Belagavi News In Kannada | News Belgaum

ಜಡೇಜಾ-ಅಶ್ವಿನ್ ಮಾರಕ ದಾಳಿಗೆ ಶ್ರೀಲಂಕಾಗೆ ಹೀನಾಯ ಸೋಲು : ಭಾರತಕ್ಕೆ ಗೆಲುವು

ಮೊಹಾಲಿ: ಇಬ್ಬರ ಮಾರಕ ಸ್ಪಿನ್ ಗೆ ಶ್ರೀಲಂಕಾ ಮೊದಲ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದು, ಭಾರತ ಇನ್ನಿಂಗ್ಸ್ ಹಾಗೂ 222 ರನ್​ಗಳ ಬೃಹತ್​ ಅಂತರದ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.

ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ನಲ್ಲ್ಲೂ ಕಮಾಲ್ ಮಾಡಿದ್ದೂ, ಇಬ್ಬರ ಮಾರಕ ಸ್ಪಿನ್ ಗೆ ಶ್ರೀಲಂಕಾ ಮೊದಲ ಟೆಸ್ಟ್​ ಪಂದ್ಯದಲ್ಲಿ ಹೀನಾಯ ಸೋಲುವ ಮೂಲಕ ಭಾರತ ಇನ್ನಿಂಗ್ಸ್ ಹಾಗೂ 222 ರನ್​ಗಳ ಬೃಹತ್​ ಅಂತರದ ಜಯ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-0ಯಲ್ಲಿ ಮುನ್ನಡೆ ಸಾಧಿಸಿದೆ.
ಭಾರತ ನೀಡಿದ್ದ 574 ರನ್ ನ ಬೆನ್ನಟ್ಟಿದ ಲಂಕಾ ಆಟಗಾರರರು ಮೊದಲ ಇನ್ನಿಂಗ್ಸ್ ನಲ್ಲಿ 174 ಆಲೌಟ್ ಆಗಿ, ಮತ್ತೆ ಬ್ಯಾಟಿಂಗ್ ಆರಂಭಿಸಿತ್ತು. ಆದರೆ ಎರಡನೇ ಇನ್ನಿಂಗ್ಸ್​ ನಲ್ಲೂ ಎಡವಿದ ಲಂಕಾ ಕೇವಲ 178 ರನ್​ಗಳಿಗೆ ಆಲೌಟ್ ಮಾಡುವ ಹೀನಾಯ ಸೋಲು ಅನುಭವಿಸಿದೆ.//////