Belagavi News In Kannada | News Belgaum

ಸಾರ್ವಜನಿಕ ರಸ್ತೆಯ ಮೇಲೆ ಗಾಂಜಾ ಪೊಲೀಸ್ ಅಧಿಕಾರಿಗಳ ದಾಳಿ ಕಾನೂನು ಕ್ರಮ

 

ಬೆಳಗಾವಿ : ಬೆಳಗಾವಿ ಶಹಾಪೂರ ಪೊಲೀಸ್ ಠಾಣಾ ಹದ್ದಿಯ ವೈಭವ ಹೋಟೆಲ್ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಗಾಂಜಾ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿಯನ್ನಾಧರಿಸಿ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಹಾಪೂರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ವಿನಾಯಕ ಬ ಬಡಿಗೇರ ರವರು ಮತ್ತು ಅವರ ಸಿಬ್ಬಂದಿ ಜನರು ದಾಳಿ ಮಾಡಿರುತ್ತಾರೆ.

 

ಅಲ್ಲಿ ಗಾಂಜಾ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ 1) ಮುದಸ್ಸರ ಅಲ್ಲಾಭಕ್ಷ ಪನಿಬಂಧ (28) ಸಾ: ಅವಟಿಗಲ್ಲಿ, ಗೋಕಾಕ 2) ವಾಹೀದ ಅಜ್ಮಲ ಮುನ್ಸಿ (31) ವರ್ಷ, ಸಾ: ಕಲಂಬಾ ಕೊಲ್ಲಾಪೂರ ಇವರಿಬ್ಬರನ್ನು ಬಂಧಿಸಿ, ಅವರಿಂದ ರೂ.10,725/- ಮೌಲ್ಯದ ಒಟ್ಟು 715 ಗ್ರಾಂ ಗಾಂಜಾ ಎಂಬ ಮಾದಕ ವಸ್ತು ಹಾಗೂ ರೂ.1080/- ಹಣ ಜಪ್ತ ಮಾಡಿ, ಅವರ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗಿದೆ.