ಪ್ರತ್ಯೇಕ ಪ್ರಕರಣಗಳಲ್ಲಿ ಮೂವರ ನಾಪತ್ತೆ

ಹುಕ್ಕೇರಿ : ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾದ ಮೂರು ವಿವಿಧ ಪ್ರತ್ಯೇಕ ಪ್ರಕರಣಗಳಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ವ್ಯಕ್ತಿಗಳು ನಾಪತ್ತೆಯಾಗಿದ್ದಾರೆ.
ಸುರೇಶ ಮಗದುಮ್ಮ :
ತಾಲೂಕಿನ ಬಸ್ತವಾಡ ಗ್ರಾಮದ ಸುರೇಶ ಸತ್ತೆಪ್ಪಾ ಮಗದುಮ್ಮ (51) ಕಾಣೆಯಾಗಿರುವ ಬಗ್ಗೆ ಆತನ ಪತ್ನಿ ಉಜ್ವಲಾ ದೂರು ನೀಡಿದ್ದಾಳೆ. ಸಾಧಾರಣ ಮೈಕಟ್ಟು, ಗುಂಡು ಮುಖ, ಗೋದಿಗೆಂಪು ಮೈಬಣ್ಣ, 5.8 ಅಡಿ ಎತ್ತರವಿದ್ದು ಕನ್ನಡ ಭಾಷೆ ಮಾತನಾಡುತ್ತಾನೆ. ಮೈಮೇಲೆ ಬಿಳಿ ಬಣ್ಣದ ಶರ್ಟ್, ಫೈಜಾಮ್ ಧರಿಸಿದ್ದಾನೆ.
ಆಶಾ ಚಲವಾದಿ :
ತಾಲೂಕಿನ ಬಸ್ತವಾಡ ಗ್ರಾಮದ ಆಶಾ ಪ್ರಕಾಶ ಚಲವಾದಿ (28) ಎಂಬಾತ ನಾಪತ್ತೆಯಾಗಿರುವ ಬಗ್ಗೆ ಆತನ ಪತಿ ಪ್ರಕಾಶ ದೂರು ನೀಡಿದ್ದಾರೆ. ಸಾಧಾರಣ ಮೈಕಟ್ಟು, ಗೋಲು ಮುಖ, ಕೆಂಪು ಮೈಬಣ್ಣ, 4.6 ಅಡಿ ಎತ್ತರ ಹೊಂದಿರುವ ಈಕೆ ಕನ್ನಡ ಭಾಷೆ ಮಾತನಾಡುತ್ತಾಳೆ. ಕೆಂಪು ಬಣ್ಣದ ಸೀರೆ, ಬಿಳಿ ಬಣ್ಣದ ಜಂಪರ್ ಧರಿಸಿದ್ದಾಳೆ.
ಅಪ್ಪಾಸಾಬ ಕಾಗಿನಗಕರ :
ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಅಪ್ಪಾಸಾಬ ಮಹಾನಿಂಗ ಕಾಗಿನಗಕರ (32) ಎಂಬಾತ ಕಾಣೆಯಾಗಿರುವ ಬಗ್ಗೆ ಆತನ ತಾಯಿ ಶಕುಂತಲಾ ದೂರು ನೀಡಿದ್ದಾಳೆ. ಸಾಧಾರಣ ಮೈಕಟ್ಟು, ದುಂಡು ಮುಖ, ಗೋದಿಕೆಂಪು ಮೈಬಣ್ಣ, 5 ಅಡಿ ಎತ್ತರ ಇರುವ ಈತ ಕನ್ನಡ ಭಾಷೆ ಮಾತನಾಡುತ್ತಾನೆ. ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾನೆ.
ಈ ಮೂವರ ಸುಳಿವು ದೊರೆತಲ್ಲಿ 08333-266033 ಇಲ್ಲವೇ ಮೊ-9480804071 ಇಲ್ಲಿಗೆ ಸಂಪರ್ಕಿಸಲು ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.