Belagavi News In Kannada | News Belgaum

ಕಬ್ಬಡ್ಡಿಗೆ ಮಹಿಳೆಯರು ಹೆಚ್ಚಿನ ಆಸಕ್ತಿ ತೊರಲಿ

ಚಿಕ್ಕೋಡಿ: ಕಬ್ಬಡ್ಡಿ ನಮ್ಮ ದೇಶದ ಗ್ರಾಮೀಣ ಪ್ರದೇಶದ ಕ್ರೀಡೆಯಾಗಿದೆ. ಕಬ್ಬಡ್ಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ  ತಂಡಗಳು  ಭಾಗವಹಿಸುತ್ತಿರುವದು ಹೆಮ್ಮೆಯ ಸಂಗತಿಯಾಗಿದೆ. ಸ್ಪರ್ಧಾಳಗಳು ಕ್ರೀಡಾ ಮನೊಭಾನೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಚಲನ ಚಿತ್ರ ನಟಿ ಹಾಗೂ ಮಾಜಿ ಸಚಿವೆ ಉಮಾಶ್ರೀ ಹೇಳಿದರು.

ತಾಲೂಕಿನ ಮುಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮುಕ್ತ ಹೊನಲು ಬೆಳಕಿನ ಕಬ್ಬಡಿಗಳಿಗೆ ಶನಿವಾರ ತಡರಾತ್ರಿ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದಲ್ಲಿ ಕ್ರೀಡೆಗಳಲ್ಲಿ ಮಹಿಳೆಯರು ಪುರುಷರಕಿಂತ ಹೆಚ್ಚು ಸಾಧನೆ ಮಾಡುತ್ತಿರುವದು ಹೆಮ್ಮೆ ಸಂಗತಿ ಎಂದರು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಮಹಿಳಾ ಕಬ್ಬಡ್ಡಿ ವಿಕ್ಷಣೆ ಮಾಡುವ ಮೂಲಕ ಗ್ರಾಮೀಣ ಕಲೆ ಕಬ್ಬಡ್ಡಿಗೆ ಪ್ರೋತ್ಸಾಹಿಸುತ್ತಿರುವದು ಹೆಮ್ಮೆ ಸಂಗತಿ ಎಂದರು.

ಲಕ್ಷ್ಮೀತಾಯಿ ಫೌಂಡೇಷನ ವತಿಯಿಂದ ಮುಗಳಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಪಂದ್ಯಾವಳಿಗೆ ವಿಶೇಷ ಬಹುಮಾನ ನೀಡಲಾಗುವದು ಎಂದರು.            ರಾಯಬಾಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ  ಮಹಾವೀರ ಮೋಹಿತೆ,  ತಾ.ಪಂ ಮಾಜಿ ಸದಸ್ಯ ರಾಜು ಪಾಟೀಲ ಮಾತನಾಡಿದರು.

ಮುಗಳಿಯಲ್ಲಿ ಹೊನಲು ಬೆಳಕಿನ ಪುರುಷರ ಕಬ್ಬಡ್ಡಿ ಪಂದ್ಯಾವಳಿ ಮತ್ತು ಮಹಿಳೆಯರಿಗಾಗಿಯೂ ಇಲ್ಲಿ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ರಾಜ್ಯ ಮಟ್ಟದ ಕುಸ್ತಿಗಳನ್ನು ಆಯೋಜಿಸಲಾಗಿತ್ತು. ನಾಗರಮುನ್ನೋಳ್ಳಿ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಂಕರಗೌಡ ಪಾಟೀಲ, ರವಿ ಹಂಪನವರ, ರಾಜುಕುಮಾರ ಕೋಟಗಿ, ವೃಷಭ  ಪಾಟೀಲ, ರುದ್ರಪ್ಪಾ ಸಂಗಪ್ಪಗೋಳ, ಮಹಾದೇವ ಬಂಬಲವಾಡೆ, ಬಸಗೌಡ ಮಲಗೌಡ ಪಾಟೀಲ, ಆನಂದ ಸಾರಾಪುರೆ, ಮಹಾದೇವ ಬಂಬಲವಾಡೆ, ಬಾಪುಗೌಡ ಪಾಟೀಲ, ಲಗಮಣ್ಣಾ ಹಂಚಿನಾಳೆ, ರಂಗನಗೌಡ ಪಾಟೀಲ, ಗ್ರಾ. ಪಂ. ಅಧ್ಯಕ್ಷ ರಮೇಶ ಪಾಟೀಲ ಉಪಸ್ಥಿತರಿದ್ದರು.
//////