Belagavi News In Kannada | News Belgaum

ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಸಂಗೀತ ಕಾಂಬ್ಳೆ ಕರೆ

ಬೆಳಗಾವಿ : 11/03/2022. ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗ್ಯಾಂಗ್ ವಾಡಿಯ ಶಿವಬಸವ ನಗರದಲ್ಲಿ ಆಚರಿಸಲಾಯಿತು. ಮಹಿಳೆಯರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಹಾಗೂ ಮಹಿಳಾ ಹಕ್ಕುಗಳನ್ನು ತಿಳಿದುಕೊಂಡು ಗೌರವ ಸ್ಥಾನಮಾನಗಳು, ಸಾಮಾಜಿಕ ಸಮಾನತೆಯಿಂದ, ಧೈರ್ಯದಿಂದ ಬದುಕಬೇಕು ಎಂದು
ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆಯ ಮಹಿಳಾ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಸಂಗೀತಾ ಕಾಂಬ್ಳೆಯವರು ಹೇಳಿದರು
ಕಾರ್ಯಕ್ರಮವನ್ನು ಉದ್ದೇಶಿಸಿ ಮೊಟ್ಟಮೊದಲ ಬಾರಿಗೆ ಕ್ಲಾರಾ ಜೆಟ್ಕಿನ್ ಎಂಬ ಮಹಿಳೆ ಜರ್ಮನಿಯ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿಯ ಮಹಿಳಾ ನಾಯಕಿ ಇವರು ಅಂತರ್ರಾಷ್ಟ್ರೀಯ ಮಹಿಳಾ ದಿನದ ಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ ಮಂಡಿಸಿದರು ಅಂದರೆ ಲಿಂಗ ತಾರತಮ್ಯವಿಲ್ಲದೆ ಹೆಣ್ಣು ಗಂಡು ಎಂಬ ಭೇದ ಭಾವ ಮಾಡದೆ ಸಮಾನತೆಯಿಂದ ಸಮಾಜದಲ್ಲಿ ಬದುಕಲು ಹಾಗೂ ಮಹಿಳೆಯರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಪ್ರತಿವರ್ಷ ಪ್ರತಿಯೊಂದು ದೇಶದಲ್ಲಿ ಮಾರ್ಚ್ 8 ವಿಶ್ವ ಮಹಿಳಾ ದಿನಾಚರಣೆಯನ್ನು ಆಚರಿಸಬೇಕೆಂದು ತೀರ್ಮಾನಿಸಿದರು.

ಮಹಿಳಾ ದಿನಾಚರಣೆಯನ್ನು ಯಾಕೆ ನಾವೆಲ್ಲರೂ ನಮ್ಮ ದೇಶದಲ್ಲಿ ಆಚರಿಸುತ್ತೇವೆ ಎಂದರೆ ಮಹಿಳೆಯರನ್ನು ಸಬಲೀಕರಣಗೊಳಿಸಲು ಮಹಿಳೆಯರು ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳುವುದು ಹಾಗೂ ಮಹಿಳೆಯರು ಮತ್ತು ಜಗತ್ತು ಸುಸ್ಥಿರ ನಾಳೆಗಾಗಿ ಇಂದು ಲಿಂಗಸಮಾನತೆ ಎಂಬ ವಿಷಯದಲ್ಲಿ ಒಟ್ಟುಗೂಡಿಸಲು ಸಾಮಾಜಿಕ ಸಮಾನತೆಯ ಗೋಸ್ಕರ ವಿಶ್ವ ಮಹಿಳಾ ದಿನಾಚರಣೆಯ ಆಚರಿಸುತ್ತಿದ್ದೇವೆ ……..,……. .ಇದಕ್ಕಿಂತ ಮುಂಚೆ ಮಾತೆ ಸಾವಿತ್ರಿಬಾಯಿ ಫುಲೆಯವರು ನಮ್ಮ ಸಮುದಾಯದ ಶೂದ್ರಾತಿಶೂದ್ರರ ಮಹಿಳೆಯರ ಅಜ್ಞಾನ ಅನಕ್ಷರತೆ ಎಂಬ ಕತ್ತಲೆಯನ್ನು ಓಡಿಸಿ ಹೆಣ್ಣುಮಕ್ಕಳಿಗೆ ಅಕ್ಷರಜ್ಞಾನ ಎಂಬ ದಿವ್ಯಜ್ಯೋತಿ ಹಚ್ಚುವುದರ ಮೂಲಕ ಎಲ್ಲರಿಗೂ ಶಿಕ್ಷಣ ಕಲಿಸಿಕೊಟ್ಟ ಧೀರಶೂರ ಮಹಿಳೆ ಮಾತಾ ಸಾವಿತ್ರಿಬಾಯಿ ಫುಲೆಯವರು. ಆದ್ದರಿಂದ ಭಾರತದ ಮೊಟ್ಟ ಮೊದಲ ಶಿಕ್ಷಕಿ ವಿಮೋಚಕಿ ಎಂದು ಮಾತಾ ಸಾವಿತ್ರಿಬಾಯಿ ಫುಲೆಯವರನ್ನು ಭಾರತ ಸರ್ಕಾರ ಗೌರವಿಸಿ ಅವರ ಸ್ಮರಣೆಗಾಗಿ ಮಾಡಿದ ಅಂಚೆಚೀಟಿಯನ್ನು ಇನ್ನು ಮುಂದೆ ಸದಾಕಾಲ ಮುಂದುವರಿಸಬೇಕು ಎಂದು ಘೋಷಿಸಿತು. ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳೆಯರಿಗೆ ಶಿಕ್ಷಣದ ಜೊತೆಗೆ, ಮತದಾನದ ಹಕ್ಕು ಸಮಾನತೆಯ ಹಕ್ಕು ,ಆಸ್ತಿಹಕ್ಕು ಸಮನಾದ ಆಸ್ತಿಯನ್ನು ಕೊಡಬೇಕೆಂದು ಭಾರತ ಸಂವಿಧಾನದಲ್ಲಿ ಪ್ರಸ್ತಾಪಿಸಿದ್ದರು .

