Belagavi News In Kannada | News Belgaum

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಪ್ರಪಂಚ ಮುಂದುವರೆದರೂ ಸ್ತ್ರೀ ಸಬಲೀಕರಣಕ್ಕಾಗಿ ಹೋರಾಟ ನಿಂತಿಲ್ಲ: ಸಂಸದೆ ಅಂಗಡಿ ಕಳವಳ

ಬೆಳಗಾವಿ, ಮಾ.8  : ಇಂದು ಪ್ರಪಂಚದ ಎಲ್ಲ ದೇಶಗಳು ಅಭಿವೃದ್ಧಿಯಲ್ಲಿ ಸಾಗುತ್ತಿದ್ದರೂ ಮಹಿಳೆಯರಿಗೆ ಸರಿಯಾದ ಹಕ್ಕು ಸಿಗುತ್ತಿಲ್ಲ. ಹೀಗಾಗಿ ಸ್ತ್ರೀ ಸ್ವಾತಂತ್ಯ್ರ, ಸಬಲೀಕರಣಕ್ಕಾಗಿ ನಮ್ಮ ದೇಶದಲ್ಲಿಯೂ ಈಗಲೂ ಹೋರಾಟ ಮುಂದುವರೆದಿದೆ. ಎಂದು ಸಂಸದೆ ಮಂಗಲಾ ಅಂಗಡಿ ಅವರು ಕಳವಳ ವ್ಯಕ್ತಪಡಿಸಿದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಬೆಳಗಾವಿ ಮಹಿಳಾ ಘಟಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬೆಳUವಿ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಸಭಾ ಭವನದಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಸಂಸದೆ ಮಂಗಲಾ ಅಂಗಡಿ ಅವರು ಸ್ತ್ರೀ ಸಬಲೀಕರಣ ಇನ್ನೂ ತೀವ್ರಗೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿ ಭಾUವಹಿಸಿ ಮಾತನಾಡಿದ ನಗರ ಸೇವಕ ಮಂಗೇಶ ಪವಾರ ಅವರು ಮಹಿಳೆ ಸಮಾಜದ ಶಕ್ತಿ ಮತ್ತು ಕುಟುಂಬದ ಕಣ್ಣು, ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿದ್ದಾಳೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಶಿಕಾಂತ ಮುನ್ಯಾಳ ಮಾತನಾಡಿ ಇಲಾಖೆಯ ಎಲ್ಲ ಮಹಿಳಾ ಕಾರ್ಯಕರ್ತೆಯರು ಕೋವಿಡ್ ಸಂದರ್ಭದಲ್ಲಿ ಮಾಡಿದ ಕಾರ್ಯವನ್ನು ಶ್ಲಾಘಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಕೋರಿದರು.
ಭಾರತೀಯ ರೆಡ್‍ಕ್ರಾಸ ಸಂಸ್ಥೆಯ ಬೆಳಗಾವಿ ಮಹಿಳಾ ಘಟಕದ ಸಂಚಾಲಕಿ ಪ್ರಿಯಾ ಪುರಾಣಿಕ ಅವರು ಮಾತನಾಡಿ ಒಬ್ಬ ನಾರಿ ಹತ್ತು ಪುರುಷರಿಗೆ ಸಮಾನ. ತನ್ನ, ಶಕ್ತಿ, ಯುಕ್ತಿ, ಛಲದಿಂದ ಮಹಿಳೆ ಈಗ ಎಲ್ಲ ರಂಗಗಳಲಿಯೂ ಮುಂಚೂಣಿಯಲ್ಲಿದ್ದಾಳೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆ ಚೇರಮನ್ ಅಶೋಕ ಬಾದಾಮಿ ಅವರು ಎಲ್ಲ ಮಹಿಳೆಯರಿಗೆ ಅವರವರ ಹಕ್ಕುಗಳು ದೊರೆಯುವಂತಾಗಬೇಕು ಮತ್ತು ಮಹಿಳೆಯರ ಮೇಲಿನ ಶೋಷಣೆ ನಿಲ್ಲಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಂಸದೆ ಮಂಗಲಾ ಅಂಗಡಿ, ಕಾದ್ರೋಳ್ಳಿ ಹಾಗೂ ಸರಿತಾ ಸಾಣಿಕೊಪ್ಪ ಅವರನ್ನು ಸಾಧಕಿಯರು ಎಂದು ಗುರುತಿಸಿ ರೆಡ್‍ಕ್ರಾಸ್ ವತಿಯಿಂದ ಸತ್ಕರಿಸಲಾಯಿತು. ಕಾಯಕಲ್ಪ ಕಾರ್ಯಕ್ರಮದಡಿ ಓಕಿಂS ಸರ್ಟಿಫಿಕೇಶನಗೆ ಆಯ್ಕೆಯಾದ ರಾಮನಗರ ನ.ಪ್ರಾ.ಆ.ಕೇಂದ್ರದ ವ್ಶೆದ್ಯಾಧಿಕಾರಿ, ಹಾಗೂ ಸಿಬ್ಬಂದಿಯನ್ನು ಬೆಳಗಾವಿ ತಾಲೂಕಾ ಆರೋಗ್ಯಾಧಿಕಾರಿಗಳ ಕಚೇರಿಯಿಂದ ಸತ್ಕರಿಸಲಾಯಿತು.

ಕವಿತಾ ಬಡಿಗೇರ ಪ್ರಾರ್ಥಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಕಾರ್ಯದರ್ಶಿ ಡಾ. ಡಿ.ಎನ್.ಮಿಸಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿ.ಜಿ. ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು.ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಖಜಾಂಚಿ ನಿವೃತ್ತ ಕರ್ನಲ್ ವಿನೋದಿನಿ ಶರ್ಮಾ ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳಾದ ಡಾ. ಅನಿಲ ಕೊರಬು ರೆಡ್ ಕ್ರಾಸ್ ಸಂಸ್ಥೆ ಸಿಬ್ಬಂದಿ, ತಾಲೂಕಾ ಆರೋಗ್ಯ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿ ಸೇರಿ ಹಲವರು ಉಪಸ್ಥಿತರಿದ್ದರು.