Belagavi News In Kannada | News Belgaum

11 ಸಾವಿರ ರಷ್ಯಾ ಸೈನಿಕರ ಹತ್ಯೆ ಮಾಡಿದ್ದೇವೆ ಎಂದ ಉಕ್ರೇನ್‌ ಮಿಲಿಟರಿ

ಉಕ್ರೇನ್‌: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿ 11 ದಿನಗಳಾಗಿದ್ದು, ವಿಶ್ವಾಸ ಕಳೆದುಕೊಳ್ಳದ ಉಕ್ರೇನ್‌ ಸಮಬಲದ ಪೈಪೋಟಿ ನೀಡುತ್ತಿದೆ. ಇನ್ನು 11 ದಿನಗಳಲ್ಲಿ ನಡೆದ ಯುದ್ಧದ ಹಾನಿ ಬಗ್ಗೆ ಉಕ್ರೇನ್‌ ಮಾಹಿತಿ ನೀಡಿದೆ.

ಉಕ್ರೇನ್‌ನಲ್ಲಿ ರಷ್ಯಾದ 11 ಸಾವಿರ ಯೋಧರನ್ನ ಹತ್ಯೆಗೈದಿದ್ದು, ರಷ್ಯಾದ 44 ಸೇನಾ ವಿಮಾನ, 48 ಸೇನಾ ಹೆಲಿಕಾಪ್ಟರ್‌, 285 ಯುದ್ಧ ಟ್ಯಾಂಕರ್‌, 50 ರಾಕೆಟ್‌ ಸಿಸ್ಟಮ್‌ ಮತ್ತು 985 ಸೇನಾ ವಾಹನ ಧ್ವಂಸ ಮಾಡಿರುವುದಾಗಿ ಉಕ್ರೇನ್‌ ಮಿಲಿಟರಿ ತಿಳಿಸಿದೆ.////