Belagavi News In Kannada | News Belgaum

ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

ಗೋಕಾಕ: ತನ್ನ ತಂದೆಯ ಮರಣದ ನಂತರ ಪಹಣಿಯಲ್ಲಿ ತಮ್ಮ ಹೆಸರು ದಾಖಲಿಸಿಕೊಡಲು ಲಂಚ ಸ್ವಿಕರಿಸುವ ವೇಳೆಯಲ್ಲಿ ಗ್ರಾಮಲೆಕ್ಕಾಧಿಕಾರಿ ಒಬ್ಬ  ಎಸಿಬಿ ಬಲೆಗೆ ಬಿದ್ದ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಲ್ಲಿ ನಡೆದಿದೆ.
ಗೋಕಾಕ ತಾಲೂಕಿನ ಗ್ರಾಮಲೆಕ್ಕಾಧಿಕಾರಿಗಳ ಅಧ್ಯಕ್ಷ ಹಾಗೂ ಕೊಣ್ಣೂರ ಗ್ರಾಮ ಲೆಕ್ಕಾಧಿಕಾರಿಯಾದ ಮಾರುತಿ.ಬಿ. ಶಿಗಿಹೋಳಿ ಎಸಿಬಿ ಬಲೆಗೆ ಬಿದ್ದ ಕುಳ.


ಕೊಣ್ಣೂರ ನಿವಾಸಿ ಮಹಾವೀರ ಬಾಬಾಗೌಡ ಪಾಟೀಲ ಇತ ತನ್ನ ತಂದೆ ಮರಣದ ನಂತರ ಅಣ್ಣ,ತಮ್ಮಂದಿರ ಹೆಸರನ್ನು ಸರ್ವೆ ನಂಬರ, 612 /5ಬ, 789/7, 789/ಡ, 789/ಕ,ರಲ್ಲಿ ದಾಖಲಿಸಲು ಗ್ರಾಮ ಲೆಕ್ಕಾಧಿಕಾರಿ ಹತ್ತಿರ ಹೋದಾಗ  ಮೊದಲು 25 ಸಾವಿರ ರೂ. ಹಣ ಬೇಡಿಕೆ ಇಟ್ಟು ನಂತರ 18 ಸಾವಿರಗೆ ಪೈನಲ್ ಮಾಡಿ ಹಣ ಕೊಡದಿದ್ದರೆ ನಿನ್ನ ಪೈಲ್ ಮುಂದೆನೆ ಹೊಗೊದಿಲ್ಲ ಎಂದು ಬೆದರಿಸಿದ್ದರು.ಇದರಿಂದ ಬೆಸತ್ತ ರೈತ ಮಹಾವೀರ ಇತ ಬೆಳಗಾವಿಯ ಬ್ರಷ್ಟಾಚಾರ ನಿಗ್ರಹದಳದ ಕಚೇರಿಗೆ ಹೋಗಿ ಪಿರ್ಯಾದಿ ನೀಡಿದ್ದರು. ಅದರ ಹಿನ್ನೆಲೆಯಲ್ಲಿ ಮಹಾವೀರ ಪಾಟೀಲ ಇತನಿಂದ ಗ್ರಾಮ ಲೆಕ್ಕಾಧಿಕಾರಿ ಮಾರುತಿ ಶಿಗಿಹೋಳಿ ಲಂಚ ಸ್ವಿಕರಿಸುವ ವೇಳೆ ರೆಡ್‌ ಹ್ಯಾಂಡ್‌ ಆಗಿ ಬೆಳಗಾವಿ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ./////