ರಾಜ್ಯ ಮಟ್ಟದ ಪ್ರಬಂಧ ಸ್ವರ್ಧೆ ಅನಿತಾ ಖಟಾವಕರ ದ್ವಿತೀಯ

ಘಟಪ್ರಭಾ; ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಬೆಂಗಳೂರು ಇವರು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಶಿಕ್ಷಕರಿಗಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಮಲ್ಲಾಪುರ ಪಿಜಿ (ಘಟಪ್ರಭಾ) ಶಾಲೆಯ ವಿಜ್ಞಾನ ಶಿಕ್ಷಕಿ ಕು.ಅನಿತಾ ಖಟಾವಕರ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು 4000 ರೂ.ಗಳ ಬಹುಮಾನ ಪಡೆದಿರುತ್ತಾರೆ.
ಅದೇ ರೀತಿ ವಿದ್ಯಾರ್ಥಿಗಳಿಗಾಗಿ ನಡೆದ ಡ್ರಾಯಿಂಗ್ ಸ್ಪರ್ಧೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ಕು. ಭೀಮಪ್ಪ ಬಡಿಗೇರ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು 2500 ರೂ.ಗಳ ಪಡೆದುಕೊಂಡಿರುತ್ತಾನೆ.
ಪ್ರಶಸ್ತಿ ಪಡೆದ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗೆ ಪ್ರಾಂಶುಪಾಲರು,ಶಿಕ್ಷಕರು ಮತ್ತು ಸರ್ವ ಸಿಬ್ಬಂದಿಗಳುಅಭಿನಂದಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲು ಶಿಕ್ಷಕಿ ಅನಿತಾ ಸಾಕಷ್ಟು ಬಹುಮಾನ, ಪುರಸ್ಕಾರ ಪಡೆದುಕೊಂಡಿದ್ದಾರೆ./////