Belagavi News In Kannada | News Belgaum

ಜ್ಞಾನ ಸಿದ್ದಿಗೆ ಸುಖ ತ್ಯಾಗ – ಡಾ|| ಅಲ್ಲಮ ಪ್ರಭು ಮಹಾಸ್ವಾಮಿಗಳು

ಬೆಳಗಾವಿ-12 “ ಸಾಧಕನಿಗೆ ಸುಖ ಬೇಕಾದರೆ ವಿದ್ಯೆ ತ್ಯಾಗ ಮಾಡಬೇಕು, ವಿದ್ಯೆ ಬೇಕಾದರೆ ಸುಖ ತ್ಯಾಗ ಮಾಡಬೇಕು” ಪಿಯುಸಿ ಶಿಕ್ಷಣ ವಿದ್ಯಾರ್ಥಿ ಜೀವನದಲ್ಲಿ ಬದಲಾವಣೆ ಹಂತ ಈ ಅವಧಿಯಲ್ಲಿ ಕಷ್ಟಪಟ್ಟು ಅಧ್ಯಯನ ಮಾಡಿ, ಜ್ಞಾನ ಸಂಪಾದಿಸಬೇಕೆಂದು ಗುರು-ಶಿಷ್ಯ ಸಂಬಂಧ ತಂದೆ ತಾಯಿ ಮಕ್ಕಳ ಪ್ರೀತಿ ವಾತ್ಸಲ್ಯವಿದ್ದಂತೆ ಎಂದು ಬೆಳಗಾವಿಯ ನಾಗನೂರು ಶ್ರೀ ರುದ್ರಾಕ್ಷಿಮಠದ ಪೂಜ್ಯಶ್ರೀ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು ಆಶೀರ್ವಚನ ಕರುಣಿಸಿದರು.

 

ಸ್ಥಳೀಯ ಶಿವಬಸವನಗರದಲ್ಲಿ ನಡೆದ ಶ್ರೀ ಸಿದ್ಧರಾಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಿ ಮಾತನಾಡಿದರು.

 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಗಾವಿ ಲೋಕಾಯುಕ್ತ ಎಸ್. ಪಿ. ಶ್ರೀಮತಿ ಯಶೋಧಾ ವಂಟಗೋಡಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಶ್ರೀ ರುದ್ರಾಕ್ಷಿಮಠದ ಈ ಶ್ರೀ ಸಿದ್ಧರಾಮೇಶ್ವರ ಶಿಕ್ಷ ಣ ಸಂಸ್ಥೆಯಲ್ಲಿ ಪೂಜ್ಯಶ್ರೀ ಶಿವಬಸವ ಮಹಾಸ್ವಾಮಿಗಳವರ ತಪೋ ಬಲದಿಂದ ಇಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಾಗಿರುತ್ತದೆ. ಹಾಗಾಗಿ ಈ ಸಂಸ್ಥೆಯಲ್ಲಿ ಓದುತ್ತಿರುವವರು ಪುಣ್ಯವಂತರು. ಹೆಣ್ಣು-ಗಂಡು ಎಂ¨s ತಾರತಮ್ಯ ಭಾವನೆ ಬೇಡ, ಇಬ್ಬರೂ ಆರೋಗ್ಯಕರ ಸ್ಪರ್ಧಾ ಮನೋಭಾವನೆ ಬೆಳೆಸಿಕೋಳ್ಳಿ.
“ ಓದಿಸುವವರಿಗಿಂತ, ಓದುವವರಿಗೆ ಆಸಕ್ತಿಯಿರಬೇಕು ”ಎಂದರು.

 

ಮತ್ತೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕನ್ನಡದ ಅಭಿಮಾನಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಶ್ರೀ ಶಿವಾನಂದ ಮಗದುಮ್ಮ ಅವರು “ ವಿದ್ಯಾರ್ಥಿ ಜೀವನದಲ್ಲಿ ಸಾಧಿಸುವ ಛಲವಿರಬೇಕು. ಜ್ಞಾನದ ಜೊತೆಗೆ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕೆಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಚೇರಮನ್‍ರಾದ ಪ್ರೊ. ಎಮ್. ಆರ್. ಉಳ್ಳೇಗಡ್ಡಿ ಅವರು ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ನಗದು ಬಹುಮಾನ ನೀಡಿ, ದುಡಿಮೆ, ಪರಿಶ್ರಮ, ನಿಷ್ಠೆಯಿಂದ ಅಧ್ಯಯನ ಮಾಡಿ, ಓದುವದನ್ನು ಒಂದು ತಪಸ್ವನ್ನಾಗಿ ಮಾಡಿಕೊಳ್ಳಿ ಪ್ರಯತ್ನ ಪಡದೇ ಯಾವುದೂ ಸಿದ್ದಿಯಾಗದು ಎಂದರು. ಸರಕಾರದ “ ಸರ್ವೊತ್ತಮ ” ಪ್ರಶಸ್ತಿ ಪಡೆದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ರವಿ ಪರವಿನಾಯ್ಕರವರನ್ನು, ಪೂಜ್ಯಶ್ರೀ ಡಾ. ಅಲ್ಲಮ ಪ್ರಭು ಮಹಾಸ್ವಾಮಿಗಳು ಸನ್ಮಾನಿಸಿದರು.

 

ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ವಿಶ್ರಾಂತ ಪ್ರಾಧ್ಯಾಪಕ, ಗಣಿತ ಶಾಸ್ತ್ರಜ್ಞ ಪ್ರೊ. ಬಿ.ಎಂ. ಬೆಳಗಲ್ಲಿ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಸಂಸ್ಥೆಯಲ್ಲಿ 1 ಲಕ್ಷ ರೂ.ಗಳನ್ನು ಠೇವಣಿಯಾಗಿ ಇಡುವದನ್ನು ವಾಗ್ದಾನ ಮಾಡಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸಿದ್ಧರಾಮರೆಡ್ಡಿ, ಅವರು ಪೂಜ್ಯರಿಗೆ ಮಾಲಾರ್ಪಣೆ ಮಾಡಿ, ಅತಿಥಿಗಳಿಗೆ ಗ್ರಂಥ ಪುಷ್ಪಾರ್ಪಣೆ ಮಾಡಿದರು.
ಸಂಸ್ಥೆಯ ಕಾರ್ಯದರ್ಶಿ ಕೆ. ಬಿ. ಹಿರೇಮಠ, ಸದಸ್ಯರಾದ ಆರ್. ಬಿ. ಪಾಟೀಲ, ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಪ್ರವೀಣ ಪಾಟೀಲ ಉಪಸ್ಥಿತರಿದ್ದರು. ಉಪನ್ಯಾಸಕರಾದ ಎ. ಕೆ. ಪಾಟೀಲ ಅವರು ಸ್ವಾಗತಿಸಿ, ವರದಿ ವಾಚನ ಮಾಡಿದರು. ಗಿರಿಜಾ ಸುಂಕದ, ಶಶಿಕಲಾ ಹುಬ್ಬಳ್ಳಿ ಇವರು ಕಾರ್ಯಕ್ರಮ ನಿರೂಪಿಸಿದರು. ಕುಮಾರಿ. ಕೀರ್ತಿ ಕರೀಕಟ್ಟಿ ವಂದಿಸಿದರು.