Belagavi News In Kannada | News Belgaum

ಚಲಿಸುತ್ತಿದ್ದ ಕಾರನಲ್ಲಿ ಬೆಂಕಿ

ಬೆಳಗಾವಿ: ಚಲಿಸುತ್ತಿದ್ದ ಕಾರನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೃಹತ್‌ ಕಾರು ಸುಟ್ಟು ಭಸ್ಮವಾಗಿರುವ ಅವಘಡ ವೈಭವ ನಗರ ಬಳಿಯ ಬಾಕ್ಸೈಟ್ ರಸ್ತೆಯಲ್ಲಿ ಸಂಭವಿಸಿದೆ.  ಬೆಂಕಿ ನರ್ತನಕ್ಕೆ ಸ್ಥಳೀಯರು ಆತಂಕಕ್ಕಿಡಾಗಿದ್ದಾರೆ.

ರಾಜಸ್ಥಾನ ಮೂಲದ ರೆನಾಲ್ಟ್‌ ಡಸ್ಟರ್ ಕಂಪನಿಯ ಕಾರು ಇದಾಗಿದ್ದು,‌ ಕಾರಿನಲ್ಲಿ ಗಣಪತ್ ರಾಮ್, ಸಿದ್ದರಾಮ್ ಸಂಚರಿಸುತ್ತಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ ಮೂಲಕ ಪೂನಾಗೆ ತೆರಳಬೇಕಿದ್ದ ಕಾರು ನಗರದಲ್ಲಿ ಬೆಂಕಿ ಆಹುತಿಯಾಗಿ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ಹತ್ತೋಟಿಗೆ ತಂದಿದ್ದಾರೆ.

ಬಾಕ್ಸೈಟ್ ರಸ್ತೆಯ ಮಾರ್ಗವಾಗಿ  ಸಂಚರಿಸುವಾಗ ಏಕಾಏಕಿ ಕಾರನಲ್ಲಿ ಹೊಗೆ ಕಾಣಿಸಿಕೊಂಡಿದೆ, ಅಷ್ಟ್ರರಲ್ಲಿ ಕಾರ ಚಾಲಕ ಇಳಿದು ಪರಿಕ್ಷೇ ಮಾಡುವ ಹೊತ್ತಿಗೆ ಬೆಂಕಿ ಕಾರನ್ನು ಆವರಿಸಿಕೊಂಡಿದೆ. ಅದೃಷ್ಟವಶಾತ  ಪ್ರಾಣಾಪಾಯದಿಂದ ಎಲ್ಲರೂ ಪಾರಾಗಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಸಿಪಿಐ ಮಂಜುನಾಥ ಹಿರೇಮಠ ಹಾಗೂ ಸಿಬ್ಬಂದಿಗಳು ಪರಿಶೀಲನೆ ನಡೆಸಿದರು./////