110 ಕೆ.ವ್ಹಿ. ಹುದಲಿ ಉಪಕೇಂದ್ರ: ಮಾಚ್ 11 ರಂದು ವಿದ್ಯತ್ ವ್ಯತ್ಯಯ

ಬೆಳಗಾವಿ, ಮಾ.10: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಮಾರ್ಚ್(11) ರಂದು ಬೆಳಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆವರೆಗೆ ನಾಲ್ಕನೇ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ 110 ಕೆ.ವ್ಹಿ. ಹುದಲಿ ಉಪಕೇಂದ್ರದಿಂದ ಸರಬರಾಜು ಆಗುವ ಹುದಲಿ, ಕುಮರಿ, ರಂಗದೋಳಿ, ತುಮ್ಮರಗುದ್ದಿ, ಸೋಮನಟ್ಟಿ, ಕಬಲಾಪೂರ, ಚಂದೂರ, ಖನಗಾಂವ ಕೆ.ಎಚ್, ಖನಗಾಂವ ಬಿ.ಕೆ, ಅಷ್ಟೆ, ಮುಚ್ಚಂಡಿ, ಕಲಕಾಂಬ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಈ ಎಲ್ಲ ಗ್ರಾಮಗಳ ನೀರಾವರಿ ಪಂಪಸೆಟ್ ಏರಿಯಾಗಳಿಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ. ಸಾರ್ವಜನಿಕರ ಹಿತದೃಷ್ಠಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು ಸಾರ್ವಜನಿಕರು ಸಹಕರಿಸಬೇಕೆಂದು ಬೆಳಗಾವಿಯ ಹು.ವಿ.ಸ.ಕಂ.ನಿ ಗ್ರಾಮೀಣ ಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.