Belagavi News In Kannada | News Belgaum

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಪೀಠ ನಿರ್ಮಾಣಕ್ಕೆ ನಿವೇಶನ ಮಂಜೂರು

ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಪೀಠ ನಿರ್ಮಾಣಕ್ಕೆ ನಿವೇಶನ ಮಂಜೂರು

ಬೆಳಗಾವಿ, ಮಾ.8 : ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ಪೀಠಕ್ಕೆ ಬೆಳಗಾವಿ ಜಿಲ್ಲೆಯ ಹಿಂಡಲಗಾ ಗ್ರಾಮದ ರಿ.ಸ.ನಂ. 189/ಅ2 ದಲ್ಲಿರುವ 01 ಎಕರೆ ಜಮೀನನ್ನು ಮಂಜೂರು ಮಾಡಲಾಗಿದ್ದು, ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಗೌರವಾನ್ವಿತ ನ್ಯಾಯಾಂಗ ಸದಸ್ಯರಾದ .ಟಿ.ನಾರಾಯಣಸ್ವಾಮಿ ಮತ್ತು ವಿಲೇಖನಾಧಿಕಾರಿಗಳಾದ ಕೆ.ಎಸ್.ನಾಗರತ್ನರವರಿಗೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆÀ ಉಚಗಾಂವ ಕಂದಾಯ ನಿರೀಕ್ಷಕರಾದ, ಉದಯ ಖಾತೆದಾರ ಅವರು ಮಾರ್ಚ್ 7 ರಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪತ್ರ(ಕಬ್ಜ ಪಾವತಿ)ವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ಸಂಪತ್ ನೇಮಗೌಡ, ಸಂತೋಷ್ ಶಹಾಪುರ, ಎಸ್. ಎನ್. ಗೌಡರ್ ರವರುಗಳು ಹಾಗೂ ಬೆಳಗಾವಿ ವಕೀಲರ ಸಂಘದ ಉಪಾಧ್ಯಕ್ಷರಾದ ಸುಧೀರ್ ಚವ್ಹಾಣ, ಜಂಟಿ ಕಾರ್ಯದರ್ಶಿಗಳಾದ ಬಂಟಿ ಕಪಾಹಿ, ಮ್ಯಾನೆಜಿಂಗ್ ಕಮೀಟಿ ಸದಸ್ಯರಾದ ಇರ್ಫಾನ್ ಬಯಾಲ್ ಎನ್.ಆರ್.ಪಾಟೀಲ್, ಗ್ರಾಮ ಲೆಕ್ಕಾಧಿಕಾರಿಗಳು ಹಿಂಡಲಗಾ, ಭೂಮಾಪಕರು ಅನಂತ ಶಿಂಧೆತಾಲೂಕಾ ಉಪಸ್ಥಿತರಿದ್ದರು.////

ವಾಯಯ್ಯ ಪದವೀಧರರು ಹಾಗೂ ಶಿಕ್ಷಕರ ಮತ ಕ್ಷೇತ್ರ: ಹೆಸರು ನೋಂದಣಿಗೆ ಅರ್ಜಿ

ಬೆಳಗಾವಿ, ಮಾ.8 : ವ್ಯಾಪ್ತಿಯಲ್ಲಿ ಕರ್ನಾಟಕ ವಾಯಯ್ಯ ಪದವೀಧರರು ಹಾಗೂ ಶಿಕ್ಷಕರ ಮತ ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಅರ್ಹ ಮತದಾರರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು.
ಪದವೀಧರ ಮತಕ್ಷೇತ್ರದಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಇರಬೇಕಾದ ಅರ್ಹತೆಗಳು:
ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ನಿವಾಸಿಯಾಗಿರಬೇಕು. 2018ರ ನವೆಂಬರ್ 1ರೊಳಗಾಗಿ ಪದವೀಧರರಾಗಿರಬೇಕು. ನಮೂನೆ 18ರಲ್ಲಿ ದ್ವಿಪ್ರತಿಯಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ದೃಢೀಕೃತ ಪದವಿ ಪ್ರಮಾಣ ಪತ್ರ ಅಥವ ವರ್ಷದ ಅಂಕಪಟ್ಟಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯ ರಹವಾಸಿಯಾಗಿದ್ದರ ಬಗ್ಗೆ ದಾಖಲೆ, ಚುನಾವಣೆ ಗುರುತಿನ ಚೀಟಿ ಅಥವ ಆಧಾರ ಕಾರ್ಡ್, ಇತ್ತೀಚಿನ ಭಾವಚಿತ್ರ ಹೊಂದಿರಬೇಕು.
ಶಿಕ್ಷಕರ ಮತಕ್ಷೇತ್ರದಲ್ಲಿಹೆಸರು ನೋಂದಾಯಿಸಿಕೊಳ್ಳಲು ಇರಬೇಕಾದ ಅರ್ಹತೆಗಳು:
ಅರ್ಜಿದಾರರು 2021ರ ನವೆಂಬರ್ 01ರಿಂದ ಹಿಂದಿನ 6 ವರ್ಷಗಳಲ್ಲಿ 3 ವರ್ಷಗಳ ಕಾಲದ ಅವಧಿಗೆ ಪ್ರೌಢ ಶಾಲೆ ಅಥವ ಅದಕ್ಕಿಂತ ಹೆಚ್ಚಿನ ತರಗತಿ ಶಾಲೆ ಕಾಲೇಜುಗಳಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಿರಬೇಕು. ನಮೂನೆ 19ರಲ್ಲಿ ದ್ವಿಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು. 2021ರ ನವೆಂಬರ್ 1ರಿಂದ ಹಿಂದಿನ 6 ವರ್ಷಗಳಲ್ಲಿ 3 ವರ್ಷಗಳ ಕಾಲದ ಅವಧಿಗೆ ಪ್ರೌಢ ಶಾಲೆ ಅಥವ ಅದಕ್ಕಿಂತ ಹೆಚ್ಚಿನ ತರಗತಿ ಶಾಲೆ, ಕಾಲೇಜುಗಳಲ್ಲಿ ಬೋಧಕರಾಗಿ ಕಾರ್ಯನಿರ್ವಹಿಸಿದ್ದರ ಬಗ್ಗೆ ಶಾಲಾ ಕಾಲೇಜು ಮುಖ್ಯಸ್ಥರುಗಳ ಪ್ರಮಾಣ ಪತ್ರ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾಮಾನ್ಯ ರಹವಾಸಿಯಾಗಿದ್ದರ ಬಗ್ಗೆ ದಾಖಲೆ, ಚುನಾವಣೆ ಗುರುತಿನ ಚೀಟಿ ಅಥವ ಆಧಾರ್ ಕಾರ್ಡ್, ಇತ್ತೀಚಿನ ಭಾವಚಿತ್ರ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ಶಾಖೆ, ರಿಸಾಲ್ದಾರ ಗಲ್ಲಿ, ಅಥವ ಮೊಬೈಲ್ ಸಂಖ್ಯೆ 9986835809, 9591642647ಯನ್ನು ಸಂಪರ್ಕಿಸಬಹುದು ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಮಾ.12ರಿಂದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಪರೀಕ್ಷೆ: 144 ಸೆಕ್ಷನ್ ಜಾರಿ

ಬೆಳಗಾವಿ, ಮಾ.8 : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ನಗರದಲ್ಲಿ ಮಾರ್ಚ್ 12ರಿಂದ 16ರ ವರೆಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿದ್ದು ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ.
ನಗರದ ಕಾಲೇಜು ರಸ್ತೆಯಲ್ಲಿರುವ ಲಿಂಗರಾಜ ಪಿಯು ಕಾಲೇಜು, ಟಿಳಕವಾಡಿಯಲ್ಲಿರುವ ರಾಣಿ ಪಾರ್ವತಿ ದೇವಿ ಪಿಯು ಕಾಲೇಜು, ಕಾಕತಿವೇಸ್ ರಸ್ತೆಯಲ್ಲಿರುವ ಸರ್ಕಾರಿ ಸರದಾರ್ಸ್ ಪಿಯು ಕಾಲೇಜು, ನೆಹರು ನಗರದಲ್ಲಿರುವ ಜಗದೀಶ ಎಸ್‍ಎಸ್‍ಎಸ್ ಸಮಿತಿ ಸವದತ್ತಿ ಪಿಯು ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿರ್ಮಿಸಲಾಗಿದೆ.
ಕೋವಿಡ್ ನಿಯಮಗಳನುಸಾರ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು ನಿಷೇಧಾಜೆÐ ಇರುವುದರಿಂದ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಯಾರೋಬ್ಬರೂ ಮಾರಕಾಸ್ತ್ರಗಳನ್ನು ಬಳಸುವುದು, ಹೊತ್ತು ತಿರುಗುವುದನ್ನು ಪ್ರತಿಬಂಧಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿ ಹಾಗೂ ಪೊಲೀಸ್ ಕಮಿಷನರ್ ಡಾ. ಬೋರಲಿಂಗಯ್ಯ ಎಂ.ಬಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////