಕಬೇಕು.

ಹುಟ್ಟು,ಬೆಳವಣಿಗೆ,ಸಾವು ಶಿಸ್ತುಬದ್ದ ಕ್ರಮಬದ್ಧತೆಯ ನಿಯಮಗಳ ಸರ್ವ ಸೂತ್ರಗಳು ಬಸವಣ್ಣನವರ ವಚನಗಳಲ್ಲಿವೆ. ವಚನಗಳನ್ನು ಪ್ರತಿಯೊಬ್ಬರೂ ತಮ್ಮಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು, ಬುಧವಾರ 02/03/2022 ರಂದು ಮಹಾಂತೇಶನಗರದ ಮಹಾಂತ ಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಹಾಗೂ ರಾಷ್ಟ್ರೀಯ ಬಸವ ಸೇನೆ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜರಗಿದ. ಮಾಸಿಕ ಅನುಭಾವ ಸತ್ಸಂಗದಲ್ಲಿ ವಿಶೇಷ ಉಪನ್ಯಾಸಕರಾಗಿ ಹುಕ್ಕೆರಿ ತಾಲೂಕಿನ ಶಿಂಧಿಹಟ್ಟಿ ಗ್ರಾಮದ ರೈತ ಶರಣ,ಬಾಳೇಶ ಬಸರಗಿ ಅವರು ತಮ್ಮ ಅನುಭಾವದ ಉಪನ್ಯಾಸದಲ್ಲಿ ಮೇಲಿನಂತೆ ಅಭಿಪ್ರಾಯ ಪಟ್ಟರು.

ಸಾನಿದ್ಯ ವಹಿಸಿ ಆಶಿರ್ವಚನ ನೀಡಿದ ಪೂಜ್ಯ ಡಾ.ಬಸವಾನಂದ ಮಹಾಸ್ವಮಿಗಳು ನಿಸರ್ಗ ಚಿಕಿತ್ಸಾ ತಜ್ಞರು,ಕಾಲ ಮಹೇಶ್ವರ ಪುಣ್ಯಾಶ್ರಮ ಮುಮ್ಮಿಗಟ್ಟಿ,ಧಾರವಾಡ ಅವರು ಈ ಜಗತ್ತಿಗೆ ಶರಣರು ಬಯಸಿದ ಕಾಯಕ,ದಾಸೋಹ,ಸಮಾನ ಕಲ್ಯಾಣದ ದೇಶ ಬೇಕಾಗಿದೆ. ಲಿಂಗಾಯತ ಧರ್ಮದ ತತ್ವ ಸಿದ್ದಾಂತಗಳ ಅವಶ್ಯಕತೆ ಇದೆ.ವರ್ಗ,ವರ್ಣ,ಭೇದಭಾವ ಬದಿಗೆ ಸರಿಸಿ, ಸರ್ವರಲ್ಲಿಯೂ ಭಗವಂತನ ಚೈತನ್ಯದ ಸಾಕ್ಷಾತ್ಕಾರ ಕಾಣಬೇಕಾಗಿದೆ.ಎಲ್ಲೆಲ್ಲಿಯೂ ಶಾಂತಿಯ ಅವಶ್ಯಕತೆ ಇದೆ ಅಂತಾ ಹೇಳಿದರು.

ಸಮಾರಂಭದಲ್ಲಿ ಬೆಳಗಾವಿಯಿಂದ ಲೋಕಸಭೆಗೆ ಮಂಗಲಾ ಅಂಗಡಿ ಮತ್ತು ಎರಡು ಸಾರಿ ಬೆಳಗಾವಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅದ್ಯಕ್ಷರಾಗಿ ಆಯ್ಕೆಯಾದ ಮಂಗಲಾ ಮೆಟಗುಡ್ಡ ಅವರನ್ನು ಸತ್ಕರಿಸಲಾಯಿತು.ಜೊತೆಗೆ ರಾಜ್ಯ ಮಟ್ಟದ ಸ್ಕೇಟಿಂಗ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದ ಬಾಲ ಪ್ರತಿಭೆ ಕು.ಅವನೀಶ ಬ. ಕೋರಿಶೆಟ್ಟಿ ಅವನನ್ನೂ ಸತ್ಕರಿಸಲಾಯಿತು.

