ಹಾಡಹಗಲೇ ಪೊಲೀಸರ ಬೈಕ್ ಕದ್ದೊಯ್ದ ಖತರ್ನಾಕ್ ಕಳ್ಳ

ಬೆಂಗಳೂರು: ಕಳ್ಳನೊಬ್ಬ ಪೊಲೀಸ್ ಪೇದೆಯೊಬ್ಬರ ಬೈಕ್ ಅನ್ನೇ ಕದ್ದೊಯ್ದ ಘಟನೆ ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿ ಸಂಭವಿಸಿದೆ.
ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೆಎಸ್ಆರ್ಪಿ 4ನೇ ಬೆಟಾಲಿಯನ್ ಮುಖ್ಯಪೇದೆ ಉಮೇಶ್ ಎಂಬುವವರ ಬೈಕ್ ಕಳ್ಳತನವಾಗಿದೆ. ಫೆ.9ರಂದು ಕೆಲಸದ ನಿಮಿತ್ತ ಖಾಸಗಿ ಬ್ಯಾಂಕ್ಗೆ ಆಗಮಿಸಿದ್ದ ಉಮೇಶ್, ರಸ್ತೆಬದಿ ಬೈಕ್ ನಿಲ್ಲಿಸಿ ಬ್ಯಾಂಕ್ ಒಳಗೆ ಹೋಗಿದ್ದರು. ವಾಪಸ್ ಬರುವಷ್ಟರಲ್ಲಿ ಬೈಕ್ ಸಮೇತ ಕಳ್ಳ ಪರಾರಿಯಾಗಿದ್ದಾನೆ. ಕೋರಮಂಗಲ ಪೊಲೀಸ್ ಠಾಣೆಗೆ ಉಮೇಶ್ ದೂರು ನೀಡಿದ್ದು, ಬೈಕ್ ಕಳ್ಳನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.//////