Belagavi News In Kannada | News Belgaum

ಟ್ರಕ್​ ಗೆ ಕಾರು ಡಿಕ್ಕಿ; ನಾಲ್ವರ ದುರ್ಮರಣ

ಕಾನ್ಪುರ: ವೇಗವಾಗಿ ಬರುತ್ತಿದ್ದ ಟ್ರಕ್​ಗೆ ದೆಹಲಿ ನೋಂದಾಯಿತ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು , ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆಯು ಕಾನ್ಪುರದಲ್ಲಿ ನಡೆದಿದೆ.

ಘಟಂಪುರ ಕಡೆಗೆ ಹೊರಟಿದ್ದ ಕಾರು ಅಪಘಾತಕ್ಕೀಡಾಗುತ್ತಿದ್ದಂತೆಯೇ ಟ್ರಕ್​ ಚಾಲಕ ಹಾಗೂ ಕ್ಲೀನರ್​ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಪೊಲೀಸರು ಮೊದಲು ಮೃತಪಟ್ಟವರಲ್ಲಿ ಒಬ್ಬಾತನ ಹೆಸರು ನಿತಿನ್​ ಎಂದು ಗುರುತಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಅಪಘಾತದ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಹೋದರಿಯರು ಮತ್ತೊಬ್ಬ ವ್ಯಕ್ತಿಯನ್ನು ಸಂದೀಪ್​ ಎಂದು ಗುರುತಿಸಿದ್ದಾರೆ. ನಿತಿನ್​ ಮದುವೆಗೆ ಹೊರಟಿದ್ದ ಎನ್ನಲಾಗಿದೆ. ಸಂದೀಪ್​ ಹಾಗೂ ನಿತಿನ್​ ಇಬ್ಬರೂ ಕಾನ್ಪುರ ಜಿಲ್ಲೆಯ ಶಿವರಾಜಪುರ ನಿವಾಸಿಗಳು ಎಂದು ತಿಳಿದುಬಂದಿದೆ.
ಮೃತಪಟ್ಟ ಇನ್ನೊಬ್ಬ ಬಾಲಕನನ್ನು ಅವನೀಶ್​ ಎಂದು ಗುರುತಿಸಲಾಗಿದೆ. ಈತ 9ನೇ ತರಗತಿ ವಿದ್ಯಾರ್ಥಿಯಾಗಿದ್ದ. ಗಾಯಗೊಂಡವರಲ್ಲಿ ಒಬ್ಬನನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ./////