Belagavi News In Kannada | News Belgaum

ಕಾಲುವೆ ಕುಸಿತ ಸ್ಥಳಕ್ಕೆ ಶಾಸಕ ರಾಜುಗೌಡ ಭೇಟಿ

ಹುಣಸಗಿ: ತಾಲೂಕಿನ ಬಸವಸಾಗರ ಆಣೆಕಟ್ಟು ಎಡ ದಂಡೆ ಕಿಲೊಮೀಟರ್ 61 ಮತ್ತು 62 ರ ಮದ್ಯ ಕಾಲುವೆ ಕುಸಿತ ಸ್ಥಳಕ್ಕೆ ಶಾಸಕ ಹಾಗೂ ನಗರ ನೀರು ಸರಬರಾಜು ಒಳ ಚರಂಡಿ ಮಂಡಳಿಯ ಅಧ್ಯಕ್ಷ ರಾಜುಗೌಡ ಭೇಟಿ ನೀಡಿ ತಾತ್ಕಾಲಿಕ ಕಾಮಗಾರಿಗಳನ್ನು ಪರಿಶೀಲಿಸಿದರು.

ಬೇಸಿಗೆ ಹಂಗಾಮಿನ ವಾರಾಬಂದಿ ಮೂಲಕ ಹರಿಸುವ ನೀರನ್ನು ಕುಸಿತದ ಸ್ಥಳದಲ್ಲಿ ತಾತ್ಕಾಲಿಕ ಮರಳು ತುಂಬಿದ ಚೀಲಗಳ ತಡೆ ನಿರ್ಮಿಸಿ ರೈತರಿಗೆ ಅನಕೂಲವಾಗುವಂತೆ ನೀರು ಹರಿಸಲು ಅಧಿಕಾರಿಗಳಿಗೆ ತಿಳಿಸಿದರು. ನಂತರ ಶಾಶ್ವತ ವ್ಯವಸ್ಥೆಗಾಗಿ ಸರಕಾರ ಹಾಗೂ ತಾಂತ್ರಿಕ ಅಧಿಕಾರಿಗಳೊಂದಿ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಸಿದ್ದನಗೌಡ ಪಾಟೀಲ ಕರಿಭಾವಿ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಇದ್ದರು.