Belagavi News In Kannada | News Belgaum

ಬಿಜೆಪಿ ಗೆ ಅಧಿಕಾರ ನೀಡುವ ಮೂಲಕ ಈ ದೇಶದ ಜನತೆ ಬಿಜೆಪಿಯನ್ನು ಅಭೂತಪೂರ್ವ ಬೆಂಬಲ ನೀಡಿರುವುದಕ್ಕೆ ಸಂಜಯ ಬಿ. ಪಾಟೀಲ ಹರ್ಷ ವ್ಯಕ್ತ

ಬೆಳಗಾವಿ: ಪ್ರಪಂಚದ ಅಗ್ರ ಗಣ್ಯ ನಾಯಕನಾಗಿ ಬೆಳೆಯುತ್ತಿರುವ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ಆಡಳಿತಕ್ಕೆ ಜನತೆ ಮನಸೋತು ಪಂಚ ರಾಜ್ಯದ ಚುಣಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಗೆ ಅಧಿಕಾರ ನೀಡುವ ಮೂಲಕ ಈ ದೇಶದ ಜನತೆ ಬಿಜೆಪಿಯನ್ನು ಅಭೂತಪೂರ್ವ ಬೆಂಬಲ ನೀಡಿರುವುದಕ್ಕೆ ದೇಶದ ಜನತೆಯ ಭಾವನೆಗೆ ತಕ್ಕಂತೆ ಸೇವೆ ಮಾಡಲು ಬಿಜೆಪಿ ಬದ್ದವಾಗಿದೆ ಎಂದು ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜಯ ಬಿ. ಪಾಟೀಲ ಹರ್ಷ ವ್ಯಕ್ತ ಪಡಿಸಿದರು.

ಗುರುವಾರ 5 ರಾಜ್ಯಗಳ ಚುಣಾವಣಾ ಫಲಿತಾಂಶ ಬಂದ ನಂತರ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿ, ಅನೇಕರು ಬಿಜೆಪಿ ಸರ್ಕಾರದ ಬಗ್ಗೆ ನಂಬಿಕೆಯಿಟ್ಟು ಯಾವುದೇ ಆಮಿಷಕ್ಕೆ ಒಳಗಾಗದೆ ಮೋದಿ ಸರ್ಕಾರದ ಸಾಧನೆಗಳು ಹಾಗೂ ಉತ್ತರ ಪ್ರದೇಶದಲ್ಲಿ ಪ್ರಖರ ಹಿಂದುತ್ವಾದಿ ಯೋಗಿ ಸರ್ಕಾರದ ಕಾರ್ಯ ವೈಕರ್ಯದಿಂದ ಮತ್ತೋಮ್ಮೆ ಬಿಜೆಪಿ ಸರ್ಕಾರ ರಚಿಸಲು ಆಶಿರ್ವದಿಸುವ ಮೂಲಕ ಉತ್ತರ ಪ್ರದೇಶದಲ್ಲಿ ಇತಿಹಾಸ ಅಳೆಸಿ ಹಾಕಿ ಆಡಳಿತರೂಡ ಬಿಜೆಪಿ ಪಕ್ಷ ಎರಡನೇಯ ಬಾರಿಗೆ ಅಧಿಕಾರಕ್ಕೆ ಬರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ 40 ವರ್ಷಗಳಿಂದ ಈ ರಾಜ್ಯದಲ್ಲಿ ಆಡಳಿತರೂಡ ಪಕ್ಷ ಎರಡನೇಯ ಬಾರಿ ಅಧಿಕಾರಕ್ಕೆ ಬಂದ ಉದಾಹರಣೆಗಳೆ ಇಲ್ಲ ಯೋಗಿ ಕಮಾಲದಿಂದ ಎರಡನೇಯ ಬಾರಿ ಸತತವಾಗಿ ಅಧಿಕಾರಕ್ಕೆ ಬರುವ ಮೂಲಕ ರಾಮನ ರಾಜ್ಯದಲ್ಲಿ ರಾಮನ ಭಕ್ತ ಯೋಗಿಯವರಿಗೆ ಅಧಿಕಾರ ನೀಡಿದಕ್ಕೆ ಅವರ ಕಾರ್ಯ ಕ್ಷಮತೆಗೆ ಸಂದ ಗೌರವ ಎಂದರು.

ಭಾರತೀಯ ಜನತಾ ಪಾರ್ಟಿಯ ಮುಖಂಡರ ಗುರಿಯಂತೆ ಕಾಂಗ್ರೇಸ ಮುಕ್ತ ಭಾರತ ಎಂಬ ಘೋಷ ವಾಕ್ಯದಂತೆ 5 ರಾಜ್ಯಗಳಲ್ಲಿ ಕಾಂಗ್ರೇಸ ತನ್ನ ಆಸ್ತಿತ್ವ ಉಳಿಸಿಕೋಳ್ಳಲಾಗದೆ ನೆಲಕಚ್ಚಿದೆ ಎಂದರು ಉತ್ತರಖಂಡ ಮಣಿಪುರ ಹಾಗೂ ಗೋವಾ ರಾಜ್ಯಗಳಲ್ಲಿ ಜನತೆ ಬಿಜೆಪಿ ಪಕ್ಷದ ಮೇಲೆ ನಂಬಿಕೆ ಇಟ್ಟು ಸರ್ಕಾರ ರಚನೆಗೆ ಮತ ಚಲಾಯಿಸಿರುವುದು ಬಿಜೆಪಿ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಈ 5 ರಾಜ್ಯಗಳ ಚುಣಾವಣೆಗಳನ್ನು ಲೋಕಸಭೆ ಚುಣಾವಣೆಗೆ ಸೆಮಿ ಪೈನಲ್ ಚುಣಾವಣೆ ಎಂದು ರಾಷ್ಟ್ರದಲ್ಲಿ ಬಿಂಬಿಸಲಾಗಿತ್ತು ಈ ಚುಣಾವಣೆಯಲ್ಲಿ ಅಭೂತಪೂರ್ವ ಗೆಲವು ಸಾಧಿಸುವ ಮೂಲಕ ಮುಂಬರುವ ಕರ್ನಾಟಕದ ಜಿಲ್ಲಾ / ತಾಲೂಕು ಪಂಚಾಯತ್ ಹಾಗೂ ವಿಧಾನಸಭೆಯ ಚುಣಾವಣೆಯಲ್ಲಿ ಬಿಜೆಪಿ ಪಕ್ಷ ಅತಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಮತ್ತೊಮ್ಮೆ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ಭವಿಷ್ಯ ನುಡಿದರು.