ಮುಸ್ಲಿಂ ಎಂಬ ಕಾರಣಕ್ಕೆ ಈ ಸರ್ಕಾರ ಒಂದು ನಯಾ ಪೈಸೆ ಕೊಟ್ಟಿಲ್ಲ

ಕಲಬುರಗಿ: ಉಕ್ರೇನ್ನಲ್ಲಿ ಸತ್ತ ಯುವಕನ ಕುಟುಂಬಕ್ಕೆ ಏನು ಕೊಟ್ಟಿಯೋ ಬೊಮ್ಮಾಯಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಹರಿಹಾಯ್ದಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರಗುಂದದನಲ್ಲಿ ಒಬ್ಬ ಮುಸ್ಲಿಂ ಹುಡುಗನನ್ನು ಭಜರಂಗ ದಳದವರು ಕೊಂದಿದ್ದಾರೆ. ಆ ಮುಸ್ಲಿಂ ಹುಡುಗನಿಗೆ ಸರ್ಕಾರ ಒಂದೇ ಒಂದು ರೂಪಾಯಿ ಕೊಟ್ಟಿಲ್ಲ. ದೇಶ ಕಾಯುವ ಯೋಧ ಹುತಾತ್ಮರಾದರೂ ಆತ ಮುಸಲ್ಮಾನ ಎನ್ನುವ ಕಾರಣಕ್ಕೆ ಈ ಸರ್ಕಾರ ನಯಾಪೈಸೆ ಕೊಡಲ್ಲ. ಇದು ನ್ಯಾಯ ಏನ್ರಿ ಬಸವರಾಜ್ ಬೊಮ್ಮಾಯಿ? ಇದರ ಶಾಪ ನಿಮ್ಮ ಮಕ್ಕಳಿಗೆ ತಟ್ಟದೇ ಇರುತ್ತಾ ಬೊಮ್ಮಾಯಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸತ್ತ ಹರ್ಷನ ಕುಟುಂಬಕ್ಕೆ ಸರ್ಕಾರ 25 ಲಕ್ಷ ಕೊಟ್ಟಿದೆ. ಆದರೆ ಉಕ್ರೇನ್ನಲ್ಲಿ ಸತ್ತ ಯುವಕನ ಕುಟುಂಬಕ್ಕೆ ಏನು ಕೊಟ್ಟಿಯೋ ಬೊಮ್ಮಾಯಿ? ಒಬ್ಬ ಎಂಎಲ್ಎ ಹೇಳುತ್ತಾನೆ ಹೆಣ ತರುವುದಕ್ಕೆ ಜಾಗ ಇಲ್ಲ, ಪ್ಲೇನ್ ಇಲ್ಲ ಅಂತ. ಎಷ್ಟು ಬೇಜವಾಬ್ದಾರಿಯಿಂದ ಇವರು ಮಾತಾನಾಡುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ನಾನು ಕಾಂಗ್ರೆಸ್ಗೆ ಇನ್ನೂ ಡೈವೋರ್ಸ್ ಕೊಟ್ಟಿಲ್ಲ. ಮಾರ್ಚ್ 12 ರಂದು ನನ್ನ ನಡೆ ಏನೂ ಅಂತ ಹೇಳುತ್ತೇನೆ. ಯಾವ ಪಾರ್ಟಿ ಸೇರುತ್ತೇನೆ ಎಂದು ಘೋಷಣೆ ಮಾಡುತ್ತೇನೆ ಎಂದರು.//////