Belagavi News In Kannada | News Belgaum

ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್: ಚಿನ್ನ, ಕಂಚಿನ ಪದಕ ಪಡೆದ ಕೋರಿ

ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್: ಚಿನ್ನ, ಕಂಚಿನ ಪದಕ ಪಡೆದ ಕೋರಿ

 

ಬೆಳಗಾವಿ,ಮಾ.11: ಬೆಳಗಾವಿ ತಾಲೂಕಿನ ಕಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳು ಶ್ರೀಲಂಕಾದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್‍ನಲ್ಲಿ 4 ಚಿನ್ನ ಹಾಗೂ 2 ಕಂಚಿನ ಪದಕಗಳನ್ನು ಪಡೆದುಕೊಳ್ಳುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕಡೋಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಯೋಗಶಾಲಾ ತಾಂತ್ರಿಕ ಅಧಿಕಾರಿಗಳಾದ ಜ್ಯೋತಿ ಕೋರಿ ಇದೇ ಮಾರ್ಚ್ 5 ರಂದು ಶ್ರೀಲಂಕಾದ ಕೊಲಂಬೋದ ಥೂರಸ್ತಾನ್ ಕಾಲೇಜಿನಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ಶ್ರೀಲಂಕಾ ಮಾಸ್ಟರ್ಸ್ ಶಾರ್ಟ್ ಕೋರ್ಸ್ ಸ್ವಿಮ್ಮಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿ ಚಿನ್ನ ಹಾಗೂ ಕಂಚಿನ ಪದಕಗಳನ್ನು ಬಾಚಿಕೊಂಡು ಬಂದಿದ್ದು ಶ್ಲಾಘನೀಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಶಶಿಕಾಂತ ಮುನ್ಯಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಕಾರ್ಮಿಕರಿಗೆ ಸರ್ಕಾರಿ ಯೋಜನೆಗಳು ದೊರಕಲಿ: ನ್ಯಾ. ಸಿ.ಎಂ.ಜೋಶಿ

ಬೆಳಗಾವಿ,ಮಾ.11: 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮಾರ್ಚ್ 7 ರಿಂದ ಹಮ್ಮಿಕೊಂಡಿರುವ “Iಛಿoಟಿiಛಿ Weeಞ”(ಸಾಂಪ್ರದಾಯಿಕ ವಾರ) ಹಿನ್ನೆಲೆ ಎಲ್ಲ ಕಟ್ಟಡ ಕಾರ್ಮಿಕರಿಗೆ ನೋಂದಣಿ ಹಾಗೂ ನೋಂದಣಿ ನವೀಕೃತ ಕುರಿತಾಗಿ ಜಾಗೃತಿಯನ್ನು ಮೂಡಿಸಲಾಯಿತು.
ಮಾಚ್ 13ರ ವರೆಗೆ ಹಮ್ಮಿಕೊಂಡಿರುವ ಈ ಸಾಂಪ್ರದಾಯಿಕ ವಾರದ ಜಾಗೃತಿ ವಾಹನಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನ್ಯಾಯಾಧೀಶರಾದ ಸಿ.ಎಂ.ಜೋಶಿ ಚಾಲನೆ ನೀಡಿ ಎಲ್ಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳ ಸೌಲತ್ತು ದೊರಕಬೇಕು. ಹೀಗಾಗಿ ಕಾರ್ಮಿಕರ ನೋಂದಣಿ ಜೊತೆಗೆ ನೋಂದಣಿ ನವೀಕರಣ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ದೇವರಾಜ ಅರಸು, ಬೆಳಗಾವಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತರಾದ ವೆಂಕಟೇಶ ಶಿಂದಿಹಟ್ಟಿ, ಬೆಳಗಾವಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ಎಂ.ಬಿ.ಅನ್ಸಾರಿ, ಕಾರ್ಮಿಕ ಅಧಿಕಾರಿಗಳಾದ ಮಹೇಶ ಕುಳಲಿ, ತರನ್ನುಂ ಬೆಂಗಾಲಿ ಹಾಗೂ ಹಿರಿಯ ಕಾರ್ಮಿಕ ನಿರೀಕ್ಷಕರು, ಸಿಬ್ಬಂದಿ ಹಾಜರಿದ್ದರು.////