ಅದ್ಯಕ್ಷತೆ ವಹಿಸಿ ಮಾತನಾಡಿದ ಶರಣ ಬಸವರಾಜ ರೊಟ್ಟಿ ಲಿಂಗಾಯತ ಸ್ವತಂತ್ರ ಧರ್ಮದ ಸಾಂವಿದಾನಿಕ ಮಾನ್ಯತೆಯ ಹೋರಾಟ ಮುಂದುವರೆಯುವದು ಅದಕ್ಕೆ ತಮ್ಮೆಲ್ಲರ ಸಹಾಯ ಸಹಕಾರ ಬೇಕೆಂದು ವಿನಂತಿಸಿದರು.ವೀರಶೈವವೂ ಕೂಡ ಬೇರೆಯಲ್ಲ ಅದು ಕೂಡಾ ಲಿಂಗಾಯತ ಧರ್ಮದ ಒಳಪಂಗಡದಲ್ಲಿ ಒಂದು ಎಂದು ಹೇಳಿದರು.ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳ ಏಕೀಕರಣವಾಗಬೇಕಾಗಿದೆ ಎಂದು ಪ್ರತಿಪಾದಿಸಿದರು.

ಪ್ರಸಾದ ದಾಸೋಹಿಗಳಾದ ಶರಣ ಸಂಗಪ್ಪ ಮತ್ತು ಶರಣೆ, ಮಹಾನಂದಾ ಮುಸಿ ದಂಪತಿ ಷಟ್ ಸ್ಥಲ ಧ್ವಜಾರೋಹನ ನೆರವೇರಿಸಿದರು.
ಪ್ರಾರಂಭದಲ್ಲಿ ಶ್ರೀಮತಿ ಉಮಾ ನಿಜಗುಲಿ ಮತ್ತು ಸಂಗಡಿಗರ ವಚನ ಗಾಯನ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆಯ ಶರಣೆಯರಿಂದ ವಚನ ಪ್ರಾರ್ಥನೆ ನಡೆಯಿತು.

ಇದೇ ಸಂದರ್ಭದಲ್ಲಿ ಅಖಿಲ ಭಾರತೀಯ ಶರಣ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ಅದ್ಯಕ್ಷರಾಗಿ ಆಯ್ಕೆಯಾದ ಶರಣ ಅಶೋಕ ಮಳಗಲಿಯವರನ್ನು ಸತ್ಕರಿಸಲಾಯಿತು.ಶರಣ ಚಂದ್ರಪ್ಪಾ ಬೂದಿಹಾಳ ಶಿಕ್ಷಕರು ಶರಣು,ಸಮರ್ಪಣೆ ಸಲ್ಲಿಸಿದರು.

ಕನ್ನಡ ಉಪನ್ಯಾಸಕರಾದ ಶರಣ ಅಡಿವೇಶ ಇಟಗಿ ಅವರು ನಿರೂಪಿಸಿದರು.ಪೆÇ್ರ.ಎಮ್.ಆರ್.ಉಳ್ಳೆಗಡ್ಡಿ,ಬಸವರಾಜ ಸುಲ್ತಾನಪೂರ,ಸುಜಾತಾ ಮತ್ತಿಕಟ್ಟಿ,ಅನ್ನಪೂರ್ಣಾ ಮಳಗಲಿ,ಸುವರ್ಣಾ ಗುಡಸ,ಜಯಕ್ಕ ನಷ್ಠಿ,ಜಯಕ್ಕ ನಷ್ಠಿ,ರಾಜು ಪದ್ಮನ್ನವರ,ಶಿವಾನಂದ ವಾಘರವಾಡಿ, ನಗರ ಸೇವಕರಾದ ರಾಜಶೇಖರ ಡೋಣಿ ಮೊದಲಾದ ಬಸವ ಅನುಯಾಯಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು