Belagavi News In Kannada | News Belgaum

ಮಾ. 10ರಂದು ವಿಟಿಯು 21ನೇ ಘಟಿಕೋತ್ಸವ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 21ನೇ ಘಟಿಕೋತ್ಸವವನ್ನು ಮಾ .10 ಗುರುವಾರ ವಿವಿಯ ಜ್ಞಾನ ಸಂಗಮ ಆವರಣದ ಡಾ.ಎಪಿಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಜರುಗಲಿದೆ ಎಂದು ಕುಲಪತಿ ಪ್ರೊ.ಕರಿಸಿದ್ದಪ್ಪ ತಿಳಿಸಿದರು .

ಶನಿವಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಟಿಯುನ 21 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್‌ ಗೆಹ್ಲೋಟ್‌ ಅಧ್ಯಕ್ಷತೆ ವಹಿಸಲಿದ್ದಾರೆ . ಲೋಕಸಭೆಯ ಸಭಾಪತಿ ಓಂ ಬಿರ್ಲಾ ಘಟಿಕೋತ್ಸವದ ಭಾಷಣ ಮಾಡಲಿದ್ದಾರೆ . ಉನ್ನತ ಶಿಕ್ಷಣ ಸಚಿನ ಡಾ.ಅಶ್ವಥ್ ನಾರಾಯಣ್ ಉಪಸ್ಥಿತರಿರುವವರು ಎಂದರು.

ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯತ್ತಮ ಸಾಧನೆ ಮಾಡಿದ ಪದ್ಮಭೂಷಣ ಪುರಸ್ಕೃತ , ಇನ್ಫೋಸಿಸ್ ಸಹ ಸಂಸ್ಥಾಪಕ , ಅಕ್ಸಿಲೊರ್ ವೆಂಚರ್ಸ್ ಅಧ್ಯಕ್ಷ ಸೇನಾಪತಿ ಕ್ರಿಶ್ ಗೋಪಾಲಕೃಷ್ಣ , ಭಾರತ್ ಬಯೋಟಿಕ್ ಲಿಂ . ವ್ಯವಸ್ಥಾಪಕ ನಿರ್ದೇಶಕ , ಅಧ್ಯಕ್ಷರಾದ ಡಾ . ಕೃಷ್ಣ ಎಲ್ಲಾ ಹಾಗೂ ಪದ್ಮಶ್ರೀ ಪುರಸ್ಕೃತ , ಹೈ ಎನರ್ಜಿ ಭೌತಿಕ ವಿಜ್ಞಾನ ವಿಭಾಗದ , ಭಾರತೀಯ ವಿಜ್ಞಾನ ಮಂದಿರ ಬೆಂಗಳೂರಿನ ಪ್ರೊ . ರೋಹಿಣಿ ಗೊಡಬೋಲೆ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರಧಾನ ಮಾಡಲಾಗುವುದು ಎಂದು ತಿಳಿಸಿದರು.
ವಿಶ್ವವಿದ್ಯಾಲಯ 21 ನೇ ಘಟಿಕೋತ್ಸವದಲ್ಲಿ 57,498 ಬಿಇ / ಬಿಟೆಕ್ , 902 ಬಿ.ಆರ್ಚ್ , 12 ಬಿ.ಪ್ಲೇನ್ , 4362 ಎಂಬಿಎ , 1387 , ಎಂಟೆಕ್ ಹಾಗೂ 33 ಪಿಜಿ ಡಿಪ್ಲೋಮಾ ಪದವಿಯನ್ನು ಪ್ರಧಾನ ಮಾಡಲಾಗುತ್ತಿದೆ . ಸಂಶೋಧನಾ ಅಧ್ಯಯನ ಮುಗಿಸಿದ ಸಂಶೋಧನಾರ್ಥಿಗಳಿಗೆ 515+ ಪಿಎಚ್ ಡಿ , 04 ಎಂಎಸ್ಸಿ ( ಎಂಜಿನಿಯರಿಂಗ್ ) ಬೈ ರಿಸರ್ಚ್ ಮತ್ತು 3 ಇಂಟಿಗ್ರೇಟೆಡ್ ಡುಯಲ್ ಪದವಿ ಪ್ರಧಾನ ಮಾಡಲಾಗುವುದು ಎಂದವರು ವಿವರಿಸಿದರು.
ರಾಯಚೂರು ಎಸ್ ಎಲ್ ಎನ್ ಕಾಲೇಜಿನ   ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬುಷಾರ ಮತೀನ್ ಒಟ್ಟು ೧೬ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಕುಲಸಚಿವರಾದ ಪ್ರೊ. ಆನಂದ ದೇಶಪಾಂಡೆ ಹಾಗೂ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಬಿ. ಈ ರಂಗಸ್ವಾಮಿ ಉಪಸ್ಥಿತರಿದ್ದರು.//////