Belagavi News In Kannada | News Belgaum

ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಲು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಸಲಹೆ

ಬೆಳಗಾವಿ: ವಿದ್ಯಾರ್ಥಿಗಳು ವಿದ್ಯಾಭ್ಯಾಸದತ್ತ ಹೆಚ್ಚು ಗಮನ ಹರಿಸಿ ಸಾಧನೆ ಮಾಡಲು ಮುಂದಾಗಬೇಕು ಎಂದು ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.

ಇಲ್ಲಿನ ಕಾಕತಿ ಸೆಂಟ್‌ ಜೋನ್ಸ್‌ ಹಾಗೂ ಸೆಂಟ್‌ ಪೀಟರ್ ಫೌಡಶಾಲೆಗಳ ಆಶ್ರಯದಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ವಿದ್ಯಾರ್ಥಿಗಳು ಸಮಯವನ್ನು ಹಾಳು ಮಾಡದೇ  ಕ್ರೀಡೆಯ ಜತೆ ಅಭ್ಯಸದತ್ತ ಹೆಚ್ಚು ಗಮನ ಹರಿಸಿ ಕಲಿತ ಶಾಲೆ ಹಾಗೂ ಪಾಲಕರ ಹೆಸರು ಮುಂದೆ ತರಲು ಶ್ರಮಿಸಿಬೇಕು.  ಮುಖ್ಯವಾಗಿ ವಿದ್ಯಾರ್ಥಿಗಳು ಮೋಬೈಲಗಳಿಂದ ದೂರವಿದ್ದು,  ಉತ್ತಮ ಹವ್ಯಾಸಗಳತ್ತ ಗಮನ ಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಶಿಕ್ಷಣ ಸಂಸ್ಥೆಯಲ್ಲಿ ಇರುವ ಶಿಸ್ತುಬದ್ಧ ಹಾಗೂ ವಿದ್ಯಾರ್ಥಿಗಳ ಒಳ್ಳೆಯ ಸಂಸ್ಕಾರ ಕಂಡು ನನ್ನ ಶಾಲಾ ಕಾಲೇಜುಗಳ ದಿನಗಳು ನೆನಪಿಗೆ ಬಂದವು.  ಹಾಗಾಗಿ ಇಲ್ಲಿನ ವಿದ್ಯಾರ್ಥಿಗಳು ಬರುವ ವೇಳೆಯನ್ನು ಸದುಪಯೋಗ ಪಡೆಸಿಕೊಂಡು ಸಾಧನೆ ಮಾಡಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಾಧನೆಗೈದ ವಿದ್ಯಾರ್ಥಿಗಳಿಗೆ ಯುವ ನಾಯಕಿ ಪ್ರಿಯಾಂಕಾ ಜಾರಕಿಹೊಳಿ ಪ್ರಶಸ್ತಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿಸಂಸ್ಥೆ ಚೇರಮನ್‌ ಪ್ರಸಾದ ಪೀಟರ್‌, ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ, ಸುಜಾತಾ ಪೈ, ಸುನೀಲ ಪಾಟೀಲ, ಸರೋಜಾ ಸಾಲ್ವಿ, ರಿಬಾಕಾ ಸಾಲ್ವಿ, ಸಿದ್ದಿವಿನಾಯಕ ಬಾಡಕರ, ಸುರೇಶ ಬಾಲಿಕಟ್ಟಿ ಸೇರಿದಂತೆ ಇತರರು ಇದ್ದರು./////