ವ್ಯಕ್ತಿ ನಾಪತ್ತೆ

 

ಬೆಳಗಾವಿ,ಮಾ.11: ಬೆಳಗಾವಿ ನಗರದ ಶಹಾಪೂರ ಖಡೇಬಜಾರ 60 ವರ್ಷದ ವ್ಯಕ್ತಿ ಯಲ್ಲಪ್ಪ ನೀಲಕಂಠ ಹೊನಗೇಕರ ನಾಪತ್ತೆಯಾಗಿದ್ದಾರೆ. 2022 ರ ಜನವರಿ 20 ರಂದು ಮುಂಜಾನೆ 8.30 ಗಂಟೆ ಸಮಯದಲ್ಲಿ ಮನೆಯಲ್ಲಿ ಹೊರಗೆ ಹೋಗಿ ಬರುತ್ತೇನೆ ಎಂದು ಮನೆಯಿಂದ ಹೋದವರು ಇಲ್ಲಿಯವರೆಗೆ ಮನೆಗೆ ಬಾರದೇ ಎಲ್ಲಿಯೋ ಹೋಗಿ ಕಾಣೆಯಾಗಿದ್ದಾರೆ ಎಂದು ಕಾಣೆಯಾದ ಯಲ್ಲಪ್ಪ ಅವರ ಪತ್ನಿ ಲತಾ ಯಲ್ಲಪ್ಪ ಹೊನಗೇಕರ ಬೆಳಗಾವಿಯ ಶಹಾಪೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಪತ್ತೆಯಾದ ವ್ಯಕ್ತಿ ಚಹರೆ:
ವಯಸ್ಸು 60, 5 ಅಡಿ ಎತ್ತರ, ದುಂಡು ಮುಖ, ಉದ್ದ ಮೂಗು, ಸದೃಡ ಮೈಕಟ್ಟು, ಗೋಧಿಗೆಂಪು ಮೈಬಣ್ಣ, ತಲೆಯಲ್ಲಿ ಬಿಳಿ ಕುದಲು, ಬಿಳಿ ಬಣ್ಣದ ಚೆಕ್ಸ ಅಂಗಿ ಮತ್ತು ನೀಲಿ ಬಣ್ಣದ ಪ್ಯಾಂಟ ಧರಿಸಿದ್ದು, ಕನ್ನಢ ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ.
ಈ ಚಹರೆಯುಳ್ಳ ಕಾಣೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ಸಿಕ್ಕಲ್ಲಿ ಬೆಳಗಾವಿ ನಗರ ಪೊಲೀಸ್ ಕಂಟ್ರೋಲ್ ರೂಮ್ 0831-2405233, ಬೆಳಗಾವಿ ಶಹಾಪೂರ ಪೊಲೀಸ್ ಠಾಣೆ ದೂರವಾಣಿ ಸಂ. 0831-2405244 ಮತ್ತು ಪಿ.ಐ ಶಹಾಪೂರ ಪಿ.ಎಸ್. ಮೋಬೈಲ್ ನಂ. 9480804046 ಇವರನ್ನು ಸಂಪರ್ಕಿಸಬಹುದು ಎಂದು ಬೆಳಗಾವಿಯ ಶಹಾಪೂರ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ತೋಟಗಾರಿಕೆ ತರಬೇತಿ: ಅರ್ಜಿ ಆಹ್ವಾನ

ಬೆಳಗಾವಿ,ಮಾ.11: ಪ್ರಾಯೋಗಿಕ ತರಬೇತಿ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯ ತೋಟಗಾರಿಕೆ 2022-23 ನೇ ಸಾಲಿನಲ್ಲಿ ಜಿಲ್ಲೆಯ ಅಭ್ಯರ್ಥಿಗಳಿಗೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಿದೆ. ಮೇ 5 2022ರಿಂದ ಫೆಬ್ರುವರಿ 28ರ 2023ರ ವರೆಗೆ 10 ತಿಂಗಳ ಕಾಲ ಈ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ತರಬೇತಿಯಲ್ಲಿ ಭಾಗವಹಿಸಲು ಅರ್ಹತೆ:

ಅಭ್ಯರ್ಥಿಯು ಎಸ್.ಎಸ್.ಎಲ್.ಸಿ ಪರಿಕ್ಷೇಯಲ್ಲಿ ಉತ್ತೀರ್ಣರಾಗಿರಬೇಕು ತರಬೇತಿ ಬಯಸುವ ಅಭ್ಯರ್ಥಿಯ ತಂದೆ/ತಾಯಿ/ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು ಹಾಗೂ ಸ್ವಂತ ಸಾಗುವಳಿ ಮಾಡುತ್ತಿರಬೇಕು ಈ ಬಗ್ಗೆ ಪಹಣಿಯನ್ನು (ಖಖಿಅ) ನೀಡುವುದು ಕಡ್ಡಾಯವಾಗಿರುತ್ತದೆ. ಸಾಮಾನ್ಯ ವರ್ಗದ ಅಭ್ಯರ್ಥಿಗೆ ಕನಿಷ್ಠ ವಯೋಮಿತಿ 18 ವರ್ಷಗಳು ಹಾಗೂ ಗರಿಷ್ಠ 30 ವರ್ಷಗಳು ಆಗಿರಬೇಕು. ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳ ಕನಿಷ್ಠ ವಯೋಮಿತಿ 18 ವರ್ಷಗಳು ಹಾಗೂ ಗರಿಷ್ಠ 33 ವರ್ಷಗಳು ಆಗಿರಬೇಕು. ಅಭ್ಯರ್ಥಿಯು ತರಬೇತಿ ಕೇಂದ್ರದಲ್ಲಿಯೇ ಇರಬೇಕು.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ವಿಧಾನ :

ಅರ್ಜಿಗಳನ್ನು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಬೆಳಗಾವಿ ರವರ ಕಛೇರಿಯಲ್ಲಿ ಅಥವಾ ಇಲಾಖೆಯ ವೆಬ್‍ಸೈಟ್  https://horticulturedir.karnataka.gov.in/  ನಲ್ಲಿ ಡೌನ್‍ಲೋಡ್ ಮಾಡಿಕೊಳ್ಳಬಹುದು. ಸಾಮಾನ್ಯ ವರ್ಗದವರು 30 ರೂ, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದವರು 15 ರೂ. ಗಳ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ (IPಔ) ನ್ನು ಬೆಳಗಾವಿ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ) ಇವರ ಹೆಸರಿನಲ್ಲಿ ಪಡೆದು ಅರ್ಜಿ ಜೊತೆಗೆ ಪೂರ್ಣ ಮಾಹಿತಿಗಳನ್ನು ತುಂಬಿ ಎಸ್.ಎಸ್.ಎಲ್.ಸಿ ಪ್ರಮಾಣ ಪತ್ರದ ಅಂಕ ಪಟ್ಟಿ, ಲಿವ್ಹಿಂಗ್ ಸರ್ಟಿಪಿಕೆಟ್, ಜಾತಿ ಪ್ರಮಾಣ ಪತ್ರ , ಸ್ವಂತ ಜಮೀನಿನ ಉತಾರ (ಖಖಿಅ), ಹಿಡುವಳಿ ದೃಢೀಕರಣ ಪತ್ರದ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಲಗತ್ತಿಸಿ ಬೆಳಗಾವಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ), ರಾಣಿ ಚನ್ನಮ್ಮ ವೃತ್ತ ರವರಿಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ರವರ ಕಛೇರಿಯಲ್ಲಿ ವಿಚಾರಿಸಬಹುದು.

ಎಲ್ಲಾ ಅಭ್ಯರ್ಥಿಗಳು ಏಪ್ರಿಲ್ 18 ರಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ನೇರವಾಗಿ ಮೂಲ ದಾಖಲಾತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಬೇಕು. ಈ ಸಂಬಂಧವಾಗಿ ಈ ಕಛೇರಿಯಿಂದ ಮತ್ತೆ ಯಾವುದೇ ಪತ್ರ ವ್ಯವಹಾರ ಮಾಡಲಾಗುವುದಿಲ್ಲ. ಈ ಕುರಿತು ದೂರವಾಣಿ ಸಂಖ್ಯೆ 0831-2451422 ಮತ್ತು ಹಿಡಕಲ್ ಡ್ಯಾಂ ತರಬೇತಿ ಕೇಂದ್ರz ದೂರವಾಣಿ ಸಂಖ್ಯೆ 08333-263008 ಕ್ಕೆ ಸಂಪರ್ಕಿಸಿ ವಿಚಾರಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ವಡಗಾಂವ 110 ಕೆ.ವ್ಹಿ ವಿದ್ಯುತ್ ಕೇಂದ್ರ: ಮಾರ್ಚ್ 13 ರಂದು ವಿದ್ಯುತ್ ವ್ಯತ್ಯಯ

ಬೆಳಗಾವಿ,ಮಾ.11 : ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾರ್ಚ್ 13ರಂದು ಬೆಳಿಗ್ಗೆ 09.00 ಘಂಟೆಯಿಂದ ಸಾಯಂಕಾಲ 04.00 ಘಂಟೆಯವರೆಗೆ 110 ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಲಿದೆ.

ಧಾಮನೆ, ಕುರುಬರಹಟ್ಟಿ, ಮಾಸ್ಗ್ಯಾನಟ್ಟಿ, ದೇವಗ್ಯಾನಟ್ಟಿ, ಔಚಾರಟ್ಟಿ, ಯರಮಾಳ, ಯಳ್ಳೂರ, ಸುಳಗಾ, ರಾಜಹಂಸಗಡ, ದೇಸೂರ, ನಂದಿಹಳ್ಳಿ, ಕೊಂಡಸಕೊಪ್ಪ, ಹಲಗಾ ಹಾಗೂ ಬಸ್ತವಾಡ ಗ್ರಾಮಗಳಿಗೆ ಹಾಗೂ ನೀರಾವರಿ ಪಂಪ್‍ಸೆಟ್‍ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸಬೇಕೆಂದು ಬೆಳಗಾವಿ ಗ್ರಾಮೀಣ ವಿಭಾಗದ ಹು.ವಿ.ಸ.ಕಂ.ನಿ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ಹಿರೇಬಾಗೇವಾಡಿ 110 ಕೆ.ವ್ಹಿ. ವಿದ್ಯುತ್ ಕೇಂದ್ರ: ಮಾರ್ಚ್ 13 ರಂದು ವಿದ್ಯುತ್ ವ್ಯತ್ಯಯ

ಬೆಳಗಾವಿ,ಮಾ.11  : ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾರ್ಚ್ 13 ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 04 ಘಂಟೆಯವರೆಗೆ 110 ಕೆ.ವ್ಹಿ. ಹಿರೇಬಾಗೇವಾಡಿ ಉಪಕೇಂದ್ರದಿಂದ ಸರಬರಾಜು ಆಗುವ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಲಿದೆ.

ಬೆಳಗಾವಿ ತಾಲೂಕಿನ ಮುತ್ನಾಳ, ವಿರಕನಕೊಪ್ಪ, ಅರಳಿಕಟ್ಟಿ, ಬಸಾಪೂರ, ಹಿರೇಬಾಗೇವಾಡಿ, ಭೆಂಡಿಗೇರಿ, ಗಜಪತಿ, ಅಂಕಲಗಿ, ಹುಲಿಕವಿ, ಕೆ. ಕೆ. ಕೊಪ್ಪ, ಕಲಾರಕೊಪ್ಪ, ಸಿದ್ಧನಹಳ್ಳಿ, ಬಡೇಕೊಳ್ಳಮಠ, ಹಲಗಿಮರ್ಡಿ, ನಾಗೇನಟ್ಟಿ, ನಾಗೇರಹಾಳ, ಬಡಸ, ನಂದಿಹಳ್ಳಿ ಹಾಗೂ ಕುಕಡೊಳ್ಳಿ ಗ್ರಾಮಗಳಿಗೆ ಹಾಗೂ ಖಾನಾಪೂರ ತಾಲೂಕಿನ ಹಿರೇಹಟ್ಟಿಹೊಳಿ, ಚಿಕ್ಕಹಟ್ಟಿಹೊಳಿ, ಗಾಡಿಕೊಪ್ಪ, ಜಿಕನೂರ ಹಾಗೂ ಪಾರಿಶ್ವಾಡ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‍ಸೆಟ್‍ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಳಗಾವಿ ಗ್ರಾಮೀಣ ವಿಭಾಗದ ಹು.ವಿ.ಸ.ಕಂ.ನಿ ಕಾರ್ಯನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

 

ಎಸ್.ಎಸ್.ಗೋಲ್ಡನ್ ಲೈಫ್ ವಂಚನೆ: ದೂರು ನೀಡಲು ಸೂಚನೆ

 

ಬೆಳಗಾವಿ,ಮಾ.11 : ರಾಯಬಾಗದ ಎಸ್.ಎಸ್.ಗೋಲ್ಡನ್ ಲೈಫ್ ಪ್ರೈವೇಟ್ ಲಿಮಿಟೆಡ್ ಕಂಪನಿ ವಿವಿಧ ಸ್ಕೀಮ್‍ಗಳಡಿಯಲ್ಲಿ ಗ್ರಾಹಕರಿಂದ ಹಣವನ್ನು ಹೂಡಿಕೆ ಮಾಡಿಸಿಕೊಂಡು ಹೆಚ್ಚಿನ ಬಡ್ಡಿ ಹಾಗೂ ಲಾಭಾಂಶ ನೀಡುವುದಾಗಿ ನಂಬಿಸಿ ವಂಚಿಸಿರುವ ಆರೋಪ ವ್ಯಕ್ತವಾಗಿದೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧ ಕಡೆಗಳಲ್ಲಿ ತಮ್ಮ ಶಾಖೆಗಳನ್ನು ಹೊಂದಿರುವ ಈ ಕಂಪನಿ ಗ್ರಾಹಕರ ಹಣವನ್ನೂ ಮರಳಿ ನೀಡಿಲ್ಲ. ಹೀಗಾಗಿ ಈ ಕುರಿತು ತನಿಖೆ ಮುಂದುವರೆದಿದ್ದು, ಕಂಪನಿಯಿಂದ ವಂಚನೆಗೊಳದಾವರು ದಾಖಲಾತಿಗಳ ಸಮೇತ ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಎನ್‍ಡಿಸಿ, ಸಿಐಡಿ ಘಟಕವನ್ನು ಸಂಪರ್ಕಿಸಬಹುದು ಎಂದು ಎನ್.ಡಿ.ಸಿ, ಸಿಐಡಿ ಘಟಕದ ಪೊಲೀಸ್ ಇನ್ಸ್‍ಪೆಕ್ಟರ್ ಹಾಗೂ ತನಿಖಾಧಿಕಾರಿ ಸೈಯದ್ ದಾದಾ ನೂರ್ ಅಹಮದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.///

ತುರ್ತು ನಿರ್ವಹಣಾ ಕಾರ್ಯ: ಮಾರ್ಚ್ 13 ರಂದು ವಿದ್ಯುತ್ ವ್ಯತ್ಯಯ

ಬೆಳಗಾವಿ,ಮಾ.11: ಟಿ.ಎಲ್.ಮತ್ತು ಎಸ್.ಎಸ್ ವಿಭಾಗ-ಕ.ವಿ.ಪ್ರ.ನಿ.ನಿ. ವತಿಯಿಂದ ನಾಲ್ಕನೇಯ ತ್ರೈಮಾಸಿಕ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಮಾರ್ಚ್ 13 ರಂದು ಬೆಳಿಗ್ಗೆ 09.00 ಘಂಟೆಯಿಂದ ಸಾಯಂಕಾಲ 05 ಘಂಟೆಯವರೆಗೆ 110 ಕೆ.ವ್ಹಿ. ವಡಗಾಂವ ಉಪಕೇಂದ್ರದಿಂದ ಸರಬರಾಜಾಗುವ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಆಗಲಿದೆ.

ಬಜಾರ್ ಗಲ್ಲಿ, ವಡಗಾಂವ, ಹಳೆ ಬೆಳಗಾವಿ, ಹೊಸೂರ, ಸುಭಾಷ ಮಾರ್ಕೆಟ್, ವಿದ್ಯಾನಗರ, ಭಾಗ್ಯನಗರ, ಯಳ್ಳುರ ರೋಡ್‍ಗಳಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಆಗಲಿದೆ ಎಂದು ಬೆಳಗಾವಿ ನಗರ ವಿಭಾಗದ ಕಾರ್ಯ ನಿರ್ವಾಹಕ ಅಭಿಯಂತರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////