Belagavi News In Kannada | News Belgaum

ಪ್ರಿಯಕರನ ಮುಂದೆಯೇ ಯುವತಿ ಮೇಲೆ ದುಷ್ಕರ್ಮಿಗಳಿಂದ ಅತ್ಯಾಚಾರ

ಹೈದರಾಬಾದ್:  ಯುವತಿಯನ್ನು ಮರಕ್ಕೆ ಕಟ್ಟಿ ಹಾಕಿ ಆಕೆಯ ಪ್ರಿಯಕರನ ಮುಂದೆ ದುಷ್ಕರ್ಮಿಗಳು ಅತ್ಯಾಚಾರವೆಸಗಿರುವ ಘಟನೆ ಕ್ರಿಶನ್ ಜಿಲ್ಲೆಯ ಮಚಲಿಪಟ್ಟಣಂ ಬೀಚ್‍ನಲ್ಲಿ ನಡೆದಿದೆ.
ಗುಂಟೂರಿನ ಆಂಧ್ರಪ್ರದೇಶದ ಪೊಲೀಸ್ ಕೇಂದ್ರ ಕಚೇರಿಯಿಂದ 75 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಇದೀಗ ಯುವತಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಚಲಿಪಟ್ಟಣಂನ ಬಂದರ್ ಮಂಡಲ್‍ನ ಪಲ್ಲಿಪಾಲೆಮ್ ಬೀಚ್‍ಗೆ ಜೋಡಿ ತೆರಳಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಹಲ್ಲೆ ನಡೆಸಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ.
ದುಷ್ಕರ್ಮಿಗಳು ಯುವತಿಯ ಬಾಯ್‍ಫ್ರೆಂಡ್‍ನನ್ನು ಸಹ ಮರಕ್ಕೆ ಕಟ್ಟಿ ಹಾಕಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಇದೀಗ ಈ ಸಂಬಂಧ ಬಂದರ್ ಗ್ರಾಮಾಂತರ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಪಿ.ನಾಗಬಾಬುವನ್ನು ಬಂಧಿಸಿದ್ದಾರೆ ಮತ್ತು ಮತ್ತೋರ್ವ ಆರೋಪಿ ಎರ್ ಶೆಟ್ಟಿ ಅನುದೀಪ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಈ ಕುರಿತಂತೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ./////