Belagavi News In Kannada | News Belgaum

ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ- 2022

ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯ, ಬೆಳಗಾವಿ  ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ- 2022
ಮಹಿಳೆಯರು ತಮ್ಮಲ್ಲಿರುವ ಕೌಶಲ್ಯತೆ, ಸುಪ್ತ ಪ್ರತಿಭೆಗಳಿಗೆ ಒತ್ತು ನೀಡಿ, ಅವುಗಳನ್ನು ಕಾರ್ಯಗತವಾಗಿ ಪರಿವರ್ತಿಸಿ, ವೃತ್ತಿಪರವಾಗಿ ತೆಗೆದುಕೊಂಡು ತಮ್ಮದೇ ಆದ ಗುರುತನ್ನು ಸ್ಥಾಪಿಸಿಕೊಳ್ಳಬೇಕು ಎಂದು ಬೆಳಗಾವಿ ಮೂಲದ ಉದ್ಯಮಿ ಹಾಗೂ ಲಘು ಉದ್ಯೋಗ ಭಾರತಿಯ ರಾಜ್ಯ ಕಾರ್ಯದರ್ಶಿ ಪ್ರಿಯಾ ಪುರಾಣಿಕ ಕರೆ ನೀಡಿದರು.

ನಗರದ ಅಂಗಡಿ ತಾಂತ್ರಿಕ ಹಾಗೂ ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ಶನಿವಾರ, ದಿನಾಂಕ 05.03.2022 ರಂದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ “ಯಶಸ್ವಿ ಉದ್ಯಮಿಯಾಗಲು ಬೆಕಾದ ಗುಣಗಳು” ಕಾರ್ಯಕ್ರಮದಲ್ಲಿ ಎಲ್ಲ ಮಹಿಳೆಯರಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿ ಮಾತನಾಡಿದ ಅವರು ಪ್ರಸ್ತುತ ಸಮಯದ ಸಮಾಜದಲ್ಲಿ ಮಹಿಳೆಯರ ಪ್ರತಿಭೆ, ಸ್ಥಾನಮಾನಗಳ ಮೇಲೆ ಬೆಳಕನ್ನು ಹರಿಸಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಯಶಸ್ವಿ ಉದ್ಯಮಿಯಾಗಲು ಕೇವಲ ಹಣದ ಮೇಲೆ ಗಮನವನ್ನು ಹರಿಸದೇ ಗ್ರಾಹಕರ ಅಗತ್ಯತೆಯ ಮೇಲೆ ಕೇಂದ್ರೀಕರಿಸಬೇಕು. ಮಹಿಳೆಯರು ತಮ್ಮಲ್ಲಿರುವ ಸಾಮಥ್ರ್ಯ ಹಾಗೂ ಪ್ರತಿಭೆಯನ್ನು ಬಳಸಿಕೊಂಡು, ದೇಶ ಹಾಗೂ ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಬೇಕು. ಧೈರ್ಯಶಾಲಿತ್ವ, ಆತ್ಮವಿಶ್ವಾಸ, ತಾಳ್ಮೆಯನ್ನು ಹೊಂದಿರಬೇಕು. ಟೀಕೆಗಳನ್ನು ಎದುರಿಸುವ ಶಕ್ತಿಯನ್ನು ಹೊಂದಿರಬೇಕು. ಪ್ರತಿಯೊಬ್ಬ ವ್ಯಕ್ತಿಯೂ ಸಮಾಜದ ಏಳಿಗೆಯತ್ತ ಗಮನಹರಿಸಬೇಕು ಮತ್ತು ಸರ್ಕಾರವು ತಂದಿರುವ ಇನ್ನೋವೇಟಿವ್ ಸ್ಟಾರ್ಟ ಅಪ್ ಐಡಿಯಾಗಳ ಬಗ್ಗೆ ಅರಿವು ಹೊಂದಿರಬೇಕು. ವಿದ್ಯಾರ್ಥಿನಿಯರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಯಶಸ್ವಿ ಮಹಿಳೆಯರ ಜೀವನದಿಂದ ಸ್ಪೂರ್ತಿ ಪಡೆದು ತಾವೂ ಅವರಂತೆ ಸಮಾಜ ಹಾಗೂ ದೇಶಕ್ಕೆ ಏನಾದರೊಂದು ಕೊಡುಗೆ ನೀಡಲು ಪ್ರಯತ್ನಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಮಂಗಲ ಅಂಗಡಿ ಮಾತನಾಡಿ, ಮಹಿಳೆಯರು ಸ್ತ್ರೀ ಎಂಬ ಹಿಂಜರಿಕೆ ತಾಳದೇ ಆತ್ಮವಿಶ್ವಾಸ, ಸ್ಪರ್ಧಾಮನೋಭಾವ, ಕಠಿಣ ಸವಾಲುಗಳನ್ನು ಎದುರಿಸುವ ಶಕ್ತಿ, ತಾಳ್ಮೆ ಗಳಿಸಿ ಸಬಲೀಕರಣವನ್ನು ಸಾಧಿಸಿ ಮುನ್ನಡೆಯಬೇಕು. ಭಾರತದಲ್ಲಿ ಮಹಿಳೆಯನ್ನು ದೇವಿಯಾಗಿ ಬಿಂಬಿಸಲಾಗಿದ್ದು, ಎಲ್ಲ ಶಕ್ತಿ, ತಾಳ್ಮೆ ಮತ್ತು ಧೈರ್ಯವಿರುವ ನಿಸ್ವಾರ್ಥ ತಾಯಿಯಾಗಿದ್ದಾಳೆ. ಅದು ಮಹಿಳೆಯರ ಶಕ್ತಿಯಾಗಿದೆ. ನಾವು ಅನೇಕ ಸಂದರ್ಭಗಳಲ್ಲಿ ವಿವಿಧ ನಿರ್ಬಂಧತೆಗಳನ್ನು ಪಾಲಿಸುತ್ತೇವೆ. ಅದಕ್ಕೆ ನಾವು ಕೆಲವು ಉಪಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಸಾಮಾಜಿಕ ಬದಲಾವಣೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಹೆಜ್ಜೆ ಹಾಕಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯೆ ಪ್ರೊ. ಸಂಗೀತಾ ದೇಸಾಯಿ, ಅಂಗಡಿ ಇಂಜನೀಯರಿಂಗ್ ಕಾಲೇಜಿನ ಮಹಿಳಾ ಸೆಲ್‍ನ ಸಂಯೋಜಕಿ ಪ್ರೊ. ಶ್ರೀದೇವಿ ಕುಲಕರ್ಣಿ, ಅಂಗಡಿ ಸ್ಕೂಲ್ ಆಫ್ ಆರ್ಕಿಟೆಕ್ಚರ್‍ನ ಮಹಿಳಾ ಸೆಲ್‍ನ ಸಂಯೋಜಕಿ ಪ್ರೊ. ಅನಾಮಿಕಾ ಮೋಹಿತೆ, ಅಂಗಡಿ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಮಹಿಳಾ ಸೆಲ್‍ನ ಸಂಯೋಜಕಿ ಪ್ರೊ. ರಶ್ಮಿ ಮಹೀಂದ್ರಕರ, ಅಂಗಡಿ ಇಂಟರ್‍ನ್ಯಾಷನಲ್ ಸ್ಕೂಲಿನ ಅರುಣಾ ಸಾಖರೆ, ಈ ಕಾರ್ಯಕ್ರಮದ ಸಂಯೋಜಕಿಯರಾದ ಪ್ರೊ. ಪ್ರಿಯಾಂಕಾ ಪೂಜಾರಿ, ಪ್ರೊ. ಧನಶ್ರಿ ಕುಲಕರ್ಣಿ, ಪ್ರೊ. ಶೀತಲ ಪಾಟೀಲ, ಪ್ರೊ. ವಿನಯಚಂದ್ರಿಕಾ ಕಾಳೆ, ಪ್ರೊ. ಮಂಜುಶ್ರೀ ಹಾವಣ್ಣವರ, ತೇಜಸ್ವಿನಿ ಸೊಬರದ ಸೇರಿದಂತೆ ಎಲ್ಲ ಉಪನ್ಯಾಸಕಿಯರು, ಪ್ರಾಧ್ಯಾಪಕಿಯರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಪ್ರೊ. ಪ್ರಿಯಾಂಕಾ ಪೂಜಾರಿ ನಿರೂಪಿಸಿದರು. ಪ್ರೊ. ಸಂಗೀತಾ ದೇಸಾಯಿ ವಂದಿಸಿದರು.