Belagavi News In Kannada | News Belgaum

ಉಕ್ರೇನ್ ನಿಂದ ಜಿಲ್ಲೆಗೆ ವಿದ್ಯಾರ್ಥಿಗಳ ಆಗಮನ: ಸ್ವಾಗತ ಕೋರಿದ ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ

 

ಬೆಳಗಾವಿ, : ಉಕ್ರೇನ್ ನಿಂದ ರಕ್ಷಿಸಲ್ಪಟ್ಟ 7 ವಿದ್ಯಾರ್ಥಿಗಳು ಮುಂಬಯಿ ಮಾರ್ಗವಾಗ ಬೆಳಗಾವಿಗೆ ಆಗಮಿಸಿದರು ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ವಿದ್ಯಾರ್ಥಿಗಳನ್ನು ಸ್ವಾಗತಿಸಿದರು.

ಉಕ್ರೇನ್ ನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ 7 ವಿದ್ಯಾರ್ಥಿಗಳಾದ ಶ್ರೇಯಾ ಹೆರಕಲ್, ಅವಳಿ ಸಹೋದರಿಯಾದ ಪ್ರೀಯಾ ಲಕ್ಷ್ಮಣ ಛಬ್ಬಿ, ಪ್ರೀತಿ ಛಬ್ಬಿ, ಅಮೋಘ ಚೌಗಲೆ, ಪ್ರೀಯಾ ನಿಡಗುಂದಿ, ರಾಕೇಶ ಪೂಜಾರಿ ಮತ್ತು ನಾಗೇಶ ಪೂಜಾರಿ ಮುಂಬಯಿ ಮಾರ್ಗವಾಗಿ ಬೆಳಗಾವಿಗೆ ಆಗಮಿಸಿದರು.

ಬಳಿಕ, ಸುರಕ್ಷಿತವಾಗಿ ವಿದ್ಯಾರ್ಥಿಗಳ ಊರುಗಳಿಗೆ ಜಿಲ್ಲಾಡಳಿತದಿಂದ ಬೀಳ್ಕೊಡಲಾಯಿತು.

ಈ ಸಂದರ್ಭದಲ್ಲಿ ಶಾಸಕ ಅನಿಲ ಬೆನಕೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯರಾದ ಲಖನ್ ಜಾರಕಿಹೊಳಿ ಉಪಸ್ಥಿತರಿದ್ದರು.