Belagavi News In Kannada | News Belgaum

ಬೈಕ್ ಹತ್ತಿ ಸಮಾನತೆಯ ಸಂದೇಶ ಸಾರಿದ ವಿದ್ಯಾರ್ಥಿನಿಯರು

ಬೆಂಗಳೂರು: ಸುರಾನಾ ಕಾಲೇಜಿನ ವಿದ್ಯಾರ್ಥಿನಿಯರು ಇಂದು ಬೈಕ್ ರ‍್ಯಾಲಿ ಆಯೋಜಿಸಿ ಸಮಾನತೆಯ ಸಂದೇಶ ಸಾರುವ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದರು.

ಸೌತ್ ಎಂಡ್ ಸರ್ಕಲ್ ಬಳಿಯಿರುವ ಸುರಾನಾ ಕಾಲೇಜಿನ ಬಳಿಯಿಂದ ಪ್ರಾರಂಭವಾದ ಬೈಕ್ ರ‍್ಯಾಲಿಗೆ ಮೈಕ್ರೋ ಲ್ಯಾಬ್‍ನ ಸಿಎಂಡಿ ದಿಲೀಪ್ ಸುರಾನಾ ಹಾಗೂ ರಾಷ್ಟ್ರೀಯ ಹೈಜಂಪ್ ಕ್ರೀಡಾಪಟು ಸಹನಾ ಕುಮಾರಿ ಚಾಲನೆ ನೀಡಿದರು.

ನೂರಕ್ಕೂ ಹೆಚ್ಚು ಬೈಕ್‍ಗಳ ಮೇಲೆ ಬ್ರೇಕ್ ದ ಬಯಾಸ್ ಭಿತ್ತಿಪತ್ರಗಳನ್ನು ಹಿಡಿದುಕೊಂಡಂತಹ ವಿದ್ಯಾರ್ಥಿನಿಯರು ತಂಡವನ್ನು ಕಾಲೇಜಿನ ಹಿರಿಯ ವಿದ್ಯಾರ್ಥಿ ನ್ಯಾಷನಲ್ ಬೈಕ್ ರೇಸರ್ ಐಶ್ವರ್ಯಾ ಪಿಸೆ ನಗರದ ವಿವಿಧ ಭಾಗಗಳಲ್ಲಿ ಮುನ್ನಡೆಸಿದರು. ಮಹಿಳಾ ಮತ್ತು ಪುರುಷ ಸಮಾನತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಸುರಾನಾ ಕಾಲೇಜಿನ ಸ್ಟೂಡೆಂಟ್ ಕೌನ್ಸಿಲ್ ಮತ್ತು ಶಿ ಸೆಲ್ (ಸೆಕ್ಸುಯಲ್ ಹರ್ರಾಸ್‍ಮೆಂಟ್ ಎಲಿಮಿನೇಷನ್) ಸೆಲ್ ಆಯೋಜಿಸಿದ್ದ ಬೈಕ್ ರ‍್ಯಾಲಿ ವಿಧಾನಸೌಧದಲ್ಲಿ ಸಮಾಪ್ತಿಯಾಯಿತು.//////