Belagavi News In Kannada | News Belgaum

ಜಪಾನ್ ಶಾಲೆಗಳಲ್ಲಿ ಪೋನಿಟೇಲ್ ಹೇರ್‌ಸ್ಟೈಲ್ ಬ್ಯಾನ್

ಟೋಕಿಯೋ: ಹುಡುಗಿಯರಿಗೆ ಹೆಚ್ಚು ಸುಲಭ ಹಾಗೂ ಆರಾಮ ಎನಿಸುವ ಕೇಶವಿನ್ಯಾಸವೆಂದರೆ ಪೋನಿಟೇಲ್. ನೀಳವಾದ ಕೂದಲಿದ್ದೂ ಪೋನಿಟೇಲ್ ಹಾಕದಿರುವ ಮಹಿಳೆ ಇರಲು ಸಾಧ್ಯವೇ ಇಲ್ಲ. ಹೀಗಿರುವಾಗ ಜಪಾನ್ ದೇಶದ ಶಾಲೆಗಳಲ್ಲಿ ಪೋನಿಟೇಲ್ ಹೇರ್ ಸ್ಟೈಅನ್ನು ಬ್ಯಾನ್ ಮಾಡಲಾಗಿದೆ.
ಮಹಿಳೆಯರ ಕತ್ತಿನ ಭಾಗ ಪುರುಷರಿಗೆ ಹೆಚ್ಚಿನ ಲೈಂಗಿಕ ಪ್ರಚೋದನೆ ನೀಡುತ್ತದೆ. ಮಹಿಳೆಯರು ಪೋನಿಟೇಲ್ ಹಾಕಿಕೊಂಡಲ್ಲಿ ಕತ್ತು ಸಂಪೂರ್ಣವಾಗಿ ಕಾಣಿಸಿಕೊಳ್ಳುತ್ತದೆ ಎಂಬ ಕಾರಣಕ್ಕೆ ಜಪಾನ್‌ನ ಶಾಲೆಗಳಲ್ಲಿ ಮಕ್ಕಳು ಪೋನಿಟೇಲ್ ಹೇರ್ ಸ್ಟೈಲ್ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿದೆ.
ಈ ಹಿಂದೆ ಜಪಾನ್‌ನ ಪುಕುವೋಕಾ ಪ್ರದೇಶದಲ್ಲಿ ಒಂದು ಸಮೀಕ್ಷೆ ನಡೆಸಲಾಗಿತ್ತು. ಹುಡುಗಿಯರ ಕತ್ತು ಹುಡುಗರಿಗೆ ಹೆಚ್ಚು ಲೈಂಗಿಕ ಪ್ರಚೋದನೆ ನೀಡುತ್ತದೆ ಎಂಬ ವಿಚಾರ ಸಮೀಕ್ಷೆಯ ಮುಖಾಂತರ ಕಂಡುಕೊಳ್ಳಲಾಗಿತ್ತು. ಬಳಿಕ ಅಲ್ಲಿನ ಕೆಲವು ಶಾಲೆಗಳಲ್ಲಿ ಪೋನಿಟೇಲ್ ಅನ್ನು ನಿರ್ಬಂಧಿಸಲಾಗಿತ್ತು. ಅದರೊಂದಿಗೆ ಲಂಗದ ಉದ್ದ, ಸಾಕ್ಸ್ಗಳ ಬಗ್ಗೆಯೂ ನಿಯಮಗಳನ್ನು ಮಾಡಲಾಗಿತ್ತು.//////