Belagavi News In Kannada | News Belgaum

ಲಾರಿ, ಬೈಕ್ ಅಪಘಾತ; ಲಾರಿ ಚಾಲಕನಿಗೆ 9 ವರ್ಷದ ನಂತರ ಶಿಕ್ಷೆ

ಧಾರವಾಡ: 2013ರಲ್ಲಿ ನಡೆದ ಲಾರಿ, ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು ಲಾರಿ ಚಾಲಕನಿಗೆ ಒಂದು ವರ್ಷದ 6 ತಿಂಗಳ ಕಾಲ ಶಿಕ್ಷೆ ಹಾಗೂ 11 ಸಾವಿರ ದಂಡ ವಿಧಿಸಿದೆ.

ಮಂಜುನಾಥ್ ಖಜ್ಜಿಡೊಣಿ ಶಿಕ್ಷೆಗೆ ಒಳಗಾದ ಲಾರಿ ಚಾಲಕ. ಮಂಜುನಾಥ್ ಅವರ ನಿರ್ಲಕ್ಷ್ಯದಿಂದ 2013ರಲ್ಲಿ ಬೈಕ್ ಸವಾರ ಕೀರ್ತವಂತ ಕಳ್ಳಿಮನಿಗೆ ಸ್ಥಳದಲ್ಲೇ ಸಾವನ್ನಪ್ಪಿದ್ದ. ಕೀರ್ತವಂತ ಹುಬ್ಬಳ್ಳಿ, ಧಾರವಾಡ ಬೈಪಾಸ್ ಮಧ್ಯೆ ಬರುತ್ತಿದ್ದರು. ಹುಬ್ಬಳ್ಳಿ ಕಡೆಯಿಂದ ಮಂಜುನಾಥ್ ಬೆಳಗಾವಿ ಕಡೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಲಾರಿ ಚಾಲಕ ಮಂಜುನಾಥ್‌, ಬೈಕ್ ಸವಾರ ಕಿರ್ತವಂತ ಕಳ್ಳಿಮನಿಗೆ ಡಿಕ್ಕಿ ಹೊಡೆದಿದ್ದರಿಂದ, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅಪಘಾತ ಪಡಿಸಿದ ಲಾರಿ ಚಾಲಕನಿಗೆ ಧಾರವಾಡದ ಎರಡನೇ ಜೆಎಂಎಫ್‍ಸಿ ನ್ಯಾಯಾಲಯ ಒಂದು ವರ್ಷ 6 ತಿಂಗಳ ಕಾಲ ಶಿಕ್ಷೆ ಹಾಗೂ 11 ಸಾವಿರ ರೂ. ದಂಡ ವಿಧಿಸಿದೆ.

ಅಪಘಾತದ ತನಿಖೆ ನಡೆಸಿದ್ದ ಪೊಲೀಸರು, ಲಾರಿ ಚಾಲಕನ ಮೇಲೆ ಗಂಭೀರ ಆರೋಪ ಕಂಡು ಬಂದ ಕಾರಣ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ಮಾಡಿದ ನ್ಯಾಯಾಲಯ ಲಾರಿ ಚಾಲಕನ ಮೇಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದು ವರ್ಷ 6 ತಿಂಗಳ ಶಿಕ್ಷ ವಿಧಿಸಿ ಆದೇಶಿಸಿದೆ. ಅಲ್ಲದೇ 11 ಸಾವಿರ ದಂಡ ಕೂಡಾ ಆ ಲಾರಿ ಚಾಲಕನಿಗೆ ವಿಧಿಸಿ ಆದೇಶಿಸಿದೆ./////