Belagavi News In Kannada | News Belgaum

ಸುಟ್ಟು ಹೋದ ಟಿಸಿ 24 ಗಂಟೆಗಳಲ್ಲಿ ಬದಲಾವಣೆ

ಬೆಂಗಳೂರು: ಕೃಷಿ ಪಂಪ್‍ಸೆಟ್ ಗಳಿಗೆ ಅಳವಡಿಸಿರುವ ಟಿಸಿಗಳು ಸುಟ್ಟು ಹೋದಾಗ ಅದನ್ನು ಬದಲಿಸುವ ಕಾರ್ಯವನ್ನು 24 ಗಂಟೆಗಳಲ್ಲಿ ನಿರ್ವಹಿಸಲಾಗುತ್ತಿದೆ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ವಿಧಾನ ಪರಿಷತ್‍ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯ ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಟಿಸಿ ಹಾಕುವಲ್ಲಿ ಸ್ವಲ್ಪ ವಿಳಂಬ ವಾಗುತ್ತಿರಬಹುದು. ಆದರೆ, ನಿರಂತರವಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಟಿಸಿ ಅಳವಡಿಸುವ ಕೆಲಸವನ್ನು ಖಾಸಗಿಯವರಿಗೆ ವಹಿಸಲು ಸಾಧ್ಯವಿಲ್ಲ ಎಂದ ಅವರು, ಇದನ್ನು ಕರ್ನಾಟಕ ವಿದ್ಯುತ್ ಕಾರ್ಖಾನೆ ತಯಾರಿಸುತ್ತಿದೆ. ಖಾಸಗಿಯವರಿಗೆ ವಹಿಸಲಾಗದು ಎಂದು ಸ್ವಷ್ಟ ಪಡಿಸಿದರು.//////