Belagavi News In Kannada | News Belgaum

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಪೀಠ ನಿರ್ಮಾಣಕ್ಕೆ ನಿವೇಶನ ಮಂಜೂರು

ಬೆಳಗಾವಿ, ಮಾರ್ಚ್ 8 : ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಪೀಠಕ್ಕೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದ ರಿ.ಸ.ನಂ.189/ಅ2 ದಲ್ಲಿರುವ 01 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಗೌರವಾನ್ವಿತ ನ್ಯಾಯಾಂಗ ಸದಸ್ಯರಾದ ಟಿ.ನಾರಾಯಣಸ್ವಾಮಿ ಮತ್ತು ವಿಲೇಖನಾಧಿಕಾರಿಗಳಾದ ಕೆ.ಎಸ್.ನಾಗರತ್ನರವರಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಉಚಗಾಂವ ಕಂದಾಯ ನಿರೀಕ್ಷಕರಾದ ಉದಯ ಖಾತೆದಾರ ಅವರು ಮಾರ್ಚ್ 07 ರಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಭೂ ಸ್ವಾದೀನ ಪತ್ರ(ಕಬ್ಜ ಪಾವತಿ) ಯನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸಂಪತ್ ನೇಮಗೌಡ, ಸಂತೋಷ ಶಹಪುರ, ಎಸ್.ಎನ್.ಗೌಡರ್ ರವರುಗಳು ಹಾಗೂ ಬೆಳಗಾವಿ ವಕೀಲರ ಸಂಘದ ಉಪಾಧ್ಯಕ್ಷರಾದ ಸುದೀರ ಚವ್ಹಾಣ, ಜಂಟಿ ಕಾರ್ಯದರ್ಶಿಗಳಾದ ಬಂಟಿ ಕಪಾಹಿ, ಮ್ಯಾನೆಜಿಂಗ್ ಕಮೀಟಿ ಸದಸ್ಯರಾದ ಇರ್ಫಾನ್ ಬಯಾಲ್, ಎನ್.ಆರ್.ಪಾಟೀಲ್, ಗ್ರಾಮ ಲೆಕ್ಕಾಧಿಕಾರಿಗಳು ಹಿಂಡಲಗಾ, ಭೂಮಾಪಕರು ಅನಂತ ಶಿಂಧೆತಾಲೂಕಾ ಉಪಸ್ಥಿತರಿದ್ದರು.