ಮಹಿಳೆಯು ಸಮಾಜದ ಶಕ್ತಿ ಕುಟುಂಬದ ಕಣ್ಣು ಮನೆಯ ಆರೋಗ್ಯದ ಗುಟ್ಟು ಮಹಿಳೆಯ ಕೈಯಲ್ಲಿ ಇರುತ್ತದೆ ಮಹಿಳೆಯರೆ ಹಾಸಿಗೆ ಹಿಡಿದರೆ ಮನೆಯವರ ಆರೋಗ್ಯ ಹಾಳಾಗುತ್ತದೆ ಆದಕಾರಣ ಮಹಿಳೆಯು ಮಾನಸಿಕವಾಗಿ ದೈಹಿಕವಾಗಿ ಆರೋಗ್ಯವಾಗಿದ್ದಾರೆ ರಾಷ್ಟ್ರದಲ್ಲಿ ಅವಳ ಪಾತ್ರ ಪ್ರಮುಖವಾಗಿರುತ್ತದೆ. ಇತ್ತೀಚಿಗೆ ಮಹಿಳೆಯರು ಎಲ್ಲ ರಂಗಗಳಲ್ಲೂ ಎಲ್ಲ ಕ್ಷೇತ್ರಗಳಲ್ಲಿಯೂ ತಾವೇ ಮುಂದು ಎನ್ನುತ್ತಿದ್ದಾರೆ, ಬದಲಾಗುತ್ತಿರುವ ಕಾಲಘಟ್ಟದ ಎಲ್ಲ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಕ್ತಿ ಸಾಮರ್ಥ್ಯವನ್ನು ಶ್ರದ್ಧೆ ಸೇವಾಮನೋಭಾವದಿಂದ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸೇನೆಯಲ್ಲಿ ಕೂಡ ಮಹಿಳೆಯು ತೊಡಗಿಸಿಕೊಂಡು ದೇಶದ ಅಭಿವೃದ್ಧಿಗೆ ಪೂರಕವಾಗಿ ನಿಲ್ಲುತ್ತಿದ್ದಾರೆ.

ಇಷ್ಟೆಲ್ಲಾ ಕಾಯ್ದೆ ಕಾನೂನುಗಳು ಇದ್ದರೂ ಮಹಿಳೆ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆಯುತ್ತಿವೆ ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಬಿದ್ದಿಲ್ಲ, ಮಹಿಳೆಯರಿಗೆ ಉದ್ಯೋಗದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣಗಳು, ವರದಕ್ಷಿಣೆ ಕಿರುಕುಳ,ಆಸ್ತಿ ವಿವಾದ, ಪೊಲೀಸ್ ದೌರ್ಜನ್ಯ ,ಪ್ರೇಮ ಪ್ರಕರಣ ಅತ್ಯಾಚಾರ ಪ್ರಕರಣಗಳು,ತಮ್ಮನ್ನು ರಕ್ಷಣೆ ಮಾಡುವಂತೆ ಕೋರಿ ಸಾಲು ಸಾಲು ದೂರುಗಳು ದಾಖಲಾಗುತ್ತಿವೆ. 2020- ಮಾರ್ಚ್ ನಿಂದ 2021 ನವೆಂಬರ್ ವರೆಗೆ 4041 ಪ್ರಕರಣಗಳು ದಾಖಲಾಗಿವೆ. ಒಂದೂವರೆ ವರ್ಷದಲ್ಲಿ 4041 ಕೇಸುಗಳು ದಾಖಲಾಗಿವೆ. ಆದ್ದರಿಂದ ಎಲ್ಲ ಮಹಿಳೆಯರು ತಮ್ಮ ಮಕ್ಕಳಿಗೆ ತಪ್ಪದೇ ಶಿಕ್ಷಣ ಕೊಡಿಸಬೇಕು ಮಕ್ಕಳ ಮತ್ತು ಮಹಿಳಾ ಹಕ್ಕುಗಳನ್ನು ತಿಳಿದುಕೊಳ್ಳಬೇಕು ಆದಷ್ಟು ನಮ್ಮ ದೇಶದ ಮಹಿಳೆಯರು ದೌರ್ಜನ್ಯ ಗಳಿಂದ ಕಿರುಕುಳಗಳಿಂದ ತಪ್ಪಿಸಿಕೊಳ್ಳಬೇಕು ಅಥವಾ ಮುಕ್ತಿ ಹೊಂದಬೇಕೆಂದು ಮತ್ತೊಮ್ಮೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು ತಿಳಿಸುತ್ತಾ ನನ್ನ ಒಂದೆರಡು ಎಂದು ಮಾತನಾಡಿದ ಜಿಲ್ಲಾ ಸಂಯೋಜಕರಾದ ಮೀನಾಕ್ಷಿ ತಳವಾರ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಸವಿವರವಾದ ಪ್ರಾಸ್ತಾವಿಕ ನುಡಿಗಳನ್ನು ಹಂಚಿಕೊಂಡರು,

ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಮಾನವ ಹಕ್ಕುಗಳ ಶಿಕ್ಷಣ ಮತ್ತು ಮೇಲ್ವಿಚಾರಣೆ ಘಟಕ ಸೀಕ್ರಂ ಸಂಸ್ಥೆ ಯ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾ ಸಂಯೋಜಕರಾದ ಮೀನಾಕ್ಷಿ ತಳವಾರ್, ವಕೀಲರು ಸುನಿತಾ ಹೊನ್ನೆನ್ನವರ್, ರಕ್ಷಣಾ ವೇದಿಕೆಯ ಯುವಸೇನಾ ಅಧ್ಯಕ್ಷರಾದ ಮಹಿಳಾ ಅಧ್ಯಕ್ಷರಾದ ಸಂಗೀತಾ ಕಾಂಬ್ಳೆ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಮೇತ್ರಿ, ಶ್ರೀಮತಿ ಮಾಲಾ ಸುಂದರ್ ರಾಜ್ ಪೂಜಾರ, ಸುಧಾ ಇಟ್ನಾಳ ವಿದ್ಯಾರ್ಥಿನಿ, ಜನಾಬಾಯಿ ಸಿಂಧಿ, ಫಾತಿಮಾ ಶೇಖ್, ಪಾರ್ವತಿ ನಿಪ್ಪನಿಕರ್, ಎಲ್ಲಾ ಮಹಿಳೆಯರು
ವಂದನಾರ್ಪಣೆ: ಹೆಣ್ಣು ಜೀವನಕ್ಕೆ ತಾಯಿಯಾಗಿ, ಸಹಕಾರಕ್ಕೆ ಸಹೋದರಿಯಾಗಿ, ಸ್ನೇಹಿತೆಯಾಗಿ ,ಸಂಸ್ಕಾರಕ್ಕೆ ಮಗಳಾಗಿ ಜನನದಿಂದ ಮರಣದವರೆಗೂ ಜೊತೆಯಾಗಿ ಬರುವ ಹೆಣ್ಣು ನಮ್ಮ ಬದುಕಿನ ಕಣ್ಣು ಎಂದು ಹೇಳುತ್ತಾ ಮಹಿಳಾ ದಿನಾಚರಣೆಗೆ ಆಗಮಿಸಿದ ಎಲ್ಲಾ ಅತಿಥಿಗಳು, ತಾಯಂದಿರು, ಸಹೋದರಿಯರು, ಹಾಗೂ ಸ್ನೇಹಿತರಿಗೂ ವಂದನೆಗಳನ್ನು ಸಲ್ಲಿಸುತ್ತಾ ಸುನಿತಾ ಹೊನ್ನವರ್ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.