Belagavi News In Kannada | News Belgaum

ದಾಖಲಾತಿ ನೀಡಲು ಲಂಚ ಬೇಡಿಕೆಯಿಟ್ಟ ಸಬ್ ರಿಜಿಸ್ಟ್ರಾರ್ ಮತ್ತು ಬಾಂಡ್ ರೈಟರ್

ಬೆಳಗಾವಿ: ಪಿತ್ರಾರ್ಜಿತ ಆಸ್ತಿ ದಾಖಲಾತಿಗಳನ್ನು ನೀಡಲು  4,000 ರೂ. ಲಂಚಕ್ಕೆ ಬೇಡಿಕೆಯಿಟ್ಟ ಅಧಿಕಾರಿಗಳಿಬ್ಬರಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬುಧವಾರ  ಶಾಕ್‌ ನೀಡಿದೆ.

ಸವದತ್ತಿ ತಾಲೂಕು ಮುರಗೋಡದ ಸಬ್ ರಿಜಿಸ್ಟ್ರಾರ್ ಸಂಜೀವ ವೀರಭದ್ರ ಕಪಲಿ ಮತ್ತು  ಪರವಾಗಿ ಲಂಚವನ್ನು ಸ್ವೀಕರಿಸಿದ ಬಾಂಡ್ ರೈಟರ್  ಶಿವಯೋಗಿ ಶಂಕರಯ್ಯ ಮಲ್ಲಯ್ಯನವರನ್ನು  ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ತನ್ನ ದಾಖಲಾತಿಗಳನ್ನು ನೀಡಲು ಸಬ್ ರಿಜಿಸ್ಟ್ರಾರ್  ಅಧಿಕಾರಿಗಳು ವಿಳಂಬ ತೋರಿ, ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಶಿವಪ್ಪ ವರಗಣ್ಣವರ ಎಸಿಬಿಗೆ ದೂರು ಸಲ್ಲಿಸಿದರು.

ದೂರಿನ ಆಧಾರದ ಮೇಲೆ  ಅಧಿಕಾರಿಗಳು ದಾಳಿ ನಡೆಸಿ , ಲಂಚ ಪಡೆಯುವ ಸ್ವೀಕರಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಆರೋಪಿಗಳನ್ನು ಬಂಧಿಸಿದ್ದಾರೆ.

ಎಸಿಬಿ (ಉತ್ತರ ವಲಯ) ಎಸ್ಪಿ ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಹಾಗೂ ಡಿವೈಎಸ್ಪಿ ಕರುಣಾಕರಶೆಟ್ಟಿ ಮತ್ತು ಇನಸ್ಪೆಕ್ಟರ್ ಎ.ಎಸ್.ಗುದಿಗೊಪ್ಪ ಇವರ ನೇತೃತ್ವದಲ್ಲಿ ದಾಳಿಯನ್ನು ನಡೆಸಲಾಯಿತು./////