ಕೊಣ್ಣೂರು ಬಸ್ ನಿಲ್ದಾಣ ಉದ್ಘಾಟಿಸಿದ ಪವಾಡೇಶ್ವರ ಸ್ವಾಮಿಜೀ

ಗೋಕಾಕ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಸೂಚನೆ ಮೆರೆಗೆ ತಾಲೂಕಿನ ಕೊಣ್ಣೂರು ಗ್ರಾಮದ ಬಸ್ ನಿಲ್ದಾಣಕ್ಕೆ ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ ಬಸ್ ನಿಲ್ದಾಣ ದುರಸ್ತಿಗೊಳಿಸಿ, ಹೈಟೆಕ್ ಸ್ಪರ್ಶ ನೀಡಲಾಗಿದ್ದು ಶ್ರೀ ಮ.ಗ.ಚ ಪವಾಡೇಶ್ವರ ಮಹಾಸ್ವಾಮಿಗಳು ಇಂದು ಉದ್ಘಾಟಿಸಿದ್ದಾರೆ.
ಹಾಳು ಕೊಂಪೆಯಂತಿದ್ದ ತಾಲೂಕಿನ ಕೊಣ್ಣೂರು ಗ್ರಾಮದ ಬಸ್ ನಿಲ್ದಾಣದ ಸ್ಥಿತಿಯನ್ನು ಮನಗಂಡ ಸತೀಶ ಜಾರಕಿಹೊಳಿ ಅವರು, ಇದನ್ನು ದುರಸ್ತಿಗೊಳಿಸಿ ನಿಲ್ದಾಣವನ್ನು ಪ್ರಮಾಣಿಕರಿಗೆ ಮುಕ್ತ ಮಾಡಿಕೊಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಸತೀಶ ಜಾರಕಿಹೊಳಿ ಪೌಂಡೇಶನ್ ಕಾರ್ಯರ್ತರು ನಿಲ್ದಾಣವನ್ನು ಸ್ವಚ್ಛತೆಗೊಳಿಸಿ ಅದಕ್ಕೆ ಹೊಸ ರೂಪ ನೀಡಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಯುವ ನಾಯಕ ರಾಹುಲ್ ಜಾರಕಿಹೊಳಿ ಭೇಟಿ ನೀಡಿ ನಿಲ್ದಾಣದ ಸ್ವಚ್ಛತೆ ಕಾರ್ಯವನ್ನು ವೀಕ್ಷಿಸಿ, ಸ್ಥಳೀಯ ಗ್ರಾಮಸ್ಥರಿಗೆ ನಿಲ್ದಾಣ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದರು.
ಹದಗೆಟ್ಟ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ: ಬಸ್ ನಿಲ್ದಾಣದಲ್ಲಿ ಸಾರಾಯಿ ಬಾಟಲ್ , ಅವ್ಯವಸ್ಥೆ, ಬಿಳುವ ಹಂತ ತಲುಪಿದ್ದು, ಇದರ ದುಸ್ಥಿತಿ ಬಗ್ಗೆ ಕೇಳುವವರೇ ಇಲ್ಲದಂತಾಗಿತ್ತು. ಗ್ರಾಮ ಪಂಚಾಯಿತಿಗೆ ಹೊಂದಿಕೊಂಡ ಬಸ್ ನಿಲ್ದಾಣದ ಮೇಲ್ಛಾವಣಿಯ ಪದರು ಕಳೆದ ಎರಡು ವರ್ಷಗಳಿಂದ ಉದುರುತ್ತ ತನ್ನ ಅಸ್ತಿತ್ವ ಕಳೆದುಕೊಂಡು ಅಪಾಯದ ಅಂಚು ತಲುಪಿತ್ತು ಇದನ್ನು ಸ್ಛಚ್ಛತೆಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು.
ಸಾರ್ವಜನಿಕರು ಪ್ರಯಾಣಕ್ಕೆಂದು ಬಸ್ ನಿಲ್ದಾಣಕ್ಕೆ ಬಂದರೆ ಅಲ್ಲಿ ಪುರುಷ ಹಾಗೂ ಮಹಿಳಾ ಪ್ರತ್ಯೇಕ ಕೊಠಡಿಗಳಲ್ಲಿನ ಮೇಲ್ಛಾವಣಿ ಬೀಳುವ ಹಂತ ತಲುಪಿದ್ದು ಪ್ರಯಾಣಿಕರು ಹಾಗೂ ಶಾಲಾ ಮಕ್ಕಳು ಸುರಕ್ಷಿತ ವಿಶ್ರಾಂತಿಗೆ ಪರಿತಪಿಸುವಂತಾಗಿದೆ. ಇದರಿಂದಾಗಿ ಪ್ರಯಾಣಿಕರು ನಿಲ್ದಾಣದ ಹೊಗಡೆಯೇ ಬಸ್ ಕಾಯುವಂತಹ ಸ್ಥಿತಿ ಇತ್ತು.
ಪ್ರಯಾಣಿಕರಿಗೆ ಆಶ್ರಯ ನೀಡಬೇಕಿರುವ ಬಸ್ ನಿಲ್ದಾಣ ಅಪಾಯದ ಸ್ಥಿತಿ ತಲುಪಿದ್ದರೂ ಇಲ್ಲಿನ ಅಧಿಕಾರಿಗಳು ಗಮನಹರಿಸಿರಲಿಲ್ಲ ಸತೀಶ ಜಾರಕಿಹೊಳಿ ಪೌಂಡೇಶನ್ ಇಂದು ಎಲ್ಲಾ ಸ್ವಚ್ಛತೆಗೊಳಿಸಿ ಪ್ರಯಾಣಿಕರಿಗೆ ಕುಳಿತುಕೊಳ್ಳು ಮುಕ್ತಮಾಡಿಕೊಟ್ಟಿದೆ. ಇಲ್ಲಿನ ಗ್ರಾಮಸ್ಥರು ಸತೀಶ ಜಾರಕಿಹೊಳಿ ಪೌಂಡೇಶನ್ ಗೆ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಜುಬೇರ್ ಮಿರ್ಜಾಭಾ̧ಯಿ ಧನಂಜಯ್ ಪೂಜೇ̧ರಿ ̧ ಸತೀಶ್ ಕೊಳಕಿ ಯೂಸುಫ್ ಮಿರ್ಜಾಭಾಯಿ, ಅರುಣ್ ಪ್ರೇಮ ಕುಮಾರ್ ,ಜುನೇದ್ ಸಮರಯ್ಯ ಭಜಂತ್ರಿ , ಮಿರ್ಜಾಭಾಯಿ, ವಿನಯ್ ಮುತ್ನಾಳ್, ಪ್ರವೀಣ್ ರಾಹುಲ್ ಬಡಸಗೌಡ ಹಾಗೂ ಇತರರು ಇದ್ದರು.